ಗಮನ ಸೆಳೆಯುತ್ತಿದೆ 'ಸಿಕಾಡಾ' ಬಹುಭಾಷಾ ಸಿನಿಮಾ: ಆರು ಹಾಡುಗಳಿಗೆ ಎಲ್ಲಾ ಭಾಷೆಗಳಲ್ಲೂ ಪ್ರತ್ಯೇಕ ಟ್ಯೂನ್

ಕನ್ನಡ ಚಿತ್ರ 'ಸಿಕಾಡಾ' ಬಹುಭಾಷೆಗಳಲ್ಲಿ ತನ್ನ ಛಾಪು ಮೂಡಿಸಲು ಸಿದ್ಧವಾಗಿದೆ. ಚಿತ್ರತಂಡ ಸಿನಿಮಾವನ್ನು ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿದೆ. ಚಿತ್ರದ ಫಸ್ಟ್ ಲುಕ್ ಅನ್ನು ಮೇಘನಾ ರಾಜ್ ಸರ್ಜಾ ಮತ್ತು ಪ್ರಜ್ವಲ್ ದೇವರಾಜ್ ಬಿಡುಗಡೆ ಮಾಡಿದರು.
ಸಿಕಾಡಾ ಪೋಸ್ಟರ್ - ಶ್ರೀಜಿತ್ ಎಡವನ
ಸಿಕಾಡಾ ಪೋಸ್ಟರ್ - ಶ್ರೀಜಿತ್ ಎಡವನ

ಕನ್ನಡ ಚಿತ್ರ 'ಸಿಕಾಡಾ' ಬಹುಭಾಷೆಗಳಲ್ಲಿ ತನ್ನ ಛಾಪು ಮೂಡಿಸಲು ಸಿದ್ಧವಾಗಿದೆ. ಚಿತ್ರತಂಡ ಸಿನಿಮಾವನ್ನು ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿದೆ. ಚಿತ್ರದ ಫಸ್ಟ್ ಲುಕ್ ಅನ್ನು ಮೇಘನಾ ರಾಜ್ ಸರ್ಜಾ ಮತ್ತು ಪ್ರಜ್ವಲ್ ದೇವರಾಜ್ ಬಿಡುಗಡೆ ಮಾಡಿದರು.

ಸಿಕಾಡಾ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿರುವ ಸಂಗೀತ ನಿರ್ದೇಶಕ ಶ್ರೀಜಿತ್ ಎಡವನ ಅವರು ತಾಜಾ ಮತ್ತು ಅನುಭವಿ ಪ್ರತಿಭೆಗಳ ಮಿಶ್ರಣವನ್ನು ಒಟ್ಟುಗೂಡಿಸುತ್ತಿದ್ದಾರೆ.

ಟರ್ನ್ ಫಿಲ್ಮ್ಸ್ ಮತ್ತು ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ ಈ ಚಿತ್ರದಲ್ಲಿ ವಂದನಾ ಮೆನನ್ ಮತ್ತು ಗೋಪಕುಮಾರ್ ಪಿ, ರಜಿತ್ ಸಿಆರ್, ಗಾಯತ್ರಿ ಮೇಯರ್ ಮತ್ತು ಜೈಸ್ ಜೋಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಬೆಂಗಳೂರು, ಅಟ್ಟಪಾಡಿ, ವಯನಾಡು, ಕೊಚ್ಚಿ ಮುಂತಾದ ಕಡೆಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ.

ತಮಿಳು ಮತ್ತು ಮಲಯಾಳಂನಲ್ಲಿ ಹೆಸರುವಾಸಿಯಾದ ಶ್ರೀಜಿತ್ ಎಡವನ ಅವರು ಈ ಚಿತ್ರಕ್ಕಾಗಿ ಒಟ್ಟು ಆರು ಹಾಡುಗಳನ್ನು ರಚಿಸಿದ್ದಾರೆ. ವಿಶೇಷ ಎಂದರೆ, ಸ್ಥಳೀಯ ಸಂವೇದನೆಗಳನ್ನು ಗಮನದಲ್ಲಿಟ್ಟುಕೊಂಡು, ಆ ಪ್ರದೇಶದ ಸಾಂಸ್ಕೃತಿಕ ಸಾರದೊಂದಿಗೆ ಹಾಡುಗಳನ್ನು ಸಂಯೋಜಿಸಲು ಅವರು ಪ್ರತಿ ಭಾಷೆಗೆ ಆರು ಹಾಡೂಗಳ ಟ್ಯೂನ್‌ಗಳನ್ನು ಬದಲಿಸಿದ್ದಾರೆ. ಈ ಮೂಲಕ ನಾಲ್ಕು ಭಾಷೆಗಳಲ್ಲಿ ಒಟ್ಟು 24 ಹಾಡುಗಳ ಸಂಯೋಜನೆಗಳಿಗೆ ಕಾರಣವಾಗುತ್ತದೆ.

ಪ್ಯಾನ್ ಇಂಡಿಯಾ ಚಿತ್ರ ಮಾಡುವಾಗ ಚಿತ್ರದ ಹಾಡುಗಳಿಗೆ ಸಾಮಾನ್ಯವಾಗಿ ಒಂದೇ ಟ್ಯೂನ್ ಇರುತ್ತದೆ. ಆಯಾ ಭಾಷೆಯಲ್ಲಿ ಸಾಹಿತ್ಯ ಮಾತ್ರ ಬದಲಾಯಿಸಿ ರಿಲೀಸ್ ಮಾಡಲಾಗುತ್ತದೆ. ಆದರೆ, ‘ಸಿಕಾಡಾ’ ಚಿತ್ರದಲ್ಲಿ ಪ್ರತಿ ಆವೃತ್ತಿಗೂ ಬೇರೆ ಬೇರೆ ಟ್ಯೂನ್ ಕಂಪೋಸ್ ಮಾಡಲಾಗಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ನಾಲ್ಕು ಭಾಷೆಯಿಂದ ಒಟ್ಟು 24 ಟ್ಯೂನ್ ಕಂಪೋಸ್ ಮಾಡಲಾಗಿದೆ. 
ಚಿತ್ರದ ಛಾಯಾಗ್ರಹಣವನ್ನು ನವೀನ್ ರಾಜ್ ನಿರ್ವಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com