ವಿದೇಶಿ ನೆಲದಲ್ಲಿ ಕನ್ನಡದ ಕಂಪು: ಈಶಾನಿಗೆ ವಾಸುಕಿ ವೈಭವ್ ಸಾಥ್; 'ಫ್ರೀಡಂ’ ಆಲ್ಬಂ ಸಾಂಗ್‌ ರಿಲೀಸ್

ಕನ್ನಡಿಗರು ವಿದೇಶದಲ್ಲಿದ್ದುಕೊಂಡೇ ಕನ್ನಡ ಭಾಷೆಯ ಘಮವನ್ನು ಪಸರಿಸುತ್ತಿದ್ದಾರೆ. ಅಂಥವರಲ್ಲಿ ಗಾಯಕಿ ಈಶಾನಿ ಕೂಡ ಒಬ್ಬರು. ಮೂಲತಃ ಮೈಸೂರಿನವರಾದ ಈಶಾನಿ ಸದ್ಯ ದುಬೈನಲ್ಲಿ ನೆಲೆಸಿದ್ದು, ವಿದೇಶಿ ನೆಲದಲ್ಲಿ ಕನ್ನಡದ ಕಂಪು ಹರಡುತ್ತಿದ್ದಾರೆ.
ಈಶಾನಿ
ಈಶಾನಿ

ಕನ್ನಡಿಗರು ವಿದೇಶದಲ್ಲಿದ್ದುಕೊಂಡೇ ಕನ್ನಡ ಭಾಷೆಯ ಘಮವನ್ನು ಪಸರಿಸುತ್ತಿದ್ದಾರೆ. ಅಂಥವರಲ್ಲಿ ಗಾಯಕಿ ಈಶಾನಿ ಕೂಡ ಒಬ್ಬರು. ಮೂಲತಃ ಮೈಸೂರಿನವರಾದ ಈಶಾನಿ ಸದ್ಯ ದುಬೈನಲ್ಲಿ ನೆಲೆಸಿದ್ದು, ವಿದೇಶಿ ನೆಲದಲ್ಲಿ ಕನ್ನಡದ ಕಂಪು ಹರಡುತ್ತಿದ್ದಾರೆ.

ಚಿಕ್ಕವರಿದ್ದಾಗಿನಿಂದಲೇ ಗಾಯನದ ಬಗ್ಗೆ ಒಲವು ಬೆಳೆಸಿಕೊಂಡು ಬಂದಿದ್ದ ಈಶಾನಿ, ಈಗಾಗಲೇ 17 ಇಂಗ್ಲೀಷ್ ಅಲ್ಬಮ್ ಸಾಂಗ್ ಹಾಡಿದ್ದಾರೆ. ಕನ್ನಡದಲ್ಲೂ ಮೂರು ಆಲ್ಬಂ ಗೀತೆಗಳನ್ನು ಹಾಡಿ ಅದರಲ್ಲಿ ಹೆಜ್ಜೆ ಹಾಕಿದ್ದಾರೆ. ಆ ಪೈಕಿ ಇತ್ತೀಚೆಗಷ್ಟೇ ಕನ್ನಡದ ಮೂರನೇ ಆಲ್ಬಂ ಗೀತೆಯಾದ ‘ಫ್ರೀಡಮ್’ಅನ್ನು ಬಿಡುಗಡೆ ಮಾಡಲಾಯಿತು. ಈಶಾನಿ ಅವರ ಈ ಮೊದಲು ರೈಟರ್ ಹಾಗೂ ಊರ್ಮಿಳ ಆಲ್ಬಮ್ ಸಾಂಗ್​ಗಳನ್ನು ಮಾಡಿದ್ದರು.

ಇದೇ ಸಂದರ್ಭದಲ್ಲಿ ಈ ಗೀತೆಯ ನಿರ್ದೇಶಕ ಗಿರಿ ಗೌಡ ಅವರು ಆ್ಯಕ್ಷನ್ ಕಟ್ ಹೇಳಲಿರುವ ‘ಥಗ್ಸ್ ಆಫ್ 1980’ ಚಿತ್ರದ ಟೈಟಲ್ ಲಾಂಚ್ ಕೂಡ ಮಾಡಲಾಯಿತು.

'ಫ್ರೀಡಂ’ ಆಲ್ಬಂ ಮಹಿಳೆಯ ಶಕ್ತಿ ಮತ್ತು ಸಮರ್ಪಣೆಯನ್ನು ಕೊಂಡಾಡುವ ಹಾಡುಗಳನ್ನು ಹೊಂದಿದೆ. ಹಾಡಿಗೆ ವಾಸುಕಿ ವೈಭವ್ ಅವರು ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ. ನೃತ್ಯ ಸಂಯೋಜನೆಯನ್ನು ಭರತ್ ರಾಜ್  ಛಾಯಾಗ್ರಹಣವನ್ನು ಕೀರ್ತನ್ ಪೂಜಾರಿ ನಿರ್ವಹಿಸಿದ್ದರೆ, ಗಿರಿ ಗೌಡ ನಿರ್ದೇಶನ ಹಾಗೂ ವೆಂಕಟ್ ಅವರು ನಿರ್ಮಾಣ ಮಾಡಿದ್ದಾರೆ.

ಆಲ್ಬಂನ ಯಶಸ್ವಿ ಬಿಡುಗಡೆ ಬಳಿಕ ಮಾತನಾಡಿದ ಈಶಾನಿ ಅವರು, ಸಂಗೀತದ ಬಗ್ಗೆ ನನ್ನಲ್ಲಿರುವ ಅಚಲವಾದ ಉತ್ಸಾಹವು ನನಗೆ ಪ್ರೇರಣೆ ನೀಡಿತು. ಹೆತ್ತವರ ಹೆಮ್ಮೆ ಪಡುವಂತೆ ಮಾಡಲು ಕನ್ನಡದಲ್ಲಿ ಹಾಡು ಹಾಡಲು ಸದಾಕಾಲ ಬಯಸುತ್ತೇನೆ. ಇದೀಗ ಸಿನಿಮಾಗಳಲ್ಲೂ ಧ್ವನಿ ನೀಡಲು ಬಯಸುತ್ತಿದ್ದೇನೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com