ಕೆಜಿಎಫ್‌ನ ಗರುಡನನ್ನು ಹೋಲಬಾರದು ಎಂದು ಪ್ರಶಾಂತ್ ಕಟ್ಟುನಿಟ್ಟಾಗಿ ಹೇಳಿದ್ದರು: ರಾಮ್ ಗರುಡ
ಈ ಹಿಂದೆ ಕೆಜಿಎಫ್‌ನಲ್ಲಿ ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿದ್ದ ರಾಮ್ ಗರುಡ ಇದೀಗ ಸಲಾರ್‌ನ ಭಾಗವಾಗಿರುವುದು ಗೌರವ ಎಂದು ಹೇಳಿದ್ದಾರೆ.
ಇಂತಹ ದೊಡ್ಡ ಪ್ರಾಜೆಕ್ಟ್‌ನಲ್ಲಿರುವುದು ಮತ್ತು ಅದರಲ್ಲಿ ಪಾತ್ರವನ್ನು ನಿರ್ವಹಿಸುವುದು ನನಗೆ ವಿಭಿನ್ನ ಅನುಭವ ನೀಡಿದೆ. ಕೆಜಿಎಫ್‌ನಿಂದ ಗಳಿಸಿದ ಮನ್ನಣೆ ಸಲಾರ್ ನಂತರ ಮತ್ತಷ್ಟು ಹೆಚ್ಚಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ರಾಮ್ ಹೇಳುತ್ತಾರೆ.
ಹೈ-ಪ್ರೊಫೈಲ್ ಪ್ರಾಜೆಕ್ಟ್‌ನಲ್ಲಿ ವಿಲನ್ ಪಾತ್ರದಲ್ಲಿ ನಟಿಸುವುದು ನಿಮ್ಮ ವೃತ್ತಿಜೀವನಕ್ಕೆ ಕೊಡುಗೆ ನೀಡುತ್ತದೆಯೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ಹೌದು, ಖಂಡಿತ. ಪ್ರತಿಸ್ಪರ್ಧಿಯಾಗಿ ನನ್ನ ಪಾತ್ರವು ವಿಶಿಷ್ಟವಾದ ಚಿತ್ರಣವನ್ನು ನೀಡುತ್ತದೆ.
ಕೆಜಿಎಫ್‌ನಲ್ಲಿ ನನ್ನ ಪಾತ್ರದ ಗರುಡಗಿಂತ ಭಿನ್ನವಾಗಿ, ರಾಜನ ರೀತಿಯ ಮನೋಭಾವವನ್ನು ಹೊಂದಿದ್ದ ಈ ಪಾತ್ರವು ವಿಭಿನ್ನ ನೋಟವನ್ನು ಹೊಂದಿದೆ. ಅಭಿನಯಕ್ಕೆ ಹೆಚ್ಚಿನ ಅವಕಾಶವನ್ನು ನೀಡುತ್ತದೆ. ಗರುಡನನ್ನು ಹೋಲಬಾರದು ಎಂದು ಪ್ರಶಾಂತ್ ನನಗೆ ಕಟ್ಟುನಿಟ್ಟಾಗಿ ಸೂಚಿಸಿದರು. ಆದ್ದರಿಂದ ನೀವು ರಾಮನ ವಿಭಿನ್ನ ಅವತಾರವನ್ನು ನೋಡುತ್ತೀರಿ ಎಂದು ಹೇಳಿದರು.
ಸಲಾರ್‌ನಲ್ಲಿ ಕೆಲಸ ಮಾಡಿದ ಅನುಭವ ಬಗ್ಗೆ ಹೇಳಿದ ಅವರು, 'ಹಲವು ಕಲಾವಿದರೊಂದಿಗೆ ನನ್ನದು ಒಂದು ದೃಶ್ಯವಿದೆ, ಅಲ್ಲಿ ನಾನು ಚಿಕ್ಕ ಪಾತ್ರವನ್ನು ನಿರ್ವಹಿಸಿದರೂ, ನನ್ನ ಪಾತ್ರ ಉತ್ತಮವಾಗಿ ವಿನ್ಯಾಸಗೊಳಿಸಲ್ಪಟ್ಟಿದೆ ಮತ್ತು ಅನನ್ಯವಾಗಿ ಹೊಳೆಯುತ್ತವೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ