ವೈಜನಾಥ ಬಿರಾದಾರ್ , ರೋಹಿತ್ ಪಾಂಡವಪುರ
ವೈಜನಾಥ ಬಿರಾದಾರ್ , ರೋಹಿತ್ ಪಾಂಡವಪುರ

ರೈತರ ಕಥೆ ಬಿಂಬಿಸುವ ಸಿನಿಮಾಗಳು ನಿರಂತರ ಗಮನಾರ್ಹ: ನಟ ವೈಜನಾಥ ಬಿರಾದಾರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತರುಣ್ ಕಿಶೋರ್ ಸುಧೀರ್ ನಿರ್ದೇಶನದ 'ಕಾಟೇರ'' ಮಾಲಾಶ್ರೀ ಅವರ ಪುತ್ರಿ ಆರಾಧನಾ ಅವರ ಲಾಂಚಿಂಗ್ ಚಿತ್ರ ಮಾತ್ರವಲ್ಲದೇ, ಖ್ಯಾತ ನಟ ವೈಜನಾಥ್ ಬಿರಾದಾರ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಬಾಲ ನಟ ರೋಹಿತ್ ಪಾಂಡವಪುರ ಅವರನ್ನು ಒಳಗೊಂಡಿದೆ.
Published on

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತರುಣ್ ಕಿಶೋರ್ ಸುಧೀರ್ ನಿರ್ದೇಶನದ 'ಕಾಟೇರ'' ಮಾಲಾಶ್ರೀ ಅವರ ಪುತ್ರಿ ಆರಾಧನಾ ಅವರ ಲಾಂಚಿಂಗ್ ಚಿತ್ರ ಮಾತ್ರವಲ್ಲದೇ, ಖ್ಯಾತ ನಟ ವೈಜನಾಥ್ ಬಿರಾದಾರ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಬಾಲ ನಟ ರೋಹಿತ್ ಪಾಂಡವಪುರ ಅವರನ್ನು ಒಳಗೊಂಡಿದೆ. ಡಿಸೆಂಬರ್ 29ಕ್ಕೆ ಬಿಡುಗಡೆ ಸಜ್ಜಾಗಿರುವ ಚಿತ್ರದಲ್ಲಿ ಬಲವಾದ ಮತ್ತು ಆಸಕ್ತಿದಾಯಕ ಪಾತ್ರಗಳಿಂದ ಹೆಚ್ಚಿನ ಕುತೂಹಲ ಕೆರಳಿಸಿದೆ. 

ಬಿರಾದಾರ್, 600 ಕ್ಕೂ ಹೆಚ್ಚು ಚಲನಚಿತ್ರಗಲ್ಲಿ ನಟಿಸಿರುವ ಅನುಭವಿ ನಟ ಮತ್ತು 90 ಬಿಡಿ ಮನೆಗ್ ನಡಿ ಚಿತ್ರದಲ್ಲಿ 70 ನೇ ವಯಸ್ಸಿನಲ್ಲಿ ಪ್ರಮುಖ ಪಾತ್ರದಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ. ಮುಂಬರುವ ಕಾಟೇರದಲ್ಲಿನ ತಮ್ಮ ಪಾತ್ರ ಕುರಿತು ಮಾತನಾಡಿದ ಅವರು, ಚಿತ್ರದಲ್ಲಿ ದರ್ಶನ್ ಅವರ ಪ್ರಯಾಣದೊಂದಿಗೆ ಸಾಗುವ ಪಾತ್ರ ನನ್ನದಾಗಿದೆ. ಹಳ್ಳಿಯೊಂದರ ಹಿನ್ನೆಲೆಯ ಈ ಪಾತ್ರ ನನ್ನಲ್ಲಿ ಆಳವಾಗಿ ಪ್ರಭಾವ ಬೀರಿದೆ ಎಂದು ವಿವರಿಸಿದರು. 

ದರ್ಶನ್ ಅವರ ಹಿಂದಿನ ಸುಂಟರಗಾಳಿ ಮತ್ತು ದತ್ತ ಸಿನಿಮಾಗಳಲ್ಲಿ ಅವರೊಂದಿಗೆ ನಟಿಸಿದ್ದರೂ ಕಾಟೇರದಲ್ಲಿನ ಪಾತ್ರ ಬಿರಾದಾರ್‌ಗೆ ವಿಶೇಷ ಪ್ರಾಮುಖ್ಯತೆ ನೀಡಿದೆ. ಅವರಿಗೆ  ಗಣನೀಯ ಉಪಸ್ಥಿತಿ ಒದಗಿಸಿದೆ. "ರೈತರ ಕಥೆಗಳನ್ನು ಚಿತ್ರಿಸುವ ಚಲನಚಿತ್ರಗಳು ನಿರಂತರ ಗಮನಾರ್ಹವಾಗಿವೆ ಮತ್ತು  ಈ ಸಾರವನ್ನು ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಸುಂದರವಾಗಿ ಸೆರೆಹಿಡಿದಿರುವುದಕ್ಕೆ ಅತೀವ ಸಂತಸವಾಗಿದೆ ಎಂದರು. 

ಸತ್ಯ ಪ್ರಕಾಶ್ ಅವರ ಒಂದಲ್ಲಾ ಎರಡಲ್ಲಾ ಚಿತ್ರದಲ್ಲಿನ  ಅಭಿನಯಕ್ಕಾಗಿ  ರಾಷ್ಟ್ರ ಪ್ರಶಸ್ತಿ ಪಡೆದಿರುವ ಬಾಲ ನಟ ರೋಹಿತ್, ಕಾಟೇರದಲ್ಲಿ ಉದ್ಯಮದ ದಿಗ್ಗಜರೊಂದಿಗೆ ಕೆಲಸ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಪರಿಣಿತ ಕಲಾವಿದರೊಂದಿಗೆ ನಟಿಸುವುದು ಅತ್ಯುನ್ನತ ಅನುಭವ" ಎಂದರು.  ಅವರು ಈ ಚಿತ್ರದಲ್ಲಿ ಪುಟ್ಟರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಟ್‌ನಲ್ಲಿ ದರ್ಶನ್ ಅವರ ವರ್ತನೆಯನ್ನು ರೋಹಿತ್ ಶ್ಲಾಘಿಸಿದ್ದಾರೆ. "1970 ರ ದಶಕದ ಸಾಂಸ್ಕೃತಿಕತೆ ಬಗ್ಗೆ ಕಾಟೇರಾ ಚಿತ್ರೀಕರಣವು ನನಗೆ ಅಮೂಲ್ಯವಾದ ತಿಳುವಳಿಕೆಯನ್ನು ನೀಡಿತು ಎಂದು ರೋಹಿತ್ ವಿವರಿಸಿದರು.

ಡೇಶ ಕೆ ಹಂಪಿ ಮತ್ತು ತರುಣ್ ಸುಧೀರ್ ಕಥೆ ಬರೆದಿರುವ ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿರುವ ಕಾಟೇರ ಚಿತ್ರದಲ್ಲಿ ಜಗಪತಿ ಬಾಬು ಕೂಡ ಮಹತ್ವದ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಅವರ ಸಂಗೀತ ಮತ್ತು ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com