ಶೂಟಿಂಗ್ ಮುಗಿಸಿದ 'ಯುಐ': ಉಪೇಂದ್ರ ನಿರ್ದೇಶನದ ಸಿನಿಮಾ ಎಡಿಟ್ ಮಾಡುವುದೇ ದೊಡ್ಡ ಸವಾಲು!

‘ಯುಐ’ ಸಿನಿಮಾದ ಸಂಪೂರ್ಣ ಶೂಟಿಂಗ್ ಮುಗಿಸಿರುವ ರಿಯಲ್ ಸ್ಟಾರ್, ಸದ್ಯ ಎಡಿಟಿಂಗ್ ಟೇಬಲ್ ಮುಂದೆ ಕೂತಿದ್ದಾರೆ, ಎಡಿಟಿಂಗ್ ಕೆಲಸ ಮುಗಿಯುತ್ತಿದ್ದಂತೆಯೇ ಮತ್ತ್ಯಾವ ಅಪ್ ಡೇಟ್ ಕೊಡ್ತಾರೋ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಯು ಐ ಸಿನಿಮಾ ಸ್ಚಿಲ್
ಯು ಐ ಸಿನಿಮಾ ಸ್ಚಿಲ್
Updated on

‘ಯುಐ’ ಸಿನಿಮಾದ ಸಂಪೂರ್ಣ ಶೂಟಿಂಗ್ ಮುಗಿಸಿರುವ ರಿಯಲ್ ಸ್ಟಾರ್, ಸದ್ಯ ಎಡಿಟಿಂಗ್ ಟೇಬಲ್ ಮುಂದೆ ಕೂತಿದ್ದಾರೆ, ಎಡಿಟಿಂಗ್ ಕೆಲಸ ಮುಗಿಯುತ್ತಿದ್ದಂತೆಯೇ ಮತ್ತ್ಯಾವ ಅಪ್ ಡೇಟ್ ಕೊಡ್ತಾರೋ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಂದ ಟ್ಯೂನ್ ಪಡೆದಿದ್ದು, ಅಕ್ಟೋಬರ್‌ನಲ್ಲಿ ವಿಶೇಷ ಹಾಡನ್ನು ಶೂಟಿಂಗ್ ಮಾಡಲಾಗುವುದು, ಅದನ್ನು ಹೊರತುಪಡಿಸಿ ಉಪೇಂದ್ರ ಮತ್ತು ಅವರ ತಂಡವು ಯುಐ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಚಿತ್ರತಂಡ ಇದೀಗ ಪೋಸ್ಟ್ ಪ್ರೊಡಕ್ಷನ್‌ನತ್ತ ಗಮನ ಹರಿಸಿದ್ದು, ಹಲವು ಜವಾಬ್ದಾರಿಗಳನ್ನು ಹೊತ್ತಿರುವ ನಟ-ನಿರ್ದೇಶಕ ಉಪೇಂದ್ರ ನಿರ್ವಹಿಸುತ್ತಿದ್ದಾರೆ. ದೀಪು ಎಸ್ ಕುಮಾರ್ ಅವರ ಎಡಿಟಿಂಗ್ ನೋಡಿಕೊಳ್ಳುತ್ತಿದ್ದಾರೆ.

ಚಿತ್ರತಂಡದ ಪ್ರಕಾರ, ಉಪೇಂದ್ರ ಅವರ ನಿರ್ದೇಶನದಲ್ಲಿ ಎಡಿಟಿಂಗ್ ದೊಡ್ಡ ಸವಾಲಾಗಿದೆ ಮತ್ತು ಕೆಲಸ ಮುಗಿಸಲು ಒಂದು ತಿಂಗಳು ಸಮಯ ತೆಗೆದುಕೊಳ್ಳುತ್ತದೆ. ಎಡಿಟಿಂಗ್ ಪ್ರಕ್ರಿಯೆಯ ನಂತರ, ತಂಡವು ಅದನ್ನು ಬಹು ಭಾಷೆಗಳಲ್ಲಿ ಡಬ್ ಮಾಡಲಿದೆ.

<strong>ಯುಐ ತಂಡ</strong>
ಯುಐ ತಂಡ

ಉಪ್ಪಿ ನಿರ್ದೇಶನ ಅಂದರೆ ಅಲ್ಲಿ ಗ್ರಾಫಿಕ್ಸ್ ಗೆ ಕೆಲಸ ಅಷ್ಟೇನೂ ಇರುತ್ತಿರಲಿಲ್ಲ. ಆದರೆ ಈ ಬಾರಿ ಉಪ್ಪಿ ಹಳೇ ಸ್ಟೈಲ್ ಮರೆತು ಅತ್ಯದ್ಭುತ ನಯಾ ತಂತ್ರಜ್ಞಾನಕ್ಕೆ ಕೈ ಹಾಕಿದ್ದಾರೆ. ಕಂಪ್ಯೂಟರೈಸ್ಡ್ ಕ್ಯಾಮೆರಾ ಬಳಸುತ್ತಿದ್ದಾರೆ. ಮೊಕೊ ಬೋಟ್ ಹೆಸರಿನ ಈ ಕ್ಯಾಮೆರಾದಲ್ಲಿ ಇಲ್ಲಿವರೆಗೆ ಭಾರತದ ಯಾವುದೇ ಸಿನಿಮಾ ಚಿತ್ರೀಕರಣ ಮಾಡಿಲ್ಲ. ಅದರ ಜೊತೆಗೆ ವರ್ಚುವಲ್ ಗ್ರಾಫಿಕ್ಸ್ ಕೂಡ ಕೆಲಸ ಮಾಡಲಿದೆ.

ತಯಾರಕರು ವಿಎಫ್‌ಎಕ್ಸ್‌ನಲ್ಲಿ ಸಮರ್ಪಿತ ಕೆಲಸ ಮಾಡುತ್ತಿದ್ದಾರೆ, ಇದನ್ನು ಪ್ರವೀಣ ವಿಎಫ್‌ಎಕ್ಸ್ ತಜ್ಞ ಮತ್ತು ಯುಐ ನಿರ್ಮಾಪಕರಲ್ಲಿ ಒಬ್ಬರಾದ ನವೀನ್ ಮನೋಹರ್ ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ.  ನಿರ್ಮಲ್ ಮತ್ತು ತಂಡದಿಂದ ಯುಎಸ್‌ಎ ಯಿಂದ ನಡೆಸಲಾಗುತ್ತಿದೆ.

UI ಸಿನಿಮಾ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ, ಒಂದು ದಶಕದ ನಂತರ ನಿರ್ದೇಶನಕ್ಕೆ ಉಪೇಂದ್ರ ಅವರ ಮರಳಿದ್ದಾರೆ.  ಶ್, ಓಂ, ಎ, ಸ್ವಸ್ತಿಕ್, ಹೆಚ್ 2ಓ, ಉಪೇಂದ್ರ, ಸೂಪರ್ ಮತ್ತು ಉಪ್ಪಿ 2 ಸಿನಿಮಾ ಮೂಲಕ ಪ್ರೇಕ್ಷಕರಿಗೆ ನಿರೀಕ್ಷಿತ ಮನರಂಜನೆ ನೀಡಿದೆ. UI ತನ್ನ ಆಕರ್ಷಕ ಪೋಸ್ಟರ್‌ಗಳೊಂದಿಗೆ  ಬಹಳಷ್ಟು ನಿರೀಕ್ಷೆ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ, ವಿಶೇಷವಾಗಿ, ಈ ತಂತ್ರಜ್ಞಾನ-ಚಾಲಿತ ಯೋಜನೆಗಾಗಿ ನಟ-ನಿರ್ದೇಶಕರು ಬಳಸಿದ ವಿಶಿಷ್ಟ ವಿಧಾನ, ಇದು 200 DSLR ಕ್ಯಾಮೆರಾಗಳನ್ನು ಒಳಗೊಂಡಿರುವ ಸೆಟಪ್‌ನ ಬಳಕೆಯನ್ನು ಒಳಗೊಂಡಿದೆ.

ಚಿತ್ರದ ಕಥೆಯನ್ನು ಇದುವರೆಗೂ ಎಲ್ಲಿಯೂ ಸ್ವಲ್ಪವು ಬಹಿರಂಗಗೊಳಿಸಿಲ್ಲ, ಆದರೆ ಎಲ್ಲರ ಚಿತ್ತ ಉಪೇಂದ್ರ ನಿರ್ದೇಶನದ ಯು ಐ ಸಿನಿಮಾ ಮೇಲೆ ನೆಟ್ಟಿದೆ. ವರ್ಷಾಂತ್ಯದಲ್ಲಿ ರಿಲೀಸ್ ಮಾಡುವ ಉದ್ದೇಶಹೊಂದಿದ್ದಾರೆ.  ಶೀಘ್ರದಲ್ಲೇ ರಿಲೀಸ್ ದಿನಾಂಕವನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.

ಇದಕ್ಕೆ ಲಹರಿ ಆಡಿಯೋ  ಸಂಸ್ಥೆ ಮಾಲೀಕರ ಮಗ ಮನೋಹರ್ ನಾಯ್ಡು ಮಕ್ಕಳಾದ ಚಂದ್ರು, ನವೀನ್ ಹಾಗೂ ಸಲಗ ಕೆ.ಪಿ.ಶ್ರೀಕಾಂತ್ ಬಂಡವಾಳ ಹಾಕಿದ್ದಾರೆ. ಎಲ್ಲರೂ ಒಂದೊಂದೆ ಕೆಲಸವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ. ಮುರಳಿ ಶರ್ಮಾ, ಸನ್ನಿ ಲಿಯೋನ್ ಮತ್ತು ನಿಧಿ ಸುಬ್ಬಯ್ಯ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com