ಗಂಟುಮೂಟೆ, ಟಾಮ್ ಅಂಡ್ ಜೆರ್ರಿ ಸಿನಿಮಾಗಳ ಮೂಲಕ ಹೆಸರುವಾಸಿಯಾಗಿರುವ ನಟ ನಿಶ್ಚಿತ್ ಕೊರೋಡಿ ಇದೀಗ ‘Supplier ಶಂಕರ’ ಮೂಲಕ ತಮ್ಮ ಮೂರನೇ ಚಿತ್ರದಲ್ಲಿ ಮಾಸ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರತಂಡ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಪೊಲೀಸ್ ಠಾಣೆಯ ಲಾಕಪ್ ಕಂಬಿಗಳ ಹಿಂದೆ ನಿಂತಿರುವ ವ್ಯಕ್ತಿಯನ್ನು ತೋರಿಸಿದೆ.
ರಂಜಿತ್ ಸಿಂಗ್ ರಜಪೂತ್ ಬರೆದು ನಿರ್ದೇಶಿಸಿರುವ Supplier ಶಂಕರ ಚಿತ್ರದ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ತಯಾರಿ ನಡೆಸಲಾಗುತ್ತಿದೆ.
ತ್ರಿನೇತ್ರ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ಎಂ ಚಂದ್ರಶೇಖರ್ ಮತ್ತು ನಾಗೇಂದ್ರ ಸಿಂಗ್ ನಿರ್ಮಿಸಿರುವ 'Supplier ಶಂಕರ' ಸಿನಿಮಾವನ್ನು ಬಾರ್ ಸಪ್ಲೈಯರ್‌ನ ಜೀವನವನ್ನು ಕೇಂದ್ರೀಕರಿಸಿದ ಆ್ಯಕ್ಷನ್ ಡ್ರಾಮಾ ಎಂದು ಬಿಂಬಿಸಲಾಗಿದೆ.
ಲಗೋರಿ ಖ್ಯಾತಿಯ ದೀಪಿಕಾ ಆರಾಧ್ಯ ನಾಯಕಿಯಾಗಿ ನಟಿಸಿದ್ದು, ಚಿತ್ರದಲ್ಲಿ ಗೋಪಾಲ್ ಕೃಷ್ಣ ದೇಶಪಾಂಡೆ, ಜ್ಯೋತಿ ರೈ ಮತ್ತು ನವೀನ್ ಡಿ ಪಡೀಲ್ ಅವರಂತಹ ಪ್ರಮುಖ ನಟರು ನಿರ್ಣಾಯಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದ ಸಂಗೀತ ಸಂಯೋಜನೆಯನ್ನು ರವಿ ಬಸ್ರೂರು ಮತ್ತು ಅವರ ತಂಡ ವಹಿಸಿಕೊಂಡಿದೆ.
Advertisement