ಅಭಿಜಿತ್ ಮಹೇಶ್ ನಿರ್ದೇಶನದ 'ಬ್ಯಾಚುಲರ್ ಪಾರ್ಟಿ' ಬಿಡುಗಡೆಗೆ ದಿನಾಂಕ ಫಿಕ್ಸ್
ಬ್ಯಾಚುಲರ್ ಪಾರ್ಟಿ ಚಿತ್ರತಂಡ ಇತ್ತೀಚೆಗಷ್ಟೇ ನಟ ದಿಗಂತ್, ಲೂಸ್ ಮಾದ ಯೋಗಿ ಮತ್ತು ಅಚ್ಯುತ್ ಕುಮಾರ್ ಇರುವ ಹ್ಯಾಂಡ್ ಸ್ಕೆಚ್ ಮೂಲಕ ಡಿಸೈನ್ ಮಾಡಲಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿತ್ತು. ಇದೀಗ ಚಿತ್ರತಂಡ ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಬೆಂಬಲಿತ ಚಿತ್ರವು ಜನವರಿ 26 ರಂದು ಬಿಡುಗಡೆಯಾಗಲಿದೆ ಮತ್ತು ಚಿತ್ರತಂಡ ಇಂದು ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.
ಅಭಿಜಿತ್ ಮಹೇಶ್ ನಿರ್ದೇಶಿಸಿದ, ಬ್ಯಾಚುಲರ್ ಪಾರ್ಟಿಯು ಕಾಲೇಜು ನಂತರದ ಜೀವನ, ಮದುವೆ ಹಾಗೂ ಉದ್ಯೋಗದ ಕುರಿತು ಇರಲಿದ್ದು, ಕಾಮಿಡಿ ಎಂಟರ್‌ಟೈನರ್ ಎಂದು ಬಿಂಬಿಸಲಾಗಿದೆ. ನಿರ್ದೇಶಕರ ಪ್ರಕಾರ, ಸಿನಿಮಾ ನಿಜ ಜೀವನದ ಅನುಭವಗಳೊಂದಿಗೆ ಅನುರಣಿಸುತ್ತದೆ. ಹಾಸ್ಯದೊಂದಿಗೆ ಕಾರ್ಪೊರೇಟ್ ಆಫೀಸ್ ಡೈನಾಮಿಕ್ಸ್ ಮತ್ತು ಇಂದಿನ ಮದುವೆಗಳ ಕುರಿತು ಹೇಳುತ್ತದೆ.
ಥೈಲ್ಯಾಂಡ್‌ನಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಕಿರಿಕ್ ಪಾರ್ಟಿಗಿಂತಲೂ ಬ್ಯಾಚುಲರ್ಸ್ ಪಾರ್ಟಿ ರೋಮಾಂಚಕವಾಗಿರುತ್ತದೆ. ಅತ್ಯಾಧುನಿಕ ಹಾಸ್ಯದ ಭರವಸೆ ನೀಡುತ್ತಾರೆ ನಿರ್ದೇಶಕರು. ಇದು ಸಂತೋಷಕರ ಮತ್ತು ಸಾಹಸಮಯ ಸವಾರಿ ಕುರಿತು ಹೇಳುತ್ತದೆ.
ಬ್ಯಾಚುಲರ್ ಪಾರ್ಟಿಯಲ್ಲಿ ಸಿರಿ ರವಿಕುಮಾರ್, ಬಾಲಾಜಿ ಮನೋಹರ್, ಆಚಾರ ಕಿರ್ಕ್ ಮತ್ತು ಪ್ರಕಾಶ್ ತುಮಿನಾಡ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಾತಾ ಗುರುಪ್ರಸಾದ್ ಮತ್ತು ನಾ ಸೋಮೇಶ್ವರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ರಾಮು ಸಂಗೀತ ನೀಡುತ್ತಿದ್ದು, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ