'ಕಾಂತಾರ' ನಮ್ಮ ಮುಂದಿನ ಪೀಳಿಗೆಗೆ ಹೇಳಲೇಬೇಕಾದ ಕಥಾವಸ್ತು: ನಟ ರಿಷಬ್ ಶೆಟ್ಟಿ
ನಿರ್ದೇಶಕನಾಗಿ ಅಥವಾ ನಟನಾಗಿ ರಿಷಬ್ ಶೆಟ್ಟಿ ಯಾವಾಗಲೂ ತಮ್ಮ ಕಂಫರ್ಟ್ ಝೋನ್‌ನಿಂದ ಹೊರಬರಲು ಶ್ರಮಿಸಿದ್ದಾರೆ. ಅವರ ನಿರ್ದೇಶನ ಮತ್ತು ನಟನೆಯ ಕಾಂತಾರ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಸಿನಿಮಾ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ್ದಾರೆ.
Published: 30th September 2022 01:22 PM | Last Updated: 30th September 2022 01:47 PM | A+A A-

ರಿಷಬ್ ಶೆಟ್ಟಿ
ನಿರ್ದೇಶಕನಾಗಿ ಅಥವಾ ನಟನಾಗಿ ರಿಷಬ್ ಶೆಟ್ಟಿ ಯಾವಾಗಲೂ ತಮ್ಮ ಕಂಫರ್ಟ್ ಝೋನ್‌ನಿಂದ ಹೊರಬರಲು ಶ್ರಮಿಸಿದ್ದಾರೆ. ಅವರ ನಿರ್ದೇಶನ ಮತ್ತು ನಟನೆಯ ಕಾಂತಾರ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಸಿನಿಮಾ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ್ದಾರೆ.
'ನಾನು 'ಲಕ್ ಬೈ ಚಾನ್ಸ್' ಎನ್ನುವುದನ್ನು ನಂಬುವುದಿಲ್ಲ. ಬದಲಿಗೆ ಹೆಚ್ಚುವರಿ ಮೈಲಿ ಪ್ರಯಾಣವನ್ನು ಆನಂದಿಸುತ್ತೇನೆ ಮತ್ತು ಹೊರಡುವಾಗ ಗರಿಷ್ಠ ಪ್ರಯತ್ನ ಮಾಡುತ್ತೇನೆ. ಫಲಿತಾಂಶವನ್ನು ಅದರ ಪಾಡಿಗೆ ಬಿಡುತ್ತೇನೆ. ಜೀವನದಲ್ಲಿ ಕಂಫರ್ಟ್ ಝೋನ್ ಎಂಬುದೇ ಇಲ್ಲ. ಕಂಫರ್ಟ್ ಝೋನ್ ಎನ್ನುವುದೊಂದು ಚಟವಾಗಿದೆ. ಆದರೆ, ಅದರ ಅಗತ್ಯವಿಲ್ಲ' ಎನ್ನುತ್ತಾರೆ ರಿಷಬ್.
'ಇತ್ತೀಚೆಗೆ, ನನಗೆ ಯಾವುದೂ ಸುಲಭವಾಗಿ ಬಂದಿಲ್ಲ ಎಂಬುದನ್ನು ನಾನು ಅರಿತುಕೊಂಡೆ. ಒಂದು ಹಂತದಲ್ಲಿ, ನಾನು ಏರಿಳಿತದ ವಿರುದ್ಧ ಈಜುವುದನ್ನು ಆನಂದಿಸಲು ಪ್ರಾರಂಭಿಸಿದೆ. ಕೋವಿಡ್ ಲಾಕ್‌ಡೌನ್ ಮಧ್ಯೆ ನಾನು ನನ್ನ ತವರೂರಾದ ಕೆರಾಡಿಯಲ್ಲಿದ್ದೆ. ಅದೇ ಗ್ರಾಮದಲ್ಲಿ ವಾಸಿಸುವ ಹುಡುಗನೊಂದಿಗೆ ಮಾತನಾಡುವ ಸಮಯದಲ್ಲಿ ಆತ ಅವನ ತಂದೆಯ ಬಗ್ಗೆ ಒಂದು ಘಟನೆಯನ್ನು ಹಂಚಿಕೊಂಡಿದ್ದ. ಇದುವೇ ಕಾಂತಾರ ಸಿನಿಮಾದ ಕಥೆಗೆ ಸ್ಫೂರ್ತಿಯಾಯಿತು' ಎನ್ನುತ್ತಾರೆ.
'90ರ ದಶಕದಲ್ಲಿ ನಡೆದ ನಿವಾಸಿಗಳು ಮತ್ತು ಅರಣ್ಯ ಅಧಿಕಾರಿಗಳ ನಡುವಿನ ಸಂಘರ್ಷವು ನನ್ನ ಆಸಕ್ತಿಯನ್ನು ಸೆಳೆಯಿತು. ಬಳಿಕ ನಾವು ಅದರ ಸುತ್ತ ಪಾತ್ರಗಳು ಮತ್ತು ಕಥೆಯನ್ನು ಹೆಣೆದಿದ್ದೇವೆ. ಇದು ನಮ್ಮ ನೆಲದಿಂದ, ನಮ್ಮ ಬೇರುಗಳಿಂದ, ತಲೆಮಾರುಗಳಿಂದಲೂ ಕೇಳಿಬರುತ್ತಿರುವುದು ಮತ್ತು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವಂತ ಕಥೆ. ಈ ಚಿತ್ರವು ಮಕ್ಕಳಿಗಾಗಿಯೂ ಕೂಡ. ಕಾಂತಾರ ಒಂದು ದಂಡ ಕಥೆ (ಒಂದು ಪೌರಾಣಿಕ ಕಥೆ) ಯಾಗಿದ್ದು, ಇಂತಹ ಕಥೆಗಳನ್ನು ಹೊಸ ಪೀಳಿಗೆಗೆ ವರ್ಗಾಯಿಸಬೇಕು ಎಂಬುದು ನನ್ನ ಉದ್ದೇಶ' ಎಂದು ಹೇಳುತ್ತಾರೆ ರಿಷಬ್.
ಇದನ್ನೂ ಓದಿ: ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ಸಿನಿಮಾ ಕೆಜಿಎಫ್‌ಗಿಂತ ಭಿನ್ನ: ನಿರ್ಮಾಪಕ ವಿಜಯ್ ಕಿರಗಂದೂರು
ವಿಜಯ್ ಕಿರಂಗಂದೂರು ಅವರ ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಕಾಂತಾರ ಚಿತ್ರದಲ್ಲಿ ಕಿಶೋರ್, ಸಪ್ತಮಿ ಗೌಡ, ಪ್ರಕಾಶ್ ತೂಮಿನಾಡ್, ಪ್ರಮೋದ್ ಶೆಟ್ಟಿ ಮತ್ತು ಅಚ್ಯುತ್ ಕುಮಾರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ನಿರ್ದೇಶಕ, ನಟ ಮತ್ತು ಬರಹಗಾರನಾಗಿ ಹೇಗೆ ಹಲವು ಜವಾಬ್ದಾರಿಗಳನ್ನು ನಿಭಾಯಿಸುವಿರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಿಷಬ್ ಶೆಟ್ಟಿ, 'ಇದನ್ನೆಲ್ಲ ಮಾಡಲು ನನಗೆ ಸಾಧ್ಯವಿಲ್ಲ ಎಂದು ನಾನು ಯೋಚಿಸಿದರೆ, ನಾನು ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ನನ್ನ ದೃಷ್ಟಿಯನ್ನು ಕಾರ್ಯಗತಗೊಳಿಸಲು ಸಹಾಯ ಮಾಡುವ ತಂತ್ರಜ್ಞರು ಮತ್ತು ವೃತ್ತಿಪರರಿರುವ ತಂಡವನ್ನು ನಾನು ಹೊಂದಿದ್ದೇನೆ. ನಾನು ಅವರೆಲ್ಲರೊಂದಿಗೆ ಕ್ರೆಡಿಟ್ ಹಂಚಿಕೊಳ್ಳಲು ಬಯಸುತ್ತೇನೆ' ಎಂದು ತಿಳಿಸಿದರು.