ಬಾಕ್ಸ್ ಆಫೀಸ್‌ನಲ್ಲಿ ಸಲಾರ್ ಆರ್ಭಟ; ಬಿಡುಗಡೆಯಾದ ಮೂರೇ ದಿನಕ್ಕೆ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್

ನಟ ಪ್ರಭಾಸ್ ಅಭಿನಯದ 'ಸಲಾರ್: ಭಾಗ 1 - ಕದನ ವಿರಾಮ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ಜಾಗತಿಕ ಗಲ್ಲಾ ಪೆಟ್ಟಿಗೆಯಲ್ಲಿ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. 
ಸಲಾರ್ ಚಿತ್ರದಲ್ಲಿ ನಟ ಪ್ರಭಾಸ್
ಸಲಾರ್ ಚಿತ್ರದಲ್ಲಿ ನಟ ಪ್ರಭಾಸ್

ಮುಂಬೈ: ನಟ ಪ್ರಭಾಸ್ ಅಭಿನಯದ 'ಸಲಾರ್: ಭಾಗ 1 - ಕದನ ವಿರಾಮ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ಜಾಗತಿಕ ಗಲ್ಲಾ ಪೆಟ್ಟಿಗೆಯಲ್ಲಿ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. 

ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ನಟಿಸಿದ್ದಾರೆ.

ಚಿತ್ರವು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಶುಕ್ರವಾರ (ಡಿಸೆಂಬರ್ 22) ಬಿಡುಗಡೆಯಾಗಿತ್ತು.
ಚಿತ್ರತಂಡ ಇತ್ತೀಚಿನ ಬಾಕ್ಸ್ ಆಫೀಸ್ ಅಂಕಿಅಂಶಗಳನ್ನು 'ಸಲಾರ್'ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'ಬಾಕ್ಸ್ ಆಫೀಸ್ ಕಾ ಸಲಾರ್. ಬ್ಲಾಕ್ ಬಸ್ಟರ್ ಸಲಾರ್ ಸಿನಿಮಾ ಬಿಡುಗಡೆಯಾದ 3 ದಿನಗಳಲ್ಲಿ ಜಾಗತಿಕವಾಗಿ 402 ಕೋಟಿ ರೂ.  ಸಂಗ್ರಹಿಸಿದೆ!' ಎಂದು ಬರೆಯಲಾಗಿದೆ.

ಕಾಲ್ಪನಿಕ ನಗರವಾದ ಖಾನ್‌ಸಾರ್‌ನಲ್ಲಿ ನಡೆಯುವ ಕಥೆಯನ್ನು ಹೊಂದಿರುವ 'ಸಲಾರ್: ಭಾಗ 1 - ಕದನ ವಿರಾಮ' ಇಬ್ಬರು ಗೆಳೆಯರಾದ ದೇವ (ಪ್ರಭಾಸ್) ಮತ್ತು ವರ್ಧ (ಪೃಥ್ವಿರಾಜ್) ಸುತ್ತ ಸುತ್ತುತ್ತದೆ.

ಹೊಂಬಾಳೆ ಫಿಲ್ಮ್ಸ್ ಪ್ರಕಾರ, ಸಿನಿಮಾ 2023 ರಲ್ಲಿ ತೆರೆಕಂಡ ಯಾವುದೇ ಸಿನಿಮಾಗಳು ಆರಂಭಿಕ ದಿನಗಳಲ್ಲಿ ಗಳಿಸದಷ್ಟು ಸಂಗ್ರಹವನ್ನು ಬಾಕ್ಸ್‌ ಆಫೀಸ್‌ನಲ್ಲಿ ಸಲಾರ್ ಮಾಡಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ 178. 7 ಕೋಟಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ.

'ಸಲಾರ್: ಭಾಗ 1 - ಕದನ ವಿರಾಮ'ದಲ್ಲಿ ನಟಿ ಶ್ರುತಿ ಹಾಸನ್, ಈಶ್ವರಿ ರಾವ್, ಜಗಪತಿ ಬಾಬು ಮತ್ತು ಶ್ರೀಯಾ ರೆಡ್ಡಿ ಕೂಡ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com