ಡೆಂಗ್ಯೂನಿಂದ ಬಳಲುತ್ತಿದ್ದ ಬೋಜ್ ಪುರಿ ನಟ ಬ್ರಿಜೇಶ್ ತ್ರಿಪಾಠಿ ಹೃದಯಾಘಾತದಿಂದ ಸಾವು

ಭೋಜ್‌ಪುರಿ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದ ಬ್ರಿಜೇಶ್ ತ್ರಿಪಾಠಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭೋಜ್‌ಪುರಿ ಸಿನಿಮಾ ಮಾತ್ರವಲ್ಲದೆ 46 ವರ್ಷಗಳ ಕಾಲ ತಮ್ಮ ವೃತ್ತಿಜೀವನದುದ್ದಕ್ಕೂ ವಿವಿಧ ಹಿಂದಿ ಚಲನಚಿತ್ರಗಳಲ್ಲಿಯೂ ನಟಿಸಿದ್ದರು.
ಬ್ರಿಜೇಶ್ ತ್ರಿಪಾಠಿ
ಬ್ರಿಜೇಶ್ ತ್ರಿಪಾಠಿ
Updated on

ಭೋಜ್‌ಪುರಿ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದ ಬ್ರಿಜೇಶ್ ತ್ರಿಪಾಠಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭೋಜ್‌ಪುರಿ ಸಿನಿಮಾ ಮಾತ್ರವಲ್ಲದೆ 46 ವರ್ಷಗಳ ಕಾಲ ತಮ್ಮ ವೃತ್ತಿಜೀವನದುದ್ದಕ್ಕೂ ವಿವಿಧ ಹಿಂದಿ ಚಲನಚಿತ್ರಗಳಲ್ಲಿಯೂ ನಟಿಸಿದ್ದರು.

ಇತರ ಪ್ರಾದೇಶಿಕ ಭಾಷೆಗಳಲ್ಲೂ ಸಾಕಷ್ಟು ಚಿತ್ರಗಳನ್ನು ಮಾಡಿದ್ದಾರೆ. 250 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಬ್ರಿಜೇಶ್ ತ್ರಿಪಾಠಿ ನಿಧನಕ್ಕೆ ಅವರ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

ಬ್ರಿಜೇಶ್ ತ್ರಿಪಾಠಿ ಡೆಂಗ್ಯೂನಿಂದ ಬಳಲುತ್ತಿದ್ದರು. ಮೀರತ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

ಬ್ರಿಜೇಶ್ ತ್ರಿಪಾಠಿ ಅವರು ಅಜಯ್ ದೇವಗನ್, ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ರಜನಿಕಾಂತ್, ರವಿ ಕಿಶನ್, ಧರ್ಮೇಂದ್ರ ಮತ್ತು ವಿನೋದ್ ಖನ್ನಾ ಇತರರೊಂದಿಗೆ  ನಟಿಸಿದ್ದಾರೆ. ಬಾಲಿವುಡ್‌ನಲ್ಲಿ 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗೆಳೆಯನ ನೆರವಿನಿಂದ ಚಿತ್ರರಂಗಕ್ಕೆ ಬಂದ ಅವರ ತಮ್ಮ ನೆಲೆಯನ್ನು ಮುಂಬೈಗೆ ಬದಲಾಯಿಸಿದ್ದರು.

ಬ್ರಿಜೇಶ್ ತ್ರಿಪಾಠಿ ಅವರು ಭೋಜ್‌ಪುರಿಯ ‘ಓಂ’ ಸಿನಿಮಾ ಮೂಲಕ ಭಾರೀ ಯಶಸ್ಸನ್ನು ಪಡೆದರು. ಪವನ್ ಸಿಂಗ್, ದಿನೇಶ್ ಲಾಲ್ ಯಾದವ್ ಮತ್ತು ರವಿ ಕಿಶನ್ ಸೇರಿದಂತೆ ಹಲವು ಭೋಜ್‌ಪುರಿ ಖ್ಯಾತ ನಟರೊಂದಿಗೆ ಕೆಲಸ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com