ಸಲಾರ್ ಉಗ್ರಂ ರಿಮೇಕ್ ಸಿನಿಮಾನಾ, ರಾಕಿ ಇದ್ದಾರಾ? ಎಲ್ಲದಕ್ಕೂ ಕ್ಲಾರಿಟಿ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್

ನಿರ್ದೇಶಕ ಪ್ರಶಾಂತ್ ನೀಲ್ ಮಾಡಿರುವುದು ಕೇವಲ ಮೂರೇ ಚಿತ್ರ ಆದರೂ ಅವರು ದೇಶಾದ್ಯಂತ ಮನೆಮಾತನಾಗಿರುವುದನ್ನು ನೋಡಿದ್ರೆ ನಿಜಕ್ಕೂ ಆಶ್ಚರ್ಯಕರವಾಗಿದೆ. ಉಗ್ರಂ, ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್ 2 ಈ ಮೂರು ಚಿತ್ರಗಳ ಖ್ಯಾತಿ ಏನೆಂಬುದು ಅರ್ಥವಾಗುತ್ತದೆ.
ಪ್ರಭಾಸ್ ಜೊತೆಗೆ ನಿರ್ದೇಶಕ ಪ್ರಶಾಂತ್ ನೀಲ್
ಪ್ರಭಾಸ್ ಜೊತೆಗೆ ನಿರ್ದೇಶಕ ಪ್ರಶಾಂತ್ ನೀಲ್

ನಿರ್ದೇಶಕ ಪ್ರಶಾಂತ್ ನೀಲ್ ಮಾಡಿರುವುದು ಕೇವಲ ಮೂರೇ ಚಿತ್ರ ಆದರೂ ಅವರು ದೇಶಾದ್ಯಂತ ಮನೆಮಾತನಾಗಿರುವುದನ್ನು ನೋಡಿದ್ರೆ ನಿಜಕ್ಕೂ ಆಶ್ಚರ್ಯಕರವಾಗಿದೆ. ಉಗ್ರಂ, ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್ 2 ಈ ಮೂರು ಚಿತ್ರಗಳ ಖ್ಯಾತಿ ಏನೆಂಬುದು ಅರ್ಥವಾಗುತ್ತದೆ. ಪ್ರತಿ ಸಿನಿಮಾದಲ್ಲೂ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿರುವ ಪ್ರಶಾಂತ್, ಈಗ ಅವರ ಅತಿದೊಡ್ಡ ಪ್ರಾಜೆಕ್ಟ್ 'ಸಲಾರ್‌' ಗ್ರ್ಯಾಂಡ್ ರಿಲೀಸ್‌ಗೆ ಮುಂದಾಗಿದ್ದಾರೆ. 

ಡಿಸೆಂಬರ್ 22 ರಂದು ಚಿತ್ರ ಬಿಡುಗಡೆ ಅಂಗವಾಗಿ ಅವರ ಪ್ರತಿಯೊಂದು ಟೈಟಲ್ ಅಪ್ ಡೇಟ್ ನಿಂದ ಕೊನೆಯವರೆಗೂ ಕುತೂಹಲದಿಂದ ಕಾಯುವ ಅಭಿಮಾನಿಗಳಿಗಾಗಿ ಪ್ರಶಾಂತ್ ನೀಲ್ ಅವರ ನಿರೀಕ್ಷೆಗಳು, ಆತಂಕ ಮತ್ತು ಸಹಜವಾಗಿಯೇ ಅವರ ತಂಡದ ಬಗ್ಗೆ ಇರುವ ಭರವಸೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ. ಅದು ಉಗ್ರಂ ಆಗಿರಲಿ ಅಥವಾ ಕೆಜಿಎಫ್, ಸಲಾರ್ ಯಾವುದೇ ಆಗಿರಲಿ ಪ್ರತಿಯೊಂದು ಚಿತ್ರಗಳು ನಿರ್ಮಾಣಕ್ಕಿಂತಲೂ ಹೆಚ್ಚಾಗಿ ಕಥೆಗಳಿಗೆ ಸಮಾನವಾದ ಪ್ರೀತಿಯಿಂದ ಮಾಡಲಾಗಿರುತ್ತದೆ.  ಪ್ರೇಕ್ಷಕರು ಅದನ್ನು ಆನಂದಿಸುತ್ತಾರೆ ಎಂದು ಭಾವಿಸುತ್ತೇನೆ ಮತ್ತು ಅವರಿಗೆ ಮನರಂಜನೆ  ನೀಡುವುದನ್ನು ಮುಂದುವರೆಸುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.

ಸಂದರ್ಶನದ ಆಯ್ದ ಭಾಗಗಳು:  ಸಲಾರ್ ಪ್ರಾರಂಭವಾದಾಗಿನಿಂದ ಅದರ ಬಗ್ಗೆ ನಿರಂತರ, ಸ್ಥಿರವಾದ ಅಭಿಪ್ರಾಯಗಳಿವೆ. ಉಗ್ರಂ ಕಥಾವಸ್ತು ಮತ್ತು ಕೆಜಿಎಫ್‌ನ ನಿರ್ಮಾಣ ವಿನ್ಯಾಸದೊಂದಿಗೆ ಹೋಲಿಕೆಗಳಿವೆ?

ನನ್ನ ಮೊದಲ ಮೂರು ಚಿತ್ರಗಳು ನಿರ್ಮಾಣ ಶೈಲಿಯನ್ನು ಹೇಗೆ ರೂಪಿಸಿದವು ಎಂಬುದರ ಮೇಲೆ ಈ ದೃಷ್ಟಿಕೋನ ಬರುತ್ತದೆ. ಜನರ ನೋಟ, ಭಾವನೆ, ಜಗತ್ತು-ನಿರ್ಮಾಣ, ಮತ್ತು ಪಾತ್ರ ವರ್ಗ,ವಿಶೇಷವಾಗಿ ಖಳನಾಯಕರು ಸಹ ಹೋಲುತ್ತವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದಾಗ್ಯೂ, ಸಲಾರ್ ಖಂಡಿತವಾಗಿಯೂ ಬೇರೆ ರೀತಿಯ ಸಿನಿಮಾ.  ಸಲಾರ್  ನಾನು ರಚಿಸಿದ ಅತ್ಯುತ್ತಮ ಚಿತ್ರ ಎಂದು ಕರೆಯುತ್ತೇನೆ. ನಿರ್ದಿಷ್ಟವಾಗಿ ಉಗ್ರಂನಿಂದ ಅದರ ಸಾರವನ್ನು ರೀಮೇಕ್ ಆಗಿ ಅಲ್ಲ ಆದರೆ ಆ ನಿರೂಪಣೆಯನ್ನು ಪುನರಾವರ್ತನೆಯಾಗಿ ಸೆಳೆದಿದ್ದೇನೆ ಎಂಬುದು ರಹಸ್ಯವಲ್ಲ.

ಹಾಗಾದರೆ, ಸಲಾರ್ ಮೂಲಕ ಮತ್ತೆ ಉಗ್ರಂ ನಿರೂಪಣೆಯನ್ನು ಏಕೆ ಆಯ್ಕೆ ಮಾಡಬೇಕಾಯಿತು?

ಉಗ್ರಂ 2014ರಲ್ಲಿ ಬಿಡುಗಡೆಯಾದಾಗ ತುಂಬಿದ ಥಿಯೇಟರ್ ನಲ್ಲಿ ಓಡುತ್ತೆ ಅಂದುಕೊಂಡಿದ್ದೆ. ಆದರೆ, ಆ ಸಮಯದಲ್ಲಿ ನಾನು ಅಂದುಕೊಂಡ ಹಾಗೆ ಆಗಲಿಲ್ಲ. ನನ್ನ ಮನಸ್ಸಿನಲ್ಲಿ ಬೇರೆ ಕಥೆಗಳಿದ್ದರೂ ಆ ನಿರ್ದಿಷ್ಟ ಕಥೆಗೆ ನ್ಯಾಯ ಸಲ್ಲಿಸದೆ ನಾನು ಮುಂದುವರಿಯಲು ಸಾಧ್ಯವಾಗಲಿಲ್ಲ. ಉಗ್ರಂ ಬಿಡುಗಡೆಯಾದ 15 ದಿನಗಳಲ್ಲಿ ಪೈರಸಿ ಎದುರಿಸಬೇಕಾಯಿತು. ಆ ಚಿತ್ರಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಉಗ್ರಂಗೂ ಕೆಜಿಎಫ್‌ನಷ್ಟು ಉತ್ತುಂಗ ತಲುಪಬೇಕೆಂದು ಬಯಸುತ್ತೇನೆ. ಖಂಡಿತ, ನಾನು ಅದನ್ನು ರಿಮೇಕ್ ಎಂದು ನೋಡುವುದಿಲ್ಲ. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರಿಗೆ ಸರಿಹೊಂದುವಂತೆ  ಗಮನಾರ್ಹ ಬದಲಾವಣೆಗಳನ್ನು ಮಾಡಿದ್ದೇನೆ. ಉಗ್ರಂ ಕಥೆ ಮತ್ತು ಕೆಜಿಎಫ್‌ ಮೇಕಿಂಗ್ ಅನ್ನು ಸಲಾರ್‌ನಲ್ಲಿ  ಬೆರೆಸುವ ನನ್ನ ಕಲ್ಪನೆಯನ್ನು ಕೆಲವರು ಟೀಕಿಸಬಹುದು, ಆದರೆ ಈ ಎರಡೂ ಸಿನಿಮಾಗಳನ್ನು ನಾನೇ ಮಾಡಿದ್ದರಿಂದ ಅದನ್ನು  ಅಭಿನಂದನೆ ಎಂದು ನೋಡುತ್ತೇನೆ. ನಾನು ಆ ಲೋಕಗಳನ್ನು ಮತ್ತು ಅವುಗಳೊಳಗಿನ ಎಲ್ಲಾ ಪಾತ್ರಗಳನ್ನು ನಾನೇ ಸೃಷ್ಟಿಸಿದ್ದು.

ಪ್ರಭಾಸ್ ಜೊತೆ ಸಲಾರ್‌ ಸಹಯೋಗ ಹೇಗೆ ತೆರೆದುಕೊಂಡಿತು?

ಪ್ರಭಾಸ್ ಕೆಜಿಎಫ್ ಅಧ್ಯಾಯ 1 ಅನ್ನು ವೀಕ್ಷಿಸಿದ್ದರು. ನಿರ್ಮಾಪಕ ವಿಜಯ್ ಕಿರಂಗಂದೂರು ಮತ್ತು ವಿತರಕ ಅನಿಲ್ ಥಡಾನಿ ಪ್ರಭಾಸ್ ಜೊತೆಗಿನ ಸಹಯೋಗವನ್ನು ಪ್ರಾರಂಭಿಸಿದರು. ಉಗ್ರಂ ಚಿತ್ರದ ಕಥೆಯನ್ನು ಮತ್ತೆ ಹೇಳುವ ಬಯಕೆಯನ್ನು ನಾನು ವಿಜಯ್ ಸರ್ ಅವರಿಗೆ ವ್ಯಕ್ತಪಡಿಸಿದ್ದೆ ಮತ್ತು ಅವರು ಸಂಭಾವ್ಯ ನಟರ ಬಗ್ಗೆ ವಿಚಾರಿಸಿದಾಗ, ವಿಷಯದ ಅಗಾಧತೆಯನ್ನು ಗ್ರಹಿಸಬಲ್ಲವರೊಬ್ಬರನ್ನು ನಾನು ಪ್ರಸ್ತಾಪಿಸಿದೆ. ಆಗ ಕಥೆ ಪೂರ್ಣವಾಗದಿದ್ದರೂ  ಪ್ರಭಾಸ್ ಅವರೊಂದಿಗೆ ಸುಮಾರು 10 ಸಾಲುಗಳನ್ನು ಹಂಚಿಕೊಂಡಿದ್ದೆ ಮತ್ತು ಅವರು ಪಾತ್ರವನ್ನು ಮೆಚ್ಚಿದರು. ಅವರು ನಿರೂಪಣೆಯಲ್ಲಿ ತ್ಯಾಗ ಮತ್ತು ಸ್ನೇಹದ ಸಾರವನ್ನು ಶ್ಲಾಘಿಸಿದರು. ತಕ್ಷಣವೇ ಗೆಳೆಯನ ಪಾತ್ರಕ್ಕೆ ಮಹತ್ವದ ಸ್ಥಾನಮಾನದ ಯಾರಾದರೂ ಬೇಕು ಎಂದು ಸಲಹೆ ನೀಡಿದರು. ಇದು ಪೃಥ್ವಿರಾಜ್ ಸುಕುಮಾರನ್ ಅವರ ಸೇರ್ಪಡೆಗೆ ಕಾರಣವಾಯಿತು.

ಹೆಚ್ಚಿನ ಹಿಂಸೆಯಿಂದಾಗಿ ಸಲಾರ್‌ಗೆ ‘ಎ’ ಪ್ರಮಾಣ ಪತ್ರ ನೀಡಲಾಗಿದೆ!

ಪ್ರಾಮಾಣಿಕವಾಗಿ ಆರಂಭದಲ್ಲಿ ನಿರಾಶೆಗೊಂಡಿದ್ದೆ. ಸೆನ್ಸಾರ್ ಅಧಿಕಾರಿಯ ಮುಂದೆ ಶಾಂತವಾಗಿ ಕುಳಿತು, ವಾದ ಮಾಡಲು  ಆಲೋಚಿಸಿದೆ.  ನಂತರ ಸಿನಿಮಾ ಮತ್ತು ಭಾವನೆಯು ಅಂತಹ ಹಿಂಸೆ ಹೊರಹೊಮ್ಮುವ ಮಟ್ಟಕ್ಕೆ ಏರಿತು ಎಂದು ಅರಿತುಕೊಂಡೆ. ಇದು ನಾನು ರಚಿಸಿದ ವಿಷಯವಾದ್ದರಿಂದ ಅದು ಅಗತ್ಯವಾಗಿತ್ತು. ನೀವು ಮಂಗಳ ಗ್ರಹದಲ್ಲಿ ಅಥವಾ ಖಾನಸಾರ್‌ನಲ್ಲಿ ಚಿತ್ರ ಮಾಡುತ್ತಿರುವಾಗ ಆ ಮಾನವೀಯ ಮೌಲ್ಯಗಳನ್ನು ಸರಿಯಾಗಿ ತಿಳಿಸಿದಾಗ ಮತ್ತು ಚಿತ್ರದೊಂದಿಗೆ ಕಾರ್ಯಗತಗೊಳಿಸಿದಾಗ ಯಾವಾಗಲೂ ಪ್ರತಿಧ್ವನಿಸುತ್ತದೆ. ಆದಾಗ್ಯೂ, ನಾನು ಅದರ ಸಲುವಾಗಿ ಕೇವಲ  ಹಿಂಸೆಯನ್ನು ಚಿತ್ರಿಸಲು ಸಾಧ್ಯವಿಲ್ಲ. ಅದೂ ಕೆಲಸ ಮಾಡುವುದಿಲ್ಲ.

ಯಶ್ ಸಲಾರ್‌ನ ಭಾಗವಾಗಿದ್ದಾರೆ ಎಂಬ ಊಹಾಪೋಹಗಳಿವೆ?

ನಾನು ಮಲ್ಟಿವರ್ಸಸ್ ಚಿತ್ರ ರಚಿಸಿಲ್ಲ. ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಲು ಅದು ಕ್ಯಾಚ್‌ಫ್ರೇಸ್ ಆಗುವುದಿಲ್ಲವೇ?  ಅದನ್ನು ಏಕೆ ರಹಸ್ಯವಾಗಿಡಬೇಕು? ಸಿನಿಮಾ ನೋಡುವವರೆಗೂ ಅನೇಕರು ನನ್ನನ್ನು ನಂಬುವುದಿಲ್ಲ ಎಂದು ನನಗೆ ತಿಳಿದಿದೆ. ಕೆಜಿಎಫ್ ನ ಯಾವ ಭಾಗವೂ ಸಲಾರ್ ನಲ್ಲಿಲ್ಲ. ಕೆಲವು ತಂತ್ರಜ್ಞರು, ಒಂದೆರಡು ನಟರಿದ್ದಾರೆ ಮತ್ತು ಸಹಜವಾಗಿ, ನಾನು ಸಲಾರ್ ಮತ್ತು ಕೆಜಿಎಫ್ ಎರಡರ ಭಾಗವಾಗಿದ್ದೇನೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ, ರಾಕಿ ಸಲಾರ್‌ನ ಭಾಗವಲ್ಲ.

ನಿಮ್ಮ ಕೆಜಿಎಫ್ ಸಿನಿಮಾಟೋಗ್ರಾಫರ್ ಭುವನ್ ಗೌಡ ಮತ್ತು ಸಂಗೀತ ಸಂಯೋಜಕ ರವಿ ಬಸ್ರೂರ್ ಅವರಿಗೆ ಸಲಾರ್ ನಲ್ಲೂ ಅಂಟಿಕೊಂಡಿದ್ದೀರಿ...

ಕೆಜಿಎಫ್‌ನಲ್ಲಿ ನಾವು ಏನನ್ನಾದರೂ ಹೊಂದಿದ್ದೇವೆ ಎಂದ ಮಾತ್ರಕ್ಕೆ, ನಾವು ಅದನ್ನು ಸಲಾರ್‌ನಲ್ಲಿ ಪುನರಾವರ್ತಿಸುತ್ತೇವೆ ಎಂದರ್ಥವಲ್ಲ. ರವಿ ಬಹುಶಃ ಚಲನಚಿತ್ರದ ಗತಿಯ ಅತ್ಯುತ್ತಮ ತೀರ್ಪುಗಾರರಲ್ಲಿ ಒಬ್ಬರು ಮತ್ತು ನಾನು ನನ್ನ ಚಿತ್ರವನ್ನು ಎಡಿಟ್ ಮಾಡಿದ  ನಂತರ ಯಾವಾಗಲೂ ನನ್ನ ಮೊದಲ ವಿಮರ್ಶಕ. ನಾವು ದೃಶ್ಯ ಮತ್ತು ಚಿತ್ರದ ಸಾರವನ್ನು ಪರಿಗಣಿಸುತ್ತೇವೆ ಮತ್ತು ಅವರು ತುಣುಕಿನೊಂದಿಗೆ ಬರುವ ಮೊದಲು ಸ್ವಲ್ಪ ಸಮಯವನ್ನು ಕೇಳುತ್ತಾರೆ. ಉದಾಹರಣೆಗೆ, ಸಲಾರ್‌ನಲ್ಲಿ ಬುಡಕಟ್ಟು ಸೆಟ್‌ಅಪ್ ಇದೆ ಮತ್ತು ಆ ಜಗತ್ತನ್ನು ಪ್ರತಿಬಿಂಬಿಸಲು ಅವರು ವಿಶೇಷವಾದದ್ದನ್ನು ರೂಪಿಸಿದ್ದಾರೆ. ಭುವನ್ ಕೂಡ ಪ್ರತಿ ಬಾರಿ ಏನಾದರೂ ವಿಭಿನ್ನವಾಗಿ ಮಾಡಲು ಬಯಸುವ ವ್ಯಕ್ತಿ. ಕೆಜಿಎಫ್ ಗಿಂತ ಸಲಾರ್ ಕತ್ತಲೆಯಾಗಲಿದೆ ಎಂದು ಅವರು ಅರ್ಥಮಾಡಿಕೊಂಡರು. 

ಪ್ರಭಾಸ್ ಮತ್ತು ಪೃಥ್ವಿರಾಜ್ ಅವರ ಅನಿರೀಕ್ಷಿತ ಕಾಂಬಿನೇಷನ್‌ಗೆ ಸರಿಯಾದ ರೀತಿಯ ಪ್ರಚಾರ ಸಿಗುತ್ತಿದೆಯೇ?

ಇದು ಸ್ವರ್ಗದಲ್ಲಿ ಮಾಡಿದ ಕಾಸ್ಟಿಂಗ್ ಮ್ಯಾಚ್ ಎಂದು ನಂಬುತ್ತೇನೆ. ಪೃಥ್ವಿ ಸರ್ ಸಲಾರ್ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಾಗ ನಾನು ಸಂಭ್ರಮ ಪಟ್ಟಿದ್ದೆ. ಸ್ವತಃ ಸೂಪರ್ ಸ್ಟಾರ್ ಆಗಿರುವ ಅವರಿಗೆ ಇದು ತುಂಬಾ ಸವಾಲಿನ ಪಾತ್ರ. ಪೃಥ್ವಿರಾಜ್ ಕಥೆಯನ್ನು ನಂಬಿದ್ದರು ಮತ್ತು ಸಲಾರ್ ಗೆ ಬೆಂಬಲ ನೀಡಿದರು.

ಸಲಾರ್ ಭಾಗ 2 ಚಿತ್ರೀಕರಣ ಪ್ರಾರಂಭವಾಗಿದೆಯೇ?

ಸಲಾರ್ 1 ರ ಫಲಿತಾಂಶದ ನಂತರ ಸಲಾರ್ 2 ಮಾಡಲಾಗುವುದು. ಫಲಿತಾಂಶವನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.  ಸಲಾರ್ 2 ಆ ಎರಡು ಪಾತ್ರಗಳಾದ ವರ್ಧ ಮತ್ತು ದೇವನ ಸುತ್ತ ಸುತ್ತಬೇಕು. ಜನರು ಮೊದಲನೆಯದನ್ನು ಬೆಂಬಲಿಸುತ್ತಾರೆ ಎಂದು ಪ್ರಾಮಾಣಿಕವಾಗಿ ಭಾವಿಸುತ್ತೇನೆ,  ಅದರಿಂದ ಭಾಗ ಎರಡು ಮಾಡಲು ಅನುಕೂಲವಾಗುತ್ತದೆ. 

NTR31 ಬಗ್ಗೆ ಸ್ವಲ್ಪ ವಿವರ ನೀಡಬಹುದೇ?

ನಾನು ಈಗ ಅದಕ್ಕೆ ಉತ್ತರಿಸಲು ಬಯಸುವುದಿಲ್ಲ. ಎನ್ ಟಿಆರ್ ಜೊತೆ ಸಿನಿಮಾ ಮಾಡುತ್ತಿದ್ದೇನೆ. ಆದಾಗ್ಯೂ, ಟೈಮ್ ಲೈನ್ ಊಹಿಸುವುದು ಅನಿಶ್ಚಿತವಾಗಿದೆ. ಪ್ರಸ್ತುತ, ಅವರು ದೇವರ ಚಿತ್ರದಲ್ಲಿ ನಿರತರಾಗಿದ್ದಾರೆ ಮತ್ತು ಹಿಂದಿ ಪ್ರಾಜೆಕ್ಟ್ (ಯುದ್ಧ 2) ಗೆ ಸಹಿ ಹಾಕಿದ್ದಾರೆ. ಆದ್ದರಿಂದ, ನಾನು ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿರ್ಣಯಿಸಬೇಕಾಗಿದೆ. ಸಲಾರ್ ಬಿಡುಗಡೆಗೆ ನನ್ನ ಮೊದಲ ಗಮನ. ನಂತರ ಬ್ರೇಕ್ ಪಡೆಯುತ್ತೇನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com