'ಕ್ಲಾಂತ' ಸಿನಿಮಾ ಮೂಲಕ ಚಿತ್ರರಂಗಕ್ಕೆ ನಟಿ ಸಂಗೀತಾ ಭಟ್ ಕಮ್‌ಬ್ಯಾಕ್
ರಂಗನ್ ಸ್ಟೈಲ್ ಸಿನಿಮಾ ನಿರ್ದೇಶನಕ್ಕೆ ಹೆಸರುವಾಸಿಯಾಗಿರುವ ವೈಭವ್ ಪ್ರಶಾಂತ್ ಅವರು ತಮ್ಮ ನಾಲ್ಕನೇ ಚಿತ್ರಕ್ಕೆ 'ಕ್ಲಾಂತ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. 'ಇದು ಸಂದೇಶವನ್ನು ಹೊಂದಿರುವ ಯೂತ್‌ಫುಲ್ ಚಿತ್ರವಾಗಿದ್ದು, ಪೋಷಕರಿಗೆ ಸತ್ಯವನ್ನು ಹೇಳುವುದು ಮತ್ತು ತಪ್ಪು ದಾರಿಯಲ್ಲಿ ಹೋಗಬಾರದು ಎಂಬ ಸರಳ ವಿಷಯಗಳ ಸುತ್ತ ಸುತ್ತುತ್ತದೆ' ಎನ್ನುತ್ತಾರೆ ನಿರ್ದೇಶಕರು.
ಕ್ಲಾಂತ ಸಿನಿಮಾ ಮೂಲಕ ನಟಿ ಸಂಗೀತಾ ಭಟ್ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. 'ನನ್ನದು ಹದಿಹರೆಯದ ಹುಡುಗಿಯ ಪಾತ್ರ, ಆಕೆ ಕಾಲೇಜು ಮುಗಿಸಿ ಉದ್ಯೋಗಕ್ಕೆ ಸೇರುತ್ತಾಳೆ. ಹೆಚ್ಚಿನ ಭಾಗಗಳನ್ನು ಕಾಡಿನಲ್ಲಿ ಚಿತ್ರೀಕರಿಸಿದ ಕಾರಣ ಇದು ವಿಶಿಷ್ಟ ಅನುಭವವಾಗಿದೆ. ಈ ಪಾತ್ರಕ್ಕಾಗಿ ನಾನು ಕಟ್ಟುನಿಟ್ಟಾದ ಫಿಟ್‌ನೆಸ್‌ಗೆ ಒಳಗಾಗಬೇಕಾಯಿತು' ಎಂದು ಹೇಳುತ್ತಾರೆ ಸಂಗೀತಾ.
ಕ್ಲಾಂತವನ್ನು ಸಸ್ಪೆನ್ಸ್ ಥ್ರಿಲ್ಲರ್ ಎಂದು ಬಿಂಬಿಸಲಾಗಿದೆ. ಚಿತ್ರದಲ್ಲಿ ವಿಘ್ನೇಶ್ ನಾಯಕನಾಗಿ ನಟಿಸಿದ್ದಾರೆ ಮತ್ತು ಶೋಭರಾಜ್, ವೀಣಾ ಸುಂದರ್, ದೀಪಿಕಾ, ಪ್ರವೀಣ್ ಜೈನ್, ಯುವ ಮತ್ತು ಸ್ವಪ್ನಾ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಉದಯ್ ಅಮ್ಮನ್ಯ ಅವರ ಬೆಂಬಲ ಚಿತ್ರಕ್ಕಿದೆ. ಕ್ಲಾಂತಗೆ ಎಪಿ ಚಂದ್ರಕಾಂತ್ ಅವರ ಸಂಗೀತ, ಮೋಹನ್ ಲೋಕನಾಥನ್ ಅವರ ಛಾಯಾಗ್ರಹಣ ಮತ್ತು ಪಿಆರ್ ಸೌಂದರ್ ರಾಜ್ ಅವರ ಸಂಕಲನವಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ