ಕಿರಿಕ್ ಪಾರ್ಟಿ ಆಯ್ತು, ಈಗ ಬ್ಯಾಚುಲರ್ ಪಾರ್ಟಿ: 7 ವರ್ಷಗಳ ಬಳಿಕ ರಕ್ಷಿತ್ ಶೆಟ್ಟಿ ಟೀಂನಿಂದ ಬರುತ್ತಿದೆ ಹೊಸ ಸಿನಿಮಾ!

7 ವರ್ಷಗಳ ಹಿಂದೆ ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ತಂಡದಿಂದ ಬಂದ “ಕಿರಿಕ್ ಪಾರ್ಟಿ” ಹಿರಿ ಕಿರಿಯರೆನ್ನದೆ ಎಲ್ಲರನ್ನೂ ರಂಜಿಸಿ ಗಲ್ಲಾಪೆಟ್ಟಿಗೆಯನ್ನು ಧೂಳೀಪಟ ಮಾಡಿ ದಾಖಲೆ ಬರೆದಿತ್ತು. ಈ ಸಿನಿಮಾ ಬಿಡುಗಡೆಯಾಗಿ ಏಳು ವರ್ಷ ಕಳೆದಿದ್ದು, ಈ ನಡುವಲ್ಲೇ ಚಿತ್ರತಂಡ ಹೊಸ ಚಿತ್ರವನ್ನು ಘೋಷಣೆ ಮಾಡಿ, ಸಿನಿಮಾದ ಫಸ್ಟ್‌ಲುಕ್‌'ನ್ನು ಬಿಡುಗಡೆ ಮಾಡಿದೆ.
ಬ್ಯಾಚುಲರ್ ಪಾರ್ಟಿ ಚಿತ್ರದ ಪೋಸ್ಟರ್.
ಬ್ಯಾಚುಲರ್ ಪಾರ್ಟಿ ಚಿತ್ರದ ಪೋಸ್ಟರ್.

7 ವರ್ಷಗಳ ಹಿಂದೆ ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ತಂಡದಿಂದ ಬಂದ “ಕಿರಿಕ್ ಪಾರ್ಟಿ” ಹಿರಿ ಕಿರಿಯರೆನ್ನದೆ ಎಲ್ಲರನ್ನೂ ರಂಜಿಸಿ ಗಲ್ಲಾಪೆಟ್ಟಿಗೆಯನ್ನು ಧೂಳೀಪಟ ಮಾಡಿ ದಾಖಲೆ ಬರೆದಿತ್ತು. ಈ ಸಿನಿಮಾ ಬಿಡುಗಡೆಯಾಗಿ ಏಳು ವರ್ಷ ಕಳೆದಿದ್ದು, ಈ ನಡುವಲ್ಲೇ ಚಿತ್ರತಂಡ ಹೊಸ ಚಿತ್ರವನ್ನು ಘೋಷಣೆ ಮಾಡಿ, ಸಿನಿಮಾದ ಫಸ್ಟ್‌ಲುಕ್‌'ನ್ನು ಬಿಡುಗಡೆ ಮಾಡಿದೆ.

ಚಿತ್ರಕ್ಕೆ ಬ್ಯಾಚುಲರ್ ಪಾರ್ಟಿ ಎಂದು ಶೀರ್ಷಿಕೆ ನೀಡಲಾಗಿದೆ, ‘ಕಿರಿಕ್ ಪಾರ್ಟಿ’, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಥೆಯೊಂದು ಶುರುವಾಗಿದೆ. ಅವನೇ ಶ್ರೀಮನ್ನಾರಾಯಣ, 777 ಚಾರ್ಲಿ ಸಿನಿಮಾದಲ್ಲಿ ಬರಹಗಾರರಾಗಿ ಕಾರ್ಯನಿರ್ವಹಿಸಿದ್ದ ಅಭಿಜಿತ್ ಮಹೇಶ್, ಬ್ಯಾಚುಲರ್ ಪಾರ್ಟಿ ಸಿನಿಮಾ ಮೂಲಕ ನಿರ್ದೇಶಕ್ಕಿಳಿಯುತ್ತಿದ್ದಾರೆ.

ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದ್ದು, ಫಸ್ಟ್ ಲುಕ್ ನಲ್ಲಿ ಅಚ್ಯುತ್ ಕುಮಾರ್, ದಿಗಂತ್ ಹಾಗೂ ಲೂಸ್ ಮಾದ ಯೋಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನಲ್ಲಿ ಬ್ಯಾಂಕಾಕ್‌ನ ಕೆಲವು ಸ್ಥಳಗಳು ಕಂಡು ಬಂದಿದ್ದು, ವೀಲ್‌ಚೇರ್‌ನಲ್ಲಿ ಅಚ್ಯುತ್‌ ಕುಳಿತುಕೊಂಡಿದ್ದರೆ, ಅವರ ಹಿಂದೆ ಯೋಗಿ, ದಿಗಂತ್‌ ಓಡಿ ಬರುತ್ತಿರುವ ದೃಶ್ಯ ಕಂಡುಬಂದಿದೆ. ಸದ್ಯ ಈ ಫಸ್ಟ್ ಲುಕ್ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ ಈ ಪೋಸ್ಟರ್‌ ಅನ್ನು ಹ್ಯಾಂಡ್‌ ಸ್ಕೆಚ್‌ ಮೂಲಕ ಡಿಸೈನ್‌ ಮಾಡಲಾಗಿದೆ.

ಪೋಸ್ಟರ್‌ ಜೊತೆಗೆ ಅದಕ್ಕೊಂದು ಸಣ್ಣ ವೀಡಿಯೋ ವೊಂದನ್ನು ರಿಲೀಸ್‌ ಮಾಡಿದೆ ಚಿತ್ರತಂಡ. ಇಲ್ಲಿನ ಹಿನ್ನೆಲೆ ಸಂಗೀತ ಗಮನ ಸೆಳೆಯುವಂತಿದೆ.

<strong>ಬ್ಯಾಚುಲರ್ ಪಾರ್ಟಿ ಶೂಟಿಂಗ್ ಸೆಟ್ ದೃಶ್ಯ</strong>
ಬ್ಯಾಚುಲರ್ ಪಾರ್ಟಿ ಶೂಟಿಂಗ್ ಸೆಟ್ ದೃಶ್ಯ

ಚಿತ್ರದ ಕುರಿತು ಮಾಹಿತಿ ನೀಡಿದ ಅಭಿಜಿತ್ ಮಹೇಶ್ ಅವರು, ಕಿರಿಕ್ ಪಾರ್ಟಿಗಿಂತಲೂ ಬ್ಯಾಚುಲರ್ಸ್ ಪಾರ್ಟಿ ರೋಮಾಂಚಕವಾಗಿರುತ್ತದೆ. ಕಿರಿಕ್ ಪಾರ್ಟಿ ಹಾಸ್ಯ ಮತ್ತು ಕಾಲೇಜು ಕ್ಯಾಂಪಸ್ ಜೀವನದವನ್ನು ಹೇಳಿತ್ತು. ಆದರೆ, ಬ್ಯಾಚುಲರ್ ಪಾರ್ಟಿ ಕಾಲೇಜು ನಂತರದ ಜೀವನ, ಮದುವೆ ಹಾಗೂ ಉದ್ಯೋಗದ ಕುರಿತು ಇರಲಿದೆ. ಇದು ನಿಜ ಜೀವನದ ಅನುಭವಗಳೊಂದಿಗೆ ಅನುರಣಿಸುತ್ತದೆ. ಚಿತ್ರದ ಬಹುತೇಕ ಚಿತ್ರೀಕರಣ ಥೈಲ್ಯಾಂಡ್ ನಲ್ಲಿ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಪರಂವಃ ಸ್ಟುಡಿಯೋಸ್‌ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರವಿಂದ್ ಛಾಯಾಚಿತ್ರಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ನಟಿ ಸಿರಿ ರವಿಕುಮಾರ್‌ ತಾರಾಬಳಗದಲ್ಲಿದ್ದಾರೆ.

ಪರಂವಃ ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ರಕ್ಷಿತ್‌ ಶೆಟ್ಟಿ ಹಾಗೂ ಅಮಿತ್‌ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರವಿಂದ್‌ ಛಾಯಾಗ್ರಹಣ, ಅರ್ಜುನ್‌ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಮುಖ ಪಾತ್ರಧಾರಿಗಳಲ್ಲದೆ, ಬ್ಯಾಚುಲರ್ ಪಾರ್ಟಿಯಲ್ಲಿ ಸಿರಿ ರವಿಕುಮಾರ್, ಬಾಲಾಜಿ ಮನೋಹರ್, ಆಚಾರ ಕಿರ್ಕ್ ಮತ್ತು ಪ್ರಕಾಶ್ ತುಮಿನಾಡ್ ಪ್ರಮುಖ ಪಾತ್ರಗಳಲ್ಲಿದ್ದಾರೆ, ಮಾತಾ ಗುರುಪ್ರಸಾದ್ ಮತ್ತು ನಾ ಸೋಮೇಶ್ವರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com