ಓಂ ಪ್ರಕಾಶ್ ರಾವ್ ನಿರ್ದೇಶನದ ಮಹಿಳಾ ಪ್ರಧಾನ 'ಫೀನಿಕ್ಸ್' ಸಿನಿಮಾದಲ್ಲಿ ಮೂವರು ನಾಯಕಿಯರು!

ಲಾಕಪ್ ಡೆತ್, ಹುಚ್ಚ, ಎಕೆ 47, ಕಲಾಸಿಪಾಳ್ಯ, ಅಯ್ಯ ಮುಂತಾದ ಮಾಸ್ ಚಿತ್ರಗಳನ್ನೇ ಕೊಟ್ಟಿದ್ದ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಮಹಿಳಾ ಪ್ರಧಾನ ಸಿನಿಮಾ ಮಾಡುತ್ತಿದ್ದಾರೆ. 'ಫೀನಿಕ್ಸ್' ಶೀರ್ಷಿಕೆಯೊಂದಿಗೆ, ಸಿರಿಗುರು ಚಿತ್ರಾಲಯ ಬ್ಯಾನರ್ ಅಡಿಯಲ್ಲಿ ತ್ರಿಷಾ ಪ್ರಕಾಶ್ ನಿರ್ಮಿಸುತ್ತಿದ್ದಾರೆ. 
ಓಂ ಪ್ರಕಾಶ್ ರಾವ್
ಓಂ ಪ್ರಕಾಶ್ ರಾವ್
Updated on

ಲಾಕಪ್ ಡೆತ್, ಹುಚ್ಚ, ಎಕೆ 47, ಕಲಾಸಿಪಾಳ್ಯ, ಅಯ್ಯ ಮುಂತಾದ ಮಾಸ್ ಚಿತ್ರಗಳನ್ನೇ ಕೊಟ್ಟಿದ್ದ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಮಹಿಳಾ ಪ್ರಧಾನ ಸಿನಿಮಾ ಮಾಡುತ್ತಿದ್ದಾರೆ. 'ಫೀನಿಕ್ಸ್' ಶೀರ್ಷಿಕೆಯೊಂದಿಗೆ, ಸಿರಿಗುರು ಚಿತ್ರಾಲಯ ಬ್ಯಾನರ್ ಅಡಿಯಲ್ಲಿ ತ್ರಿಷಾ ಪ್ರಕಾಶ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ನಿಮಿಕಾ ರತ್ನಾಕರ್, ಶಿಲ್ಪಾ ಶೆಟ್ಟಿ (ಕನ್ನಡದ ಷುಗರ್ ಫ್ಯಾಕ್ಟರಿ ನಟಿ) ಮತ್ತು ಕೃತಿಕಾ ಲೋಬೋ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಫೀನಿಕ್ಸ್ ನಿರ್ದೇಶಕರ 49ನೇ ಚಿತ್ರವಾಗಿದ್ದು, ತ್ರಿಷಾ ಪ್ರಕಾಶ್ ನಿರ್ಮಾಣದ 4ನೇ ಚಿತ್ರವಾಗಿದೆ.

ಚಿತ್ರತಂಡದ ಪ್ರಕಾರ, ಕಥೆಯನ್ನು ಸುಬ್ರಮಣಿ ಬರೆದಿದ್ದು, ಓಂಪ್ರಕಾಶ್ ಅವರು ಚಿತ್ರಕಥೆಯೊಂದಿಗೆ ಆಕ್ಷನ್ ಥ್ರಿಲ್ಲರ್ ಕಥಾಹಂದರವಾಗಿದೆ ಮತ್ತು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳನ್ನು ಹೊಂದಿರುತ್ತದೆ. ಆಗಸ್ಟ್‌ನಲ್ಲಿ ಚಿತ್ರದ ಶೂಟಿಂಗ್ ಕಿಕ್‌ಸ್ಟಾರ್ಟ್ ಮಾಡಲು ಯೋಜಿಸಿದ್ದು, ಚಿತ್ರದಲ್ಲಿ ಜಗದೀಶ್, ಭಾಸ್ಕರ್ ಶೆಟ್ಟಿ ಮತ್ತು ಪ್ರತಾಪ್ ನಾಯಕರಾಗಿ ನಟಿಸಲಿದ್ದಾರೆ. ವಿನೋದ್ ವಿಶೇಷ ಪಾತ್ರದಲ್ಲಿ, ಪ್ರದೀಪ್ ರಾವತ್ ಪ್ರತಿನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ, ಸ್ವಸ್ತಿಕ್ ಶಂಕರ್ ಮತ್ತು ಅನಿಲ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

<strong>ನಿಮಿಕಾ ರತ್ನಾಕರ್, ಶಿಲ್ಪಾ ಶೆಟ್ಟಿ (ಕನ್ನಡದ ಷುಗರ್ ಫ್ಯಾಕ್ಟರಿ ನಟಿ) ಮತ್ತು ಕೃತಿಕಾ ಲೋಬೋ</strong>
ನಿಮಿಕಾ ರತ್ನಾಕರ್, ಶಿಲ್ಪಾ ಶೆಟ್ಟಿ (ಕನ್ನಡದ ಷುಗರ್ ಫ್ಯಾಕ್ಟರಿ ನಟಿ) ಮತ್ತು ಕೃತಿಕಾ ಲೋಬೋ

ಸಾಧುಕೋಕಿಲ ಅವರು ಸಂಗೀತ ನಿರ್ದೇಶನ ಮಾಡಲಿದ್ದು, ರವಿಕುಮಾರ್ ಛಾಯಾಗ್ರಹಣ ಲಕ್ಷ್ಮಣ್ ರೆಡ್ಡಿ ಅವರ ಸಂಕಲನ ಚಿತ್ರಕ್ಕಿದೆ. ವಿಜಯನ್ ಸಾಹಸ ನಿರ್ದೇಶಕರಾಗಿದ್ದು, ಸಂಭಾಷಣೆಯನ್ನು ಎಂಎಸ್ ರಮೇಶ್ ಬರೆದಿದ್ದಾರೆ. 'ಓಂ ಪ್ರಕಾಶ್ ರಾವ್ ಅವರಂತಹ ಹಿರಿಯ ನಿರ್ದೇಶಕರೊಂದಿಗೆ ಎರಡನೇ ಬಾರಿಗೆ ಕೆಲಸ ಮಾಡಲು ನನಗೆ ಸಂತೋಷವಾಗಿದೆ' ಎನ್ನುತ್ತಾರೆ ನಿಮಿಕಾ ರತ್ನಾಕರ್.

ಕ್ರಾಂತಿ ಸಿನಿಮಾ ನಂತರ ಸ್ಯಾಂಡಲ್‌ವುಡ್‌ನ ಪುಷ್ಪಾವತಿ ಎಂದು ಕರೆಯಲ್ಪಡುವ ನಿಮಿಕಾ ರತ್ನಾಕರ್, ಓಂ ಪ್ರಕಾಶ್ ಅವರ ಮುಂಬರುವ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲು ಥ್ರಿಲ್ ಆಗಿದ್ದಾರೆ. ಈ ವಿಚಾರವನ್ನು ಅವರ ಜನ್ಮದಿನದಂದೇ ಪ್ರಕಟಿಸಲಾಯಿತು. 'ತ್ರಿಶೂಲಂ ನಂತರ ಫೀನಿಕ್ಸ್ ಚಿತ್ರವು ನಿರ್ದೇಶಕ ಓಂ ಪ್ರಕಾಶ್ ರಾವ್ ಅವರೊಂದಿಗೆ ನನ್ನ ಎರಡನೇ ಸಹಯೋಗವಾಗಿದೆ ಮತ್ತು ಈ ಹಿರಿಯ ನಿರ್ದೇಶಕರೊಂದಿಗೆ ಕೆಲಸ ಮಾಡಲು ತುಂಬಾ ಖುಷಿಯಾಗಿದೆ' ಎನ್ನುತ್ತಾರೆ ನಿಮಿಕಾ.

ಉಪೇಂದ್ರ ಮತ್ತು ರವಿಚಂದ್ರನ್ ನಟಿಸಿರುವ 'ತ್ರಿಶೂಲಂ' ಚಿತ್ರದ ಭಾಗವಾಗಿರುವ ನಿಮಿಕಾ, 'ಸಾಧು ಕೋಕಿಲಾ ಅವರಂತಹ ನಟರ ಜೊತೆ ಕೆಲಸ ಮಾಡಿದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ರವಿ ಸರ್ ಜೊತೆ ನಟಿಸುವುದು ನನ್ನ ಕನಸಾಗಿತ್ತು' ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com