ಮನರಂಜನೆಯ ರಸದೌತಣ ನೀಡಲು ಬರುತ್ತಿದೆ ಬ್ಯಾಕ್ ಬೆಂಚರ್ಸ್; ಮೊದಲ ಹಾಡು ಬಿಡುಗಡೆ

ಬಿಆರ್ ರಾಜಶೇಖರ್ ನಿರ್ದೇಶನದ ಬ್ಯಾಕ್ ಬೆಂಚರ್ಸ್ ಸಿನಿಮಾ, ಕಾಮಿಡಿ ಎಂಟರ್‌ಟೈನರ್ ಆಗಿದ್ದು, ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ಇದನ್ನು ವಿಜಯ್ ಪ್ರಕಾಶ್ ಹಾಡಿದ್ದು, ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ ಸಂಯೋಜಿಸಿದ್ದಾರೆ. 
ಬ್ಯಾಕ್ ಬೆಂಚರ್ಸ್ ಚಿತ್ರದ ಸ್ಟಿಲ್
ಬ್ಯಾಕ್ ಬೆಂಚರ್ಸ್ ಚಿತ್ರದ ಸ್ಟಿಲ್

ಬಿಆರ್ ರಾಜಶೇಖರ್ ನಿರ್ದೇಶನದ ಬ್ಯಾಕ್ ಬೆಂಚರ್ಸ್ ಸಿನಿಮಾ, ಕಾಮಿಡಿ ಎಂಟರ್‌ಟೈನರ್ ಆಗಿದ್ದು, ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ಇದನ್ನು ವಿಜಯ್ ಪ್ರಕಾಶ್ ಹಾಡಿದ್ದು, ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ ಸಂಯೋಜಿಸಿದ್ದಾರೆ. ಡಿಜಿಟಲ್ ಬಿಡುಗಡೆಯನ್ನು ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಮಾಡಿದ್ದಾರೆ.

ಈ ಚಿತ್ರ ತಯಾರಿಕೆಯ ಹಿಂದಿನ ಪ್ರಯಾಣದ ಬಗ್ಗೆ ಮಾತನಾಡುವ ರಾಜಶೇಖರ್, 'ಬ್ಯಾಕ್ ಬೆಂಚರ್ಸ್‌ ಸಿನಿಮಾ ಮನರಂಜನೆಯನ್ನು ಒದಗಿಸುವುದರ ಮೇಲೆ ಪ್ರಾಥಮಿಕ ಗಮನವನ್ನು ನೀಡಲಾಗಿದೆ. ಕಾಲೇಜು ದಿನಗಳಿಗೆ ಸಂಬಂಧಿಸಿದ ಕಚಗುಳಿಯಿಡುವ ಭಾವನೆಯನ್ನು ಹುಟ್ಟುಹಾಕುವುದು ಗುರಿಯಾಗಿದೆ. ಚಲನಚಿತ್ರವು ಶುದ್ಧ ಮನರಂಜನೆಯನ್ನು ನೀಡುತ್ತದೆ' ಎನ್ನುತ್ತಾರೆ.

ಚಿತ್ರದ ನಿರ್ಮಾಪಕರಾಗಿಯೂ ಜವಾಬ್ದಾರಿ ವಹಿಸಿರುವ ರಾಜಶೇಖರ್, ಬ್ಯಾಕ್ ಬೆಂಚರ್ಸ್ ಚಿತ್ರೀಕರಣವನ್ನು 30 ದಿನಗಳಲ್ಲಿ ಪೂರ್ಣಗೊಳಿಸಿದ್ದಾರೆ. ಹಲವಾರು ಉದಯೋನ್ಮುಖ ಪ್ರತಿಭೆಗಳನ್ನು ಒಳಗೊಂಡಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. 'ಸಂಗೀತ ನಿರ್ದೇಶಕ ಮತ್ತು ಛಾಯಾಗ್ರಾಹಕ ಮನೋಹರ್ ಜೋಶಿ ಅವರ ಸೃಜನಶೀಲ ಕೊಡುಗೆಗಳಿಗೆ ನಾನು ತುಂಬಾ ಋಣಿಯಾಗಿದ್ದೇನೆ' ಎಂದು ಅವರು ಹೇಳಿದರು.

ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಸಂಗೀತ ಪ್ರೇಕ್ಷಕರ ಮನಸೂರೆಗೊಳ್ಳಲಿದೆ ಎಂಬ ವಿಶ್ವಾಸವನ್ನು ನಿರ್ದೇಶಕರು ಹೊರಹಾಕಿದ್ದಾರೆ.

ಪಿಪಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಅರವಿಂದ್ ಕುಪ್ಲಿಕರ್, ರಂಜನ್ ನರಸಿಂಹ ಮೂರ್ತಿ, ಜತಿನ್ ಆರ್ಯನ್, ಆಕಾಶ್, ಶಶಾಂಕ್ ಸಿಂಗ್, ಮಾನ್ಯ ಗೌಡ, ಕುಂಕುಮ್, ಅನುಷಾ ಸುರೇಶ್, ಮನೋಜ್ ಶೆಟ್ಟಿ, ನಮಿತಾ ಗೌಡ ಸೇರಿದಂತೆ ಹಲವರು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com