
ಶೂನ್ಯಾ ನಿರ್ದೇಶನದ, ಲೂಸ್ ಮಾದ ಯೋಗಿ ನಟಿಸಿರುವ ರೋಜಿ ಸಿನಿಮಾ ಸ್ಟೈಲಿಶ್ ಗ್ಯಾಂಗ್‌ಸ್ಟರ್ ಡ್ರಾಮಾ ಆಗಿದ್ದು, ಸದ್ಯ ನಿರ್ಮಾಣ ಹಂತದಲ್ಲಿದೆ. ಚಿತ್ರದ ತಾರಾಗಣದ ಕುರಿತು ಬಹಳ ಎಚ್ಚರಿಕೆಯಿಂದಿರುವ ನಿರ್ದೇಶಕರು ಪ್ರಮುಖ ಪಾತ್ರವೊಂದಕ್ಕೆ ತಮಿಳು ನಟ ಸ್ಯಾಂಡಿ ಅವರನ್ನು ಆಯ್ಕೆ ಮಾಡಿದ್ದಾರೆ. ಇತ್ತೀಚಿನ ಅಪ್‌ಡೇಟ್ ಪ್ರಕಾರ, ನಟ ಶ್ರೀನಗರ ಕಿಟ್ಟಿ ಇದೀಗ ಚಿತ್ರತಂಡ ಸೇರಿಕೊಂಡಿದ್ದಾರೆ.
ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ 2 ನಲ್ಲಿ ಬ್ಯುಸಿಯಾಗಿರುವ ನಟ ಶ್ರೀನಗರ ಕಿಟ್ಟಿ, ರೋಜಿ ಮೂಲಕ 50ನೇ ಚಿತ್ರದ ಮೈಲಿಗಲ್ಲು ಸಾಧಿಸಿದ್ದಾರೆ. ಕಿಟ್ಟಿ ಅವರು ಯೋಗಿ ಜೊತೆಗೆ ಕ್ರಿಸ್ಟೋಫರ್ ಆಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿಟ್ಟಿ ಅವರ ಪಾತ್ರವನ್ನು ಅನಾವರಣಗೊಳಿಸುವ ಪೋಸ್ಟರ್ ಮೂಲಕ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ಶ್ರೀನಗರ ಕಿಟ್ಟಿ ಅವರು ಚಿತ್ರತಂಡ ಸೇರಿರುವ ಬಗ್ಗೆ ಥ್ರಿಲ್ ಆಗಿರುವ ಯೋಗಿ, 'ನಾವು ಕೊನೆಯದಾಗಿ ಪುನೀತ್ ರಾಜ್‌ಕುಮಾರ್ ಅಭಿನಯದ ಹುಡುಗರು ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಸ್ವಲ್ಪ ವಿರಾಮದ ನಂತರ ನಾವು ಮತ್ತೆ ತೆರೆ ಹಂಚಿಕೊಳ್ಳುತ್ತೇವೆ' ಎಂದು ಉಲ್ಲೇಖಿಸಿದ್ದಾರೆ.
ನಿರ್ಮಾಪಕ ಡಿವಿ ರಾಜೇಶ್ ಬೆಂಬಲದ ರೋಜಿ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ.
Advertisement