ಸಾಮಾನ್ಯ ವ್ಯಕ್ತಿಯ ಕ್ರಾಂತಿಯ ಕಥೆಯು 'ಕ್ಷೇತ್ರಪತಿ'ಯ ಹೃದಯದಲ್ಲಿ ಅಡಗಿದೆ: ನಿರ್ದೇಶಕ ಶ್ರೀಕಾಂತ್ ಕಟಗಿ

ಮೊದಲ ಬಾರಿಗೆ ನಿರ್ದೇಶನದ ಹೊಣೆ ಹೊತ್ತಿರುವ ಶ್ರೀಕಾಂತ್ ಕಟಗಿ ಅವರು ತಮ್ಮ ಸ್ವಂತ ಜೀವನದಿಂದ ಪ್ರೇರಿತರಾಗಿ ಕ್ಷೇತ್ರಪತಿ ಸಿನಿಮಾಗೆ ಜೀವ ತುಂಬಿದ್ದಾರೆ. ತಮ್ಮ ಹಳ್ಳಿಯ ಅನುಭವಗಳು ಚಿತ್ರ ನಿರ್ದೇಶನಕ್ಕೆ ಹೇಗೆ ಆಳವಾಗಿ ಸಹಾಯ ಮಾಡಿದವು ಎಂಬುದನ್ನು ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಶ್ರೀಕಾಂತ್ ಕಟಗಿ
ಶ್ರೀಕಾಂತ್ ಕಟಗಿ

ಮೊದಲ ಬಾರಿಗೆ ನಿರ್ದೇಶನದ ಹೊಣೆ ಹೊತ್ತಿರುವ ಶ್ರೀಕಾಂತ್ ಕಟಗಿ ಅವರು ತಮ್ಮ ಸ್ವಂತ ಜೀವನದಿಂದ ಪ್ರೇರಿತರಾಗಿ ಕ್ಷೇತ್ರಪತಿ ಸಿನಿಮಾಗೆ ಜೀವ ತುಂಬಿದ್ದಾರೆ. 

'ನಾನು ಗದಗ ಸಮೀಪದ ಹಳ್ಳಿಯಲ್ಲಿ ಕೃಷಿಕ ಕುಟುಂಬದಲ್ಲಿ ಬೆಳೆದಿದ್ದೇನೆ ಮತ್ತು ನನ್ನ ಶಿಕ್ಷಣ ಮುಗಿಯುವವರೆಗೂ ನಾನು ಕೃಷಿ ಮಾಡಿದ್ದೇನೆ. ಆ ಸಮಯದಲ್ಲಿ, ರೈತರು ಎದುರಿಸಿದ ಹೋರಾಟಗಳನ್ನು ನಾನು ನೋಡಿದ್ದೇನೆ. ಆ ಹೋರಾಟ ನನ್ನಲ್ಲಿ ಹಾಗೆಯೇ ಉಳಿದಿತ್ತು. ನನ್ನ ಗ್ರಾಮಕ್ಕೆ ಭೇಟಿ ನೀಡಿದಾಗ ಸ್ನೇಹಿತನೊಂದಿಗಿನ ಮಾತುಕತೆಯು ಕ್ಷೇತ್ರಪತಿ ಸಿನಿಮಾ ಮಾಡಲು ನನ್ನನ್ನು ಮತ್ತಷ್ಟು ಪ್ರೇರೇಪಿಸಿತು' ಎಂದು ಹೇಳುತ್ತಾರೆ ಶ್ರೀಕಾಂತ್. 

ತಮ್ಮ ಹಳ್ಳಿಯ ಅನುಭವಗಳು ಚಿತ್ರ ನಿರ್ದೇಶನಕ್ಕೆ ಹೇಗೆ ಆಳವಾಗಿ ಸಹಾಯ ಮಾಡಿದವು ಎಂಬುದನ್ನು ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಗಮನಾರ್ಹ ವಿಚಾರವೆಂದರೆ, ಶ್ರೀಕಾಂತ್ ಯಾವುದೇ ಚಲನಚಿತ್ರ ಹಿನ್ನೆಲೆ ಅಥವಾ ನಿರ್ದೇಶನದ ಅನುಭವವಿಲ್ಲದೆ, ಧೈರ್ಯದಿಂದ ಈ ಸಿನಿಮಾವನ್ನು ಕೈಗೆತ್ತಿಕೊಂಡವರು. 'ಮುಂಬೈನ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ, ನಾನು ಚಿತ್ರಕಥೆಗಳ ಕುರಿತು ಕಾರ್ಯಾಗಾರಗಳಿಗೆ ಹಾಜರಾಗಿದ್ದೇನೆ. ನಾನು 2018ರಲ್ಲಿ ಕಿರುಚಿತ್ರ ಮಾಡಿದ್ದೇನೆ ಮತ್ತು ಈಗ ನಾನು ಕ್ಷೇತ್ರಪತಿಯೊಂದಿಗೆ ನನ್ನ ಚೊಚ್ಚಲ ಚಿತ್ರ ನಿರ್ದೇಶನ ಮಾಡುತ್ತಿದ್ದೇನೆ' ಎಂದರು.

ಹೊಸಬರಾದ ಶ್ರೀಕಾಂತ್ ನಟರ ಹಾಗೂ ನಿರ್ಮಾಪಕರ ವಿಶ್ವಾಸ ಗಳಿಸಿದ್ದು ಹೇಗೆ?

'ಕ್ಷೇತ್ರಪತಿ ಸಿನಿಮಾಗಾಗಿ ನಾನು ತಂದ ಕಂಟೆಂಟ್ ಮತ್ತು ಸಾಮರ್ಥ್ಯವನ್ನು ಅವರು ನೋಡಿದ್ದಾರೆ. ಅದು ಹೆಚ್ಚು ಮುಖ್ಯವಾಗಿದೆ. ನನಗೆ ಅನುಭವದ ಕೊರತೆಯಿದ್ದರೂ, ನನ್ನ ಸುತ್ತಲಿರುವ ನುರಿತ ತಂತ್ರಜ್ಞರು ಮತ್ತು ಕಲಾವಿದರು ನನಗೆ ಪ್ರಮುಖ ಬೆಂಬಲ ನೀಡಿದರು' ಎಂದು ಹೇಳಿದರು.

ಸಿನಿಮಾ ನಿರ್ದೇಶಕನಾಗಲು ಸ್ಥಿರವಾದ ಕೆಲಸವನ್ನು ಬಿಡುವುದು ಅಪಾಯವಲ್ಲವೇ?

'ನನ್ನ ಉತ್ತಮ ಸಂಬಳದ ಕೆಲಸವನ್ನು ಬಿಡುವುದು ಸರಳವಾಗಿರಲಿಲ್ಲ. ಆದರೆ, ಅಂತಿಮವಾಗಿ ನಾನು ನನ್ನ ಕನಸನ್ನು ಅನುಸರಿಸಲು ನಿರ್ಧರಿಸಿದೆ ಮತ್ತು ಕ್ಷೇತ್ರಪತಿಯೊಂದಿಗೆ ಅದನ್ನು ಜೀವಂತಗೊಳಿಸಿದೆ. ನಾನು ಅದಕ್ಕೆ ಸಿದ್ಧನಾಗಿದ್ದೆ' ಎಂದು ಅವರು ಹೇಳಿದರು.

ಕ್ಷೇತ್ರಪತಿಯಂತಹ ಚಿತ್ರ ಪ್ರೇಕ್ಷಕರ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

ದೈಹಿಕವಾಗಿ, ಆರ್ಥಿಕವಾಗಿ ಅಥವಾ ರಾಜಕೀಯವಾಗಿ ಶಕ್ತಿಯುತವಾಗಿಲ್ಲದ ಆರಂಭದಿಂದ ನಾಯಕ ಹೇಗೆ ಬೆಳೆಯುತ್ತಾನೆ ಎಂಬುದನ್ನು ಚಲನಚಿತ್ರವು ಚಿತ್ರಿಸುತ್ತದೆ. ತುಳಿತಕ್ಕೊಳಗಾದ ಒಬ್ಬ ಸಾಮಾನ್ಯ ವ್ಯಕ್ತಿಯು ಕ್ರಾಂತಿಯ ಭಾಗವಾಗುತ್ತಾನೆ ಎಂಬ ಕಲ್ಪನೆಯು ಕ್ಷೇತ್ರಪತಿಯ ಹೃದಯದಲ್ಲಿದೆ. ದೈನಂದಿನ ವ್ಯಕ್ತಿಯ ಹೋರಾಟಗಳು ಎಲ್ಲರಿಗೂ ಸಾರ್ವತ್ರಿಕವಾಗಿ ಅನುರಣಿಸುತ್ತದೆ.

ಕ್ಷೇತ್ರಪತಿ ಆಗಸ್ಟ್ 18 ರಂದು ಬಿಡುಗಡೆಯಾಗುತ್ತಿದೆ. ಆಶ್ರಗ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ವೈವಿಬಿ ಶಿವ ಸಾಗರ್ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com