ವಿಭಿನ್ನ ಕಥಾಹಂದರದ ಚಿತ್ರಗಳಲ್ಲಿ ನಟಿಸುವುದು ಮತ್ತಷ್ಟು ಪ್ರೇರಣೆ ನೀಡುತ್ತದೆ: ವಿಜಯ್ ರಾಘವೇಂದ್ರ

ವಿಜಯ್ ರಾಘವೇಂದ್ರ ಅವರು ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು. ‘ಚಿನ್ನಾರಿ ಮುತ್ತ’ ಸಿನಿಮಾದಲ್ಲಿನ ಅವರ ನಟನೆಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ‘ಕೊಟ್ರೇಶಿ ಕನಸು’ ಚಿತ್ರದ ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿ ಒಲಿದಿದೆ. ಬಾಲ ನಟನಾಗಿ ಗುರುತಿಸಿಕೊಂಡ ನಂತರ ಅವರು ಹೀರೋ ಆಗಿ ಮಿಂಚಿದರು. ವೃತ್ತಿ ಜೀವನದಲ್ಲಿ ಅವರು ಹಲವು ಪ್ರಯೋಗಾತ್ಮಕ...
ವಿಜಯ್ ರಾಘವೇಂದ್ರ
ವಿಜಯ್ ರಾಘವೇಂದ್ರ

ವಿಜಯ್ ರಾಘವೇಂದ್ರ ಅವರು ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು. ‘ಚಿನ್ನಾರಿ ಮುತ್ತ’ ಸಿನಿಮಾದಲ್ಲಿನ ಅವರ ನಟನೆಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ‘ಕೊಟ್ರೇಶಿ ಕನಸು’ ಚಿತ್ರದ ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿ ಒಲಿದಿದೆ. ಬಾಲ ನಟನಾಗಿ ಗುರುತಿಸಿಕೊಂಡ ನಂತರ ಅವರು ಹೀರೋ ಆಗಿ ಮಿಂಚಿದರು. ವೃತ್ತಿ ಜೀವನದಲ್ಲಿ ಅವರು ಹಲವು ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿದ್ದಾರೆ.

ಇದೀಗ ‘ರಾಘು’ ಹೆಸರಿನ ಸಿನಿಮಾ ಮಾಡಿದ್ದಾರೆ. ಚಿತ್ರವನ್ನು ಆನಂದ್ ರಾಜ್ ಅವರು ನಿರ್ದೇಶಿಸಿದ್ದು, ಸೆನ್ಸಿಬಿಲಿಟಿಯೊಂದಿಗೆ ಥ್ರಿಲ್ಲರ್ ಆಗಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರೊಬ್ಬರೇ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಹಲವು ವಿಶೇಷತೆಗಳನ್ನು ಹೊಂದಿದೆ. ಚಿತ್ರ ಹಾಗೂ ಪಾತ್ರದ ಬಗ್ಗೆ ವಿಜಯ್ ರಾಘವೇಂದ್ರ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಚಿತ್ರದ ಆಫರ್ ಬಂದಾಗ ಆಶ್ಚರ್ಯವಾಯಿತು. ಪ್ರತಿ ಪಾತ್ರವನ್ನು ಅರ್ಥ ಮಾಡಿಕೊಳ್ಳಲು ಸಮಯ ಬೇಕಾಯಿತು. ನಾನು ಮಹತ್ವಾಕಾಂಕ್ಷೆಯುಳ್ಳ ನಟನಾಗಿದ್ದು, ಚಿತ್ರದಲ್ಲಿನ ಪಾತ್ರಗಳನ್ನು ಸಾಧ್ಯವಾದಷ್ಟು ಬಳಸಿಕೊಳ್ಳಲು ಬಯಸುತ್ತೇನೆ. ಅಪರೂಪದ ಪಾತ್ರಗಳಲ್ಲಿ ನಟಿಸುವುದು ಪ್ರೇರಣೆ ನೀಡುತ್ತದೆ. ಚಿತ್ರವು ಆಕ್ಷನ್, ಸಸ್ಪೆನ್ಸ್ ಮತ್ತು ಕ್ರೈಮ್ ಅಂಶಗಳಿಂದ ಕೂಡಿದ್ದು, ಏಕವ್ಯಕ್ತಿ ಅಭಿನಯ ಜನರ ಮನಸ್ಸು ಗೆಲ್ಲಬಹುದು ಎಂಬ ನಂಬಿಕೆಯಲ್ಲಿದ್ದೇನೆಂದು ವಿಜಯ್ ರಾಘವೇಂದ್ರ ಅವರು ಹೇಳಿದ್ದಾರೆ.

ನಿರ್ದೇಶಕರು ಸ್ಪಷ್ಟ ಸೂಚನೆಗಲನ್ನು ನೀಡಿದ್ದರು, ಅವರ ಸೂಚನೆ, ಆಶಯದಂತೆ ನಟಿಸಿದ್ದೇನೆ. ಸಾಧ್ಯವಾದಷ್ಟು ನೈಜತೆಯಿರುವಂತೆಯೇ ನಟಿಸಿದ್ದೇನೆ. ಹಲವು ಪಾತ್ರಗಳಲ್ಲಿ ಒಬ್ಬ ವ್ಯಕ್ತಿಯೇ ನಟಿಸಬೇಕಾಗಿರುವುದರಿಂದ ಇದು ಸವಾಲಿನ ಪಾತ್ರವಾಗಿತ್ತು. ಚಿತ್ರದ ಸಂಪೂರ್ಣ ಒತ್ತಡ ನಿರ್ದೇಶಕ ಹಾಗೂ ತಾಂತ್ರಿಕ ವರ್ಗದವರ ಮೇಲಿತ್ತು. ನೆಗೆಟಿವ್ ಶೇಡ್ ಪಾತ್ರವನ್ನು ಬಹಳಷ್ಟು ಎಂಜಾಯ್ ಮಾಡಿದೆ ಎಂದಿದ್ದಾರೆ.

ನಟನ ಸಾಮರ್ಥ್ಯ, ನಟ, ಚಿತ್ರಕಥೆ, ನಿರ್ದೇಶನ, ಛಾಯಾಗ್ರಾಹಕರ ಕೊಡುಗೆಯ ಹೊರತಾಗಿಯು ತಂತ್ರಜ್ಞರ ಕುಶಲತೆಯು ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಎಂಬುದು ನನ್ನ ಭಾವನೆ ಎಂದು ವಿಜಯ್ ರಾಘವೇಂದ್ರ ಅವರು ಹೇಳಿದರು.

ಡಿಕೆ ಎಸ್ ಸ್ಟುಡಿಯೋ, ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್ ಹೌಸ್ ನಡಿ ರಾಘು ಸಿನಿಮಾವನ್ನು ರನ್ವಿತ್ ಶಿವಕುಮಾರ್ ಹಾಗೂ ಅಭಿಷೇಕ್ ಕೋಟ ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರುಳಿಧರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಸೂರಜ್ ಜೋಯಿಸ್ ಸಂಗೀತ ನಿರ್ದೇಶನ ಮಾಡಿರುವ ಈ ಚಿತ್ರದ ಎರಡು ಹಾಡುಗಳಿಗೆ ವಾಸುಕಿ ವೈಭವ್ ಹಾಗೂ all ok ಧ್ವನಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com