ಸೈಮಾ ಅವಾರ್ಡ್ಸ್ 2022: ಅತ್ಯುತ್ತಮ ನಟ ಪುನೀತ್ ರಾಜ್‌ಕುಮಾರ್, ಅತ್ಯುತ್ತಮ ನಟಿ ಆಶಿಕಾ ರಂಗನಾಥ್

10ನೇ ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ (SIIMA) ಕಾರ್ಯಕ್ರಮ ಶನಿವಾರ ಬೆಂಗಳೂರಿನಲ್ಲಿ ನಡೆಯಿತು. ಸೆಪ್ಟೆಂಬರ್ 10 ರಂದು ತೆಲುಗು ಮತ್ತು ಕನ್ನಡ ಚಲನಚಿತ್ರಗಳ ವಿಜೇತರನ್ನು ಘೋಷಿಸಲಾಯಿತು. ಯುವರತ್ನ ಸಿನಿಮಾದಲ್ಲಿನ ನಟನೆಗಾಗಿ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ.
ಪುನೀತ್ ರಾಜ್‌ಕುಮಾರ್ - ಆಶಿಕಾ ರಂಗನಾಥ್
ಪುನೀತ್ ರಾಜ್‌ಕುಮಾರ್ - ಆಶಿಕಾ ರಂಗನಾಥ್

10ನೇ ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ (SIIMA) ಕಾರ್ಯಕ್ರಮ ಶನಿವಾರ ಬೆಂಗಳೂರಿನಲ್ಲಿ ನಡೆಯಿತು. ದಕ್ಷಿಣ ಚಿತ್ರರಂಗದ ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಮತ್ತು ಇತರ ಸೆಲೆಬ್ರಿಟಿಗಳು ಒಂದೇ ಸೂರಿನಡಿ ಸೇರಿದ್ದರು. ಸೆಪ್ಟೆಂಬರ್ 10 ರಂದು ತೆಲುಗು ಮತ್ತು ಕನ್ನಡ ಚಲನಚಿತ್ರಗಳ ವಿಜೇತರನ್ನು ಘೋಷಿಸಲಾಯಿತು. ಯುವರತ್ನ ಸಿನಿಮಾದಲ್ಲಿನ ನಟನೆಗಾಗಿ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ.

ಪುಷ್ಪಾ ಚಿತ್ರದಲ್ಲಿನ ಅಪ್ರತಿಮ ಅಭಿನಯಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ಈ ಬ್ಲಾಕ್‌ಬಸ್ಟರ್ ಸಿನಿಮಾ ವಿವಿಧ ವಿಭಾಗಗಳ ಅಡಿಯಲ್ಲಿ ಗರಿಷ್ಠ ಸಂಖ್ಯೆಯ ಟ್ರೋಫಿಗಳನ್ನು ಗಳಿಸಿದೆ.

SIIMA 2022ರ ಕನ್ನಡ ಚಿತ್ರರಂಗದ ವಿಜೇತರ ಪಟ್ಟಿ

ಅತ್ಯುತ್ತಮ ನಟ (ಕನ್ನಡ): ಪುನೀತ್ ರಾಜ್​ಕುಮಾರ್ (ಯುವರತ್ನ)

ಅತ್ಯುತ್ತಮ ನಟಿ (ಕನ್ನಡ): ಆಶಿಕಾ ರಂಗನಾಥ್ (ಮದಗಜ)

ಅತ್ಯುತ್ತಮ ನಟಿ- ಕ್ರಿಟಿಕ್ಸ್​ - ಅಮೃತಾ ಅಯ್ಯಂಗಾರ್ (ಬಡವ ರಾಸ್ಕಲ್)

ಅತ್ಯುತ್ತಮ ಪೋಷಕ ನಟ - ಪ್ರಮೋದ್ (ರತ್ನನ್ ಪ್ರಪಂಚ)

ಅತ್ಯುತ್ತಮ ಪೋಷಕ ನಟಿ: ಆರೋಹಿ ನಾರಾಯಣ್ (ದೃಶ್ಯ 2)

ಅತ್ಯುತ್ತಮ ಖಳನಾಯಕ-  ಪ್ರಮೋದ್ ಶೆಟ್ಟಿ(ಹೀರೋ)

ಅತ್ಯುತ್ತಮ ಹಾಸ್ಯ ನಟ- ಚಿಕ್ಕಣ್ಣ (ಪೊಗರು)

ಅತ್ಯುತ್ತಮ ಚೊಚ್ಚಲ ನಟ- ನಾಗಭೂಷಣ್ (ಇಕ್ಕಟ್)

ಅತ್ಯುತ್ತಮ ಚೊಚ್ಚಲ ನಟಿ - ಶರಣ್ಯಾ ಶೆಟ್ಟಿ (1980)

ಅತ್ಯುತ್ತಮ ನಿರ್ದೇಶನ- ತರುಣ್ ಸುಧೀರ್ (ರಾಬರ್ಟ್​)

ಅತ್ಯುತ್ತಮ ಚೊಚ್ಚಲ ನಿರ್ದೇಶನ - ಶಂಕರ್ ಗುರು (ಬಡವ ರಾಸ್ಕಲ್)

ಅತ್ಯುತ್ತಮ ಸಿನಿಮಾಟೋಗ್ರಾಫರ್ - ಸುಧಾಕರ್ ರಾಜ್ (ರಾಬರ್ಟ್)

ಅತ್ಯುತ್ತಮ ಸಂಗೀತ ನಿರ್ದೇಶಕ: ಅರ್ಜುನ್ ಜನ್ಯ- ‘ರಾಬರ್ಟ್​’

ಅತ್ಯುತ್ತಮ ಹಿನ್ನೆಲೆ ಗಾಯಕಿ- ಚೈತ್ರಾ ಆಚಾರ್ (ಗರುಡ ಗಮನ ವೃಷಭ ವಾಹನ ಚಿತ್ರದ ಸೋಜುಗಾದ ಸೂಜುಮಲ್ಲಿಗೆ ಹಾಡು)

ಅತ್ಯುತ್ತಮ ಹಿನ್ನೆಲೆ ಗಾಯಕ- ಅರ್ಮಾನ್ ಮಲಿಕ್ ಮತ್ತು ತಮನ್ ಎಸ್ (ಯುವರತ್ನ ಸಿನಿಮಾದ ನೀನಾದೆ ನಾ ಹಾಡು)

ಇವುಗಳ ಜೊತೆಗೆ ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಛಾಪು ಮೂಡಿಸಿದ ಸೆಲೆಬ್ರಿಟಿಗಳನ್ನು ಗೌರವಿಸಲು ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು.

ವಿಶೇಷ ಮೆಚ್ಚುಗೆ ಪ್ರಶಸ್ತಿ - ನಿರ್ಮಾಪಕರು (ಕನ್ನಡಿಗ) #OmkaarMovies

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಹಿಂದಿ ನಟ- ರಣವೀರ್ ಸಿಂಗ್

ಯೂತ್ ಐಕಾನ್ ಸೌತ್ (ಮಹಿಳೆ) - ಪೂಜಾ ಹೆಗ್ಡೆ

ಯೂತ್ ಐಕಾನ್ ಸೌತ್ (ಪುರುಷ) - ವಿಜಯ್ ದೇವರಕೊಂಡ

ಕನ್ನಡ ಚಿತ್ರರಂಗದ ಸೆನ್ಸೇಶನ್ 2021 - ಧನಂಜಯ

ಅತ್ಯಂತ ಭರವಸೆಯ ಹೊಸ ನಟಿ - ಶ್ರೀಲೀಲಾ

ಅತ್ಯಂತ ಭರವಸೆಯ ಹೊಸ ನಟ - ತೇಜ ಸಜ್ಜ

SIIMA 2022ರ ತೆಲುಗು ಚಿತ್ರರಂಗದ ವಿಜೇತರ ಪಟ್ಟಿ

ಅತ್ಯುತ್ತಮ ಚಿತ್ರ - ಪುಷ್ಪ: ದಿ ರೈಸ್

ಅತ್ಯುತ್ತಮ ನಟ - ಅಲ್ಲು ಅರ್ಜುನ್ (ಪುಷ್ಪ: ದಿ ರೈಸ್‌)

ಅತ್ಯುತ್ತಮ ನಟ - ಕ್ರಿಟಿಕ್ಸ್ - ನವೀನ್ ಪೋಲಿಶೆಟ್ಟಿ (ಜಾತಿ ರತ್ನಾಲು)

ಅತ್ಯುತ್ತಮ ನಟಿ - ಪೂಜಾ ಹೆಗ್ಡೆ (ಮೋಸ್ಟ್ ಎಲಿಜಿಬಲ್ ಬ್ಯಾಚುಲರ್)

ಅತ್ಯುತ್ತಮ ಪೋಷಕ ನಟ - ಜಗದೀಶ್ ಪ್ರತಾಪ್ ಬಂಡಾರಿ (ಪುಷ್ಪ: ದಿ ರೈಸ್‌)

ಅತ್ಯುತ್ತಮ ಪೋಷಕ ನಟಿ - ವರಲಕ್ಷ್ಮಿ ಶರತ್‌ಕುಮಾರ್ (ಕ್ರ್ಯಾಕ್‌)

ಅತ್ಯುತ್ತಮ ಹಾಸ್ಯ ನಟ- ಸುದರ್ಶನ್ (ಏಕ್ ಮಿನಿ ಕಥೆ)

ಅತ್ಯುತ್ತಮ ನಿರ್ದೇಶಕ - ಸುಕುಮಾರ್ (ಪುಷ್ಪ: ದಿ ರೈಸ್)

ಅತ್ಯುತ್ತಮ ಚೊಚ್ಚಲ ನಿರ್ದೇಶಕ - ಬುಚ್ಚಿ ಬಾಬು ಸನಾ (ಉಪ್ಪೆನಾ)

ಅತ್ಯುತ್ತಮ ಸಿನಿಮಾಟೋಗ್ರಾಫರ್ - ಸಿ.ರಾಮಪ್ರಸಾದ್ (ಅಖಂಡ)

ಅತ್ಯುತ್ತಮ ಚೊಚ್ಚಲ ನಿರ್ಮಾಪಕ ಪ್ರಶಸ್ತಿ - ಸತೀಶ್ ವೇಗೇಶ್ನಾ (SV2 ಎಂಟರ್ಟೈನ್ಮೆಂಟ್)

ಅತ್ಯುತ್ತಮ ಸಂಗೀತ ನಿರ್ದೇಶಕ - ದೇವಿ ಶ್ರೀ ಪ್ರಸಾದ್ (ಪುಷ್ಪ: ದಿ ರೈಸ್)

ಅತ್ಯುತ್ತಮ ಚೊಚ್ಚಲ ನಟಿ - ಕೃತಿ ಶೆಟ್ಟಿ (ಉಪ್ಪೇನಾ)

ಅತ್ಯುತ್ತಮ ಹಿನ್ನೆಲೆ ಗಾಯಕಿ - ಗೀತಾ ಮಾಧುರಿ (ಅಖಂಡದ ಜೈ ಬಾಲಯ್ಯ ಹಾಡು)

ಅತ್ಯುತ್ತಮ ಹಿನ್ನೆಲೆ ಗಾಯಕ - ರಾಮ್ ಮಿರಿಯಾಲ (ಜಾತಿ ರತ್ನಾಲು ಚಿತ್ರದ ಚಿಟ್ಟಿ ಹಾಡು)

ಅತ್ಯುತ್ತಮ ಗೀತರಚನೆಕಾರ - ಚಂದ್ರಬೋಸ್ (ಪುಷ್ಪ: ದಿ ರೈಸ್‌ ಚಿತ್ರದ ಶ್ರೀವಲ್ಲಿ ಹಾಡು)

ನಿರ್ಮಾಣ ವಿನ್ಯಾಸಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿ - ಪುಷ್ಪ: ದಿ ರೈಸ್, ತಲೈವಿ, ಮತ್ತು ಉಪ್ಪೆನಾ

ಸೆಪ್ಟೆಂಬರ್ 10 ರಂದು ತೆಲುಗು ಮತ್ತು ಕನ್ನಡ ಚಿತ್ರರಂಗದ ಪ್ರಮುಖ ವಿಭಾಗಗಳಿಗೆ ಪ್ರಶಸ್ತಿಗಳನ್ನು ನೀಡಲಾಗಿದ್ದು, ಸೆಪ್ಟೆಂಬರ್ 11 ರಂದು ತಮಿಳು ಮತ್ತು ಮಲಯಾಳಂ ಸಿನಿಮಾಗಳ ವಿಜೇತರನ್ನು ಘೋಷಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com