'ತಾಳ್ಮೆಯಲ್ಲಿ ನನಗೆ ನಂಬಿಕೆಯಿದೆ, ರಾತ್ರೋರಾತ್ರಿ ಸ್ಟಾರ್‌ ಆಗುವ ಆತುರ ನನಗಿಲ್ಲ': ಅರ್ಚನಾ ಜೋಯಿಸ್

ಚಿತ್ರರಂಗದಲ್ಲಿ ಇಂತದ್ದೇ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಮಾನದಂಡಗಳನ್ನು ಧಿಕ್ಕರಿಸುವ ಮೂಲಕ, ಕೆಜಿಎಫ್ ಸರಣಿಯಲ್ಲಿ ತಾಯಿ ಪಾತ್ರ ನಿರ್ವಹಿಸುವ ಮೂಲಕ ಎಲ್ಲಾ ಪಾತ್ರಗಳಿಗೂ ಸೈ ಎಂದ ನಟಿ ಅರ್ಚನಾ ಜೋಯಿಸ್.
ಅರ್ಚನಾ ಜೋಯಿಸ್
ಅರ್ಚನಾ ಜೋಯಿಸ್
Updated on

ಚಿತ್ರರಂಗದಲ್ಲಿ ಇಂತದ್ದೇ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಮಾನದಂಡಗಳನ್ನು ಧಿಕ್ಕರಿಸುವ ಮೂಲಕ, ಕೆಜಿಎಫ್ ಸರಣಿಯಲ್ಲಿ ತಾಯಿ ಪಾತ್ರ ನಿರ್ವಹಿಸುವ ಮೂಲಕ ಎಲ್ಲಾ ಪಾತ್ರಗಳಿಗೂ ಸೈ ಎಂದ ನಟಿ ಅರ್ಚನಾ ಜೋಯಿಸ್. ಇದಕ್ಕಾಗಿ ಅವರು ಸಾಕಷ್ಟು ಮೆಚ್ಚುಗೆಯನ್ನು ಪಡೆದಿದ್ದಾರೆ. ತನ್ನ ವಿಶಿಷ್ಟ ವ್ಯಕ್ತಿತ್ವವೇ ಪಾತ್ರದ ಆಯ್ಕೆಗಳನ್ನು ನಿರ್ದೇಶಿಸುತ್ತದೆ ಎಂದು ಒಪ್ಪಿಕೊಳ್ಳುತ್ತಾರೆ ಅರ್ಚನಾ. ಧಾರಾವಾಹಿ ಮೂಲಕ ವೃತ್ತಿಜೀವನ ಆರಂಭಿಸಿದ ಅವರೀಗ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ಉದ್ದೇಶಪೂರ್ವಕವಾಗಿ ಒಂದೇ ರೀತಿಯ ಪಾತ್ರಗಳಿಂದ ದೂರ ಸರಿದಿದ್ದಾರೆ.

ಇಂದಿಗೂ ಕೆಜಿಎಫ್ ಸಿನಿಮಾದಲ್ಲಿನ ತಮ್ಮ ನಟನೆಗೆ ಮೆಚ್ಚುಗೆ ಪಡೆಯುತ್ತಿರುವ ನಟಿ, ನಂತರ ಬಂದ ಅವಕಾಶಗಳು ಮತ್ತು ಆ ರೀತಿಯ ಪಾತ್ರದ ಹೊರತಾಗಿಯೂ ತಾವು ವಿಭಿನ್ನ ಪಾತ್ರಗಳಲ್ಲಿ ನಟಿಸುವ ಸವಾಲುಗಳನ್ನು ಹೆೇಗೆ ಎದುರಿಸಿದರು ಎಂಬ ಬಗ್ಗೆ ಮಾತನಾಡಿದ್ದಾರೆ. 'ನಾನು ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಒಂದೇ ತೆರನಾದ ಪಾತ್ರಗಳಿಗೆ ಸಿಲುಕಿಕೊಳ್ಳದಿರುವ ಬಗ್ಗೆ ಚರ್ಚಿಸಿದ್ದೇನೆ. ಯಶಸ್ವಿ ಪಾತ್ರಗಳು ಸಾಮಾನ್ಯವಾಗಿ ಅವುಗಳಲ್ಲಿ ನಟಿಸಿದ ನಟರೊಂದಿಗೆ ನಿಕಟ ಸಂಬಂಧ ಹೊಂದಿರುತ್ತವೆ ಎಂದು ಅವರು ವಿವರಿಸಿದರು ಮತ್ತು ಪ್ರತಿಯೊಬ್ಬರೂ ಅವರನ್ನು ಅಂತಹದ್ದೇ ರೀತಿಯ ಪಾತ್ರಗಳಲ್ಲಿ ನೋಡಲು ನಿರೀಕ್ಷಿಸುತ್ತಾರೆ' ಎಂದು ಹೇಳಿದ್ದಾಗಿ ವಿವರಿಸುತ್ತಾರೆ.

ಹೊಂದಿಸಿ ಬರೆಯಿರಿ ಮತ್ತು ಮುಂಬರುವ ಕ್ಷೇತ್ರಪತಿ ಸಿನಿಮಾದಲ್ಲಿನ ತಮ್ಮ ಪಾತ್ರಗಳ ಬಗ್ಗೆ ಮಾತನಾಡುವ ಅವರು, 'ತಾಳ್ಮೆ ಎಷ್ಟು ಪ್ರಾಮುಖ್ಯತೆ ಹೊಂದಿದೆ ಎಂಬುದನ್ನು ನಾನು ನಂಬುತ್ತೇನೆ ಮತ್ತು ರಾತ್ರೋರಾತ್ರಿ ತಾರಾಪಟ್ಟ ಸಾಧಿಸುವ ಧಾವಂತ ನನಗಿಲ್ಲ. ಸಿನಿಮಾ ನಿರ್ಮಾಣದ ಕಲೆ ಮತ್ತು ಸೃಜನಶೀಲತೆಗೆ ನಾನು ಬೆಲೆ ಕೊಡುತ್ತೇನೆ. ಅವಕಾಶ ಬಂದಾಗಲೆಲ್ಲಾ ಅತ್ಯುತ್ತಮ ಕೊಡುಗೆ ನೀಡುವುದು ಮತ್ತು ಗಮನಾರ್ಹ ಯೋಜನೆಗಳ ಭಾಗವಾಗುವುದು ನನ್ನ ಗುರಿಯಾಗಿದೆ' ಎನ್ನುತ್ತಾರೆ ಅರ್ಚನಾ.

<strong>ಕ್ಷೇತ್ರಪತಿ ಚಿತ್ರದ ಪೋಸ್ಟರ್</strong>
ಕ್ಷೇತ್ರಪತಿ ಚಿತ್ರದ ಪೋಸ್ಟರ್

ಹೊಂದಿಸಿ ಬರೆಯಿರಿ ಸಿನಿಮಾ ನಂತರ, ಈಗ ಕ್ಷೇತ್ರಪತಿಯಲ್ಲಿನ ತನ್ನ ಪಾತ್ರವು ನನ್ನ ಬಗೆಗಿನ ಗ್ರಹಿಕೆಗಳಿಗೆ ಸವಾಲೆಸೆಯುತ್ತದೆ ಎಂದು ನಂಬುವ ಅರ್ಚನಾ, 'ನನಗೆ ನಾಯಕ ಮತ್ತು ನಾಯಕಿ ಪಾತ್ರಗಳೇ ಶ್ರೇಷ್ಠ ಎಂಬುವುದರಲ್ಲಿ ನಂಬಿಕೆ ಇಲ್ಲ. ಪ್ರತಿಯೊಂದು ಪಾತ್ರವನ್ನು ನಿರೂಪಣೆಗೆ ಅವಿಭಾಜ್ಯವಾಗಿ ನೋಡಲು ನಾನು ಇಷ್ಟಪಡುತ್ತೇನೆ. ಕ್ಷೇತ್ರಪತಿಯಲ್ಲಿನ ತನ್ನ ಪಾತ್ರವು ತನಗೆ ಸಾಕಷ್ಟು ಸ್ಕ್ರೀನ್ ಟೈಂ ಅನ್ನು ನೀಡಿಲ್ಲ. ಆದರೆ, ಒಟ್ಟಾರೆಯಾಗಿ ಚಿತ್ರದ ಪ್ರಭಾವವು ತನಗೆ ಹೆಚ್ಚು ಮುಖ್ಯವಾಗಿದೆ. ಸೀಮಿತ ಸ್ಕ್ರೀನ್ ಟೈಂನೊಂದಿಗೆ ಸಹ ಮಹತ್ವದ ಯೋಜನೆಗೆ ಕೊಡುಗೆ ನೀಡುವುದನ್ನು ನಾನು ಆನಂದಿಸುತ್ತೇನೆ' ಎಂದು ಅವರು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ.

ಕ್ಷೇತ್ರಪತಿಯಲ್ಲಿ, ಅರ್ಚನಾ ಅವರು ಭೂಮಿಕಾ ಎಂಬ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. 'ಭೂಮಿಕಾ ಪಾತ್ರವು ಕಾರ್ಪೊರೇಟ್ ನಿರ್ಬಂಧಗಳಿಂದ ಉಸಿರುಕಟ್ಟಿದ ಪರಿಸ್ಥಿತಿಯಲ್ಲಿರುವವರ ಧ್ವನಿಯನ್ನು ಪ್ರತಿನಿಧಿಸುತ್ತದೆ. ಸ್ವತಂತ್ರ ಪತ್ರಿಕೋದ್ಯಮವನ್ನು ಮುಂದುವರಿಸಲು ಆಯ್ಕೆ ಮಾಡಿಕೊಳ್ಳುತ್ತದೆ. ಕ್ಷೇತ್ರಪತಿಯು ನವೀನ್ ಶಂಕರ್ ನಿರ್ವಹಿಸಿದ ಬಸವ ಪಾತ್ರದ ಸುತ್ತ ಸುತ್ತುತ್ತದೆ. ಚಿತ್ರವು ಬಲವಾದ ತಂದೆ-ಮಗನ ಸಂಬಂಧದ ಬಗ್ಗೆ ಹೇಳುತ್ತದೆ ಮತ್ತು ಭೂಮಿಕಾಳಾಗಿ ನನ್ನ ಉಪಸ್ಥಿತಿಯು ಕೇವಲ ಭಾವನಾತ್ಮಕ ಬೆಂಬಲವಲ್ಲ; ಅವಳು ನಾಯಕನ ಪರವಾಗಿ ನಿಲ್ಲುತ್ತಾಳೆ, ನಿರೂಪಣೆಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುತ್ತಾಳೆ' ಎಂದು ಅವರು ವಿವರಿಸುತ್ತಾರೆ.

ತಾನು ಒಂದೇ ರೀತಿಯ ಪಾತ್ರಗಳಲ್ಲಿ ನಟಿಸಲು ಒತ್ತಾಯಿಸಿದ ಯೋಜನೆಗಳನ್ನು ನಿಜವಾಗಿಯೂ ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ಪಾತ್ರಗಳು ಕೇವಲ ದೈಹಿಕ ಸಾಮರ್ಥ್ಯಕ್ಕೆ ಸೀಮಿತವಾಗಿರುವುದಿಲ್ಲ. ಅವು ಆಳವನ್ನು ಒಳಗೊಂಡಿರುತ್ತವೆ. ನಿರ್ದಿಷ್ಟ ಪಾತ್ರಗಳನ್ನು ಹೈಲೈಟ್ ಮಾಡುವ ಬದಲು ಸಿನಿಮಾಗಳು ಶೀಘ್ರದಲ್ಲೇ ಅವುಗಳ ಕಂಟೆಂಟ್‌ಗಾಗಿ ಮಾನ್ಯತೆ ಪಡೆಯುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಅರ್ಚನಾ ಹೇಳುತ್ತಾರೆ.

ಅರ್ಚನಾ ಶಿವರಾಜಕುಮಾರ್ ಅಭಿನಯದ ಘೋಸ್ಟ್ ಮತ್ತು ಯುದ್ಧಕಾಂಡ ಎರಡೂ ಚಿತ್ರಗಳಲ್ಲಿ ನಟಿಸಿದ್ದಾರೆ. ಇವೆರಡು ಸದ್ಯ ನಿರ್ಮಾಣ ಹಂತದಲ್ಲಿವೆ. ಹೆಚ್ಚುವರಿಯಾಗಿ, ಅವರು ಈ ವರ್ಷ ಬಿಡುಗಡೆಗೆ ಸಿದ್ಧವಾಗಿರುವ ತೆಲುಗು ವೆಬ್ ಸರಣಿಯಲ್ಲೂ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com