ಉಪೇಂದ್ರ 1990ರಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದರು: ರಾಣಾ ದಗ್ಗುಬಾಟಿ

ಉಪೇಂದ್ರ ಅವರ ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಕ್ಕೆ ಬೆಂಗಳೂರಿಗೆ ಬಂದಿದ್ದು ನನಗೆ ಹೆಮ್ಮೆ ಆಗುತ್ತಿದೆ. ಅವರ ಮುಂದೆ ನಾವು ಪ್ಯಾನ್‌ ಇಂಡಿಯಾ ಸಿನಿಮಾ, ಸ್ಟಾರ್‌ಗಳು ಅಂತ ನಿಲ್ಲಕ್ಕೆ ಭಯ ಆಗುತ್ತದೆ. ಯಾಕೆಂದರೆ 90ರಲ್ಲೇ ಅವರ ಚಿತ್ರಗಳನ್ನು ತೆಲುಗಿನಲ್ಲಿ ಡಬ್‌ ವರ್ಷನ್‌ ನೋಡುತ್ತಿದ್ದೆ.
ಕಬ್ಜ ಟೀಸರ್ ಬಿಡುಗಡೆ ಮಾಡಿದ ರಾಣಾ ದಗ್ಗುಬಾಟಿ
ಕಬ್ಜ ಟೀಸರ್ ಬಿಡುಗಡೆ ಮಾಡಿದ ರಾಣಾ ದಗ್ಗುಬಾಟಿ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿರುವ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಬಹುಭಾಷಾ ನಟ ರಾಣಾ ದಗ್ಗುಬಾಟಿ ಆಗಮಿಸಿದ್ದರು.

ಈ ವೇಳೆ  ಮಾತನಾಡಿದ ಅವರು, ಉಪೇಂದ್ರ ಅವರ ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಕ್ಕೆ ಬೆಂಗಳೂರಿಗೆ ಬಂದಿದ್ದು ನನಗೆ ಹೆಮ್ಮೆ ಆಗುತ್ತಿದೆ. ಅವರ ಮುಂದೆ ನಾವು ಪ್ಯಾನ್‌ ಇಂಡಿಯಾ ಸಿನಿಮಾ, ಸ್ಟಾರ್‌ಗಳು ಅಂತ ನಿಲ್ಲಕ್ಕೆ ಭಯ ಆಗುತ್ತದೆ. ಯಾಕೆಂದರೆ 90ರಲ್ಲೇ ಅವರ ಚಿತ್ರಗಳನ್ನು ತೆಲುಗಿನಲ್ಲಿ ಡಬ್‌ ವರ್ಷನ್‌ ನೋಡುತ್ತಿದ್ದೆ.

ಆಗಲೇ ಅವರು ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿದ್ದಾರೆ. ನಾನು ಉಪೇಂದ್ರ ಅವರ ದೊಡ್ಡ ಅಭಿಮಾನಿ ಕೂಡ. ಅವರ ನಟನೆಯ ‘ಕಬ್ಜ’ ಸಿನಿಮಾ ಖಂಡಿತ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತದೆ. ‘ಕಬ್ಜ’ ಚಿತ್ರದ ನಂತರ ಕನ್ನಡ ಚಿತ್ರರಂಗದಂತ್ತ ಇನ್ನಷ್ಟುದೊಡ್ಡ ಮಟ್ಟದಲ್ಲಿ ಇಡೀ ಇಂಡಿಯಾ ತಿರುಗಿ ನೋಡುತ್ತದೆ.

ಇದು ಕನ್ನಡಿಗರ ಪ್ಯಾನ್‌ ಇಂಡಿಯಾ ಸಿನಿಮಾ. ಅದ್ದೂರಿ ಮೇಕಿಂಗ್‌, ಯಾವ ಭಾಷೆಗೂ ಕಡಿಮೆ ಇಲ್ಲ ಎನ್ನುವಂತೆ ವಿಷುವಲ್‌ ಕ್ವಾಲಿಟಿ ಕೊಡಬೇಕು ಎಂಬುದು ನನ್ನ ಕನಸು ಆಗಿತ್ತು. ಅದು ‘ಕಬ್ಜ’ ಚಿತ್ರದಲ್ಲಿ ಈಡೇರಿದೆ. ಟೀಸರ್‌ ನೋಡಿ ಬೇರೆ ಬೇರೆ ಚಿತ್ರಗಳ ಜತೆಗೆ ಹೋಲಿಕೆ ಮಾಡುವವರಿಗೆ ನಾನು ಉತ್ತರಿಸಲ್ಲ. ಹೋಲಿಕೆ ಮಾಡೋದಿದ್ದರೆ ಎವರೆಸ್ಟ್‌ಗೆ ಹೋಲಿಸಿ, ಗುಡ್ಡಕ್ಕೆ ಹೋಲಿಕೆ ಮಾಡಬೇಡಿ. ಈ ಚಿತ್ರದಲ್ಲಿ ನಟ ಸುದೀಪ್‌ ಪಾತ್ರ ಹೇಗಿರುತ್ತದೆ ಎಂದರೆ ಬಂಗಾರದ ಕಿರೀಟದಲ್ಲಿ ಡೈಮಂಡ್‌ ಇದ್ದಂತೆ.

ನಿರ್ದೇಶಕ ಚಂದ್ರು ಅವರ ಪ್ರಯತ್ನವನ್ನು ಶ್ಲಾಘಿಸಿದ ರಾಣಾ ಅವರು ಸ್ಯಾಂಡಲ್‌ವುಡ್ ಮತ್ತು ಭಾರತೀಯ ಚಿತ್ರರಂಗದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. “ಕನ್ನಡ ಚಲನಚಿತ್ರಗಳು ಇಷ್ಟು ಸುಂದರವಾಗಿ ಮುಂಚೂಣಿಗೆ ಬಂದಿವೆ, 10 ವರ್ಷಗಳ ಹಿಂದೆ ಭಾರತೀಯ ಚಿತ್ರರಂಗ ಒಂದಾಗಬೇಕು ಮತ್ತು ದಕ್ಷಿಣ ಭಾರತದ ಚಿತ್ರರಂಗ ಗಡಿಯಿಲ್ಲದೆ ಚಲಿಸಬೇಕು ಎಂಬ ಕನಸು ಇತ್ತು ಮತ್ತು ಇಂದು ಅದು ನಿಜವಾಗಿದೆ ಎಂದರು.

ನಾವು ನಮ್ಮ ಸಾಮರ್ಥ್ಯವನ್ನು ತೋರಿಸಬೇಕು ಮತ್ತು ವಿಶ್ವದ ಅತಿದೊಡ್ಡ ಚಲನಚಿತ್ರ ರಾಷ್ಟ್ರವಾಗಬೇಕು ”ಎಂದು ರಾಣಾ ಹೇಳಿದರು, ತಮ್ಮ ಸಹೋದರಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರು ಕೂಲ್ ಸಿಟಿ, ಪಾರ್ಟಿ ಮಾಡಲು ಸೂಪರ್ ಜಾಗ ಎಂದು ಬೆಂಗಳೂರನ್ನು ಹಾಡಿ ಹೊಗಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com