ಗುರು ಶಿಷ್ಯರು ಚಿತ್ರ ಕ್ರೀಡೆ ಮತ್ತು ಮನರಂಜನೆಯ ಹೂರಣ: ನಟ ಶರಣ್

ವೃತ್ತಿ ಜೀವನದ ಆರಂಭದಲ್ಲಿ ಕಾಮಿಡಿಯನ್ ಆಗಿ ನಂತರ ಹಿರೋ ಆಗಿ ಬಡ್ತಿ ಪಡೆದ ಶರಣ್ ಸ್ಯಾಂಡಲ್ ವುಡ್ ನ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಅವರು ಹೀರೋ ಆಗಿರುವ ಚಿತ್ರದಲ್ಲಿ ಹಾಸ್ಯವೇ ಜೀವಾಳ. ಆದಾಗ್ಯೂ, ಶರಣ್ ಇದೀಗ ವಿಭಿನ್ನ ಪಾತ್ರ ಪ್ರಯೋಗ ಮೂಲಕ ತಮ್ಮಲ್ಲಿನ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
ಗುರು ಶಿಷ್ಯರು ಚಿತ್ರದಲ್ಲಿ ನಟ ಶರಣ್
ಗುರು ಶಿಷ್ಯರು ಚಿತ್ರದಲ್ಲಿ ನಟ ಶರಣ್

ವೃತ್ತಿ ಜೀವನದ ಆರಂಭದಲ್ಲಿ ಕಾಮಿಡಿಯನ್ ಆಗಿ ನಂತರ ಹಿರೋ ಆಗಿ ಬಡ್ತಿ ಪಡೆದ ಶರಣ್ ಸ್ಯಾಂಡಲ್ ವುಡ್ ನ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಅವರು ಹೀರೋ ಆಗಿರುವ ಚಿತ್ರದಲ್ಲಿ ಹಾಸ್ಯವೇ ಜೀವಾಳ. ಆದಾಗ್ಯೂ, ಶರಣ್ ಇದೀಗ ವಿಭಿನ್ನ ಪಾತ್ರ ಪ್ರಯೋಗ ಮೂಲಕ ತಮ್ಮಲ್ಲಿನ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.

ಜಡೇಶಾ ಕೆ ಹಂಪಿ ಅವರ ಗುರು ಶಿಷ್ಯರು ಇಂತಹ ಸಿನಿಮಾಗಳಲ್ಲಿ ಒಂದಾಗಿದ್ದು, ಶರಣ್ ಅವರ ವಿಶಿಷ್ಠ ಪ್ರತಿಭೆ ಪ್ರದರ್ಶನಗೊಂಡಿದೆ. ನಿರ್ದೇಶಕ ತರುಣ್ ಸುಧೀರ್ ಸಹ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಶರಣ್ ದೈಹಿಕ ಶಿಕ್ಷಕರಾಗಿ ಅಭಿನಯಿಸಿದ್ದಾರೆ. ನಾಳೆ (ಸೆ.23) ಈ ಸಿನಿಮಾ ತೆರೆ ಮೇಲೆ ಬರುತ್ತಿದೆ.

ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಶರಣ್, 'ಗುರುಶಿಷ್ಯರು ನನ್ನ ವಲಯದೊಳಗೆ ಅದ್ಬುತ ಸಿನಿಮಾವಾಗಿದೆ. ಇದೊಂದು ವಿಭಿನ್ನವಾದ ಗೇಮ್ ಆಗಿದೆ. ಈ ಚಿತ್ರದಲ್ಲಿ ಶರಣ್ ಅವರ ಸಾಮಾನ್ಯ ಮ್ಯಾನರೀಸಂ ಇಲ್ಲಿ ಹೆಚ್ಚಾಗಿ ನೋಡುವುದಕ್ಕೆ ಆಗಲ್ಲ. ಖೋ ಖೋ ಗೇಮ್ ನೊಂದಿಗೆ ಎಂಟರ್ ಟೈನ್ ಮೆಂಟ್ ಕೂಡಾ ಇರಲಿದೆ ಎಂದು ತಿಳಿಸಿದರು. 

<strong>ತರುಣ್ ಕಿಶೋರ್ ಸುಧೀರ್</strong>
ತರುಣ್ ಕಿಶೋರ್ ಸುಧೀರ್

ಖೋ ಖೋ ವಿಷಯಾಧಾರಿತದ ಸಿನಿಮಾದ ಕ್ರೇಡಿಟ್ ನಿರ್ದೇಶಕ ಜಡೇಶಾ ಮತ್ತು ತರುಣ್ ಅವರಿಗೆ ಸಲ್ಲಬೇಕು. ಎಲ್ಲವೂ ವಿಭಿನ್ನವಾಗಿದೆ. ಹೊಸತನದತ್ತ ಗಮನ ನೀಡಲಾಗಿದೆ. ಈ ಸಿನಿಮಾದಲ್ಲಿನ ಅಭಿನಯ ಹೊಸ ವಿಧದ ಅಭಿನಯವನ್ನು ಕಲಿಸಿದೆ. ದೈಹಿಕ ಸವಾಲಿನಿಂದ ಕೂಡಿದ ಪಾತ್ರವಾಗಿತ್ತು. ಗುರುಶಿಷ್ಯರು ಕ್ರೀಡೆ, ಮನರಂಜನೆಯನ್ನು ಒಟ್ಟಿಗೆ ಪರದೆ ಮೇಲೆ ತರಲಿದ್ದು, ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಭಾವಾನಾತ್ಮಕ ಸಂಬಂಧವನ್ನು ತೋರಿಸಲಿದೆ ಎಂದು ಅವರು ಹೇಳಿದ್ದಾರೆ. 

ಶರಣ್ ಹೊರತುಪಡಿಸಿದಂತೆ 11 ಬಾಲಕರು ಈ ಚಿತ್ರದಲ್ಲಿ ಖೋ ಖೋ ಆಟಗಾರರಾಗಿ ಅಭಿನಯಿಸಿದ್ದಾರೆ. 

ಗುರು ಶಿಷ್ಯರು ಚಿತ್ರದ ಬಗ್ಗೆ ನಿರ್ದೇಶಕ ತರುಣ್ ಸುದೀರ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸಹೋದರ ನಂದಕಿಶೋರ್ ಜೊತೆಗೆ ರಾಂಬೋ ಚಿತ್ರದಲ್ಲಿ ಕೆಲಸ ಅಭಿನಯಿಸಿದ್ದಾಗಿನಿಂದ ಈವರೆಗಿನ ಕನ್ನಡ ಚಿತ್ರೋದ್ಯಮದಲ್ಲಿ ಇದು ಕ್ರಿಯಾತ್ಮಕ ಮೊದಲ ಚಿತ್ರವಾಗಿದೆ. ಕ್ರಿಯೇಟಿವ್ ಮುಖ್ಯಸ್ಥರಾಗಿ ಪ್ರಯೋಜನ ಪಡೆದಿರುವುದಾಗಿ ತಿಳಿಸಿದರು. ತರುಣ್ ಸುಧೀರ್ ಈ ಚಿತ್ರದ ಕ್ರಿಯೇಟಿವ್ ಮುಖ್ಯಸ್ಥರ ಜೊತೆಗೆ ಸಹ ನಿರ್ಮಾಪಕ ಕೂಡಾ ಆಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com