ಕಾಟೇರ ಸಿನಿಮಾ ಡಿ.29ಕ್ಕೆ ಬಿಡುಗಡೆ: ಆರಾಧನಾ ಮೂಲಕ ಮತ್ತೆ ನಟಿಯಾಗುತ್ತಿದ್ದೇನೆ ಎಂದ ಮಾಲಾಶ್ರೀ

ಕನ್ನಡ ಚಿತ್ರರಂಗದಲ್ಲಿ ಲೇಡಿ ಸೂಪರ್‌ಸ್ಟಾರ್ ಸ್ಥಾನಮಾನವನ್ನು ಇನ್ನೂ ಉಳಿಸಿಕೊಂಡಿರುವ ನಟಿ ಮಾಲಾಶ್ರೀ ಅವರು ತಮ್ಮ ಮಗಳು ಆರಾಧನಾ ಅವರ ಚೊಚ್ಚಲ ಸಿನಿಮಾ ಕಾಟೇರ ಡಿಸೆಂಬರ್ 29 ರಂದು ತೆರೆಗೆ ಬರುತ್ತಿರುವುದರಿಂದ ಭಾರಿ ನಿರೀಕ್ಷೆಯೊಂದಿಗೆ ಕಾಯುತ್ತಿದ್ದಾರೆ. 
ಪುತ್ರಿ ಆರಾಧನಾ ಜೊತೆ ಮಾಲಾಶ್ರೀ
ಪುತ್ರಿ ಆರಾಧನಾ ಜೊತೆ ಮಾಲಾಶ್ರೀ

ಕನ್ನಡ ಚಿತ್ರರಂಗದಲ್ಲಿ ಲೇಡಿ ಸೂಪರ್‌ಸ್ಟಾರ್ ಸ್ಥಾನಮಾನವನ್ನು ಇನ್ನೂ ಉಳಿಸಿಕೊಂಡಿರುವ ನಟಿ ಮಾಲಾಶ್ರೀ ಅವರು ತಮ್ಮ ಮಗಳು ಆರಾಧನಾ ಅವರ ಚೊಚ್ಚಲ ಸಿನಿಮಾ ಕಾಟೇರ ಡಿಸೆಂಬರ್ 29 ರಂದು ತೆರೆಗೆ ಬರುತ್ತಿರುವುದರಿಂದ ಭಾರಿ ನಿರೀಕ್ಷೆಯೊಂದಿಗೆ ಕಾಯುತ್ತಿದ್ದಾರೆ. 

'ನಂಜುಂಡಿ ಕಲ್ಯಾಣ ಸಿನಿಮಾ ಮಾಡುವಾಗ ನನ್ನ ಅಭಿನಯದ ಪ್ರಭಾವ ಏನೆಂಬುದು ನನಗೆ ತಿಳಿದಿರಲಿಲ್ಲ. ನನ್ನ ಹೃದಯದಲ್ಲಿ ನಾನು ಹೊಸದೇನನ್ನೋ ಅನುಭವಿಸರಿಲಿಲ್ಲ. ನಾನು ಚಿತ್ರೀಕರಣ ಮುಗಿಸಿದೆ ಮತ್ತು ಮರಳಿದೆ. ಇದ್ದಕ್ಕಿದ್ದಂತೆ, ಚಿತ್ರವು ಬ್ಲಾಕ್‌ಬಸ್ಟರ್ ಹಿಟ್ ಎಂದು ನನಗೆ ಹೇಳಲಾಯಿತು. ಆದರೆ, ಆ ಯಶಸ್ಸನ್ನು ಹೇಗೆ ಆನಂದಿಸಬೇಕೆಂದು ನನಗೆ ತಿಳಿದಿರಲಿಲ್ಲ. ಆದರೆ ಇಂದು, ನನ್ನ ಮಗಳ ಮೊದಲ ಸಿನಿಮಾ ತೆರೆಕಾಣುತ್ತಿದ್ದು, ಭಯವಿದೆ ಮತ್ತು ನಾನು ಎಲ್ಲಾ ದೇವರುಗಳನ್ನು ಪ್ರಾರ್ಥಿಸುತ್ತಿದ್ದೇನೆ. ಆ ಯಶಸ್ಸನ್ನು ನನ್ನ ಮಗಳ ಮೂಲಕ ನಾನು ಕಾಣಬೇಕು. ನಾನಿನ್ನೂ ಸಿನಿಮಾವನ್ನು ನೋಡಿಲ್ಲ ಮತ್ತು ಓರ್ವ ಪ್ರೇಕ್ಷಕರಾಗಿ ಸಿನಿಮಾವನ್ನು ಅನುಭವಿಸಲು ಬಯಸುತ್ತೇನೆ. ಪ್ರೀ-ರಿಲೀಸ್ ಈವೆಂಟ್‌ನಲ್ಲಿ ನಾನು ಅವಳ ನಟನೆಯನ್ನು ನೋಡಿದೆ ಮತ್ತು ನನಗೆ ತುಂಬಾ ಸಂತೋಷವಾಯಿತು. ಅವಳು ತಯಾರಾಗುತ್ತಿದ್ದಾಳೆಂದು ನನಗೆ ಗೊತ್ತಿತ್ತು' ಎಂದು ಹೇಳಿದರು. 

'ನಮ್ಮ ಎಲ್ಲಾ ಕನಸುಗಳು ನನಸಾಗಬೇಕೆಂದು ನಾನು ಬಯಸುತ್ತೇನೆ' ಎನ್ನುವ ಮಾಲಾಶ್ರೀ ಅವರು ಬಹು ಭಾಷೆಗಳಲ್ಲಿ 140 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ನಟಿಯಾಗಿ ಗುರುತಿಸಿಕೊಳ್ಳಲು ಸಮಯ ತೆಗೆದುಕೊಂಡಿತು ಎಂದರು. 

ಆದಾಗ್ಯೂ, ಕಾಟೇರ ಚಿತ್ರದೊಂದಿಗೆ ಮೊದಲ ಚಿತ್ರದಲ್ಲೇ ನಟ ದರ್ಶನ್ ಜೊತೆಗೆ ನಟಿಸುತ್ತಿರುವ ಕುರಿತು ಮಾತನಾಡುವ ಅವರು, 'ಆರಾಧನಾ ಈಗ ಮಾಲಾಶ್ರೀ ಅವರ ಮಗಳು ಎಂಬುದಕ್ಕಿಂತ ಹೆಚ್ಚಾಗಿ, 'ಡಿ ಬಾಸ್ ಕ್ವೀನ್' ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ. ಚಿತ್ರರಂಗದಲ್ಲಿ ಅವಳ ಮುಂದೆ ಸಾಕಷ್ಟು ಸವಾಲುಗಳಿವೆ ಮತ್ತು ಇನ್ನೂ ಹೆಚ್ಚು ದೂರ ಸಾಗಬೇಕಿದೆ' ಎಂದು ಮಾಲಾಶ್ರೀ ಹೇಳಿದರು. 

'ಆರಾಧನಾಗೆ ಮೊದಲ ಪಾಠವೆಂದರೆ ಟೀಕೆಗಳನ್ನು ನಿಭಾಯಿಸುವುದು. ಹೆಚ್ಚು ವಿಮರ್ಶೆಗೆ ಒಳಪಡಲಾಗುತ್ತಿದೆ ಮತ್ತು ಹೆಚ್ಚು ಗಾಸಿಪ್ ಕೇಳಿಬರುತ್ತಿದೆ ಎಂದರೆ ಬೆಳವಣಿಗೆ ಎಂದರ್ಥ. ಅವಳು ಅವುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಯಶಸ್ಸು ಕಲಿಕೆಯ ಹಂತವಾಗಿದೆ; ಅದು ಅವಳ ತಲೆಗೆ ಹತ್ತಬಾರದು ಮತ್ತು ನಾನು ಅವಳಿಗೆ ಸಲಹೆ ನೀಡಿದ್ದೇನೆ. ತನ್ನ ಮಗಳು ಆರಾಧನಾ ಜೊತೆ ಸೆಟ್‌ನಲ್ಲಿ ಇದ್ದದ್ದು, ನಾನೇ ನಟನೆಗೆ ಮರಳುತ್ತಿರುವಂತೆ ಭಾಸವಾಗುತ್ತಿತ್ತು. 'ದಿನವಿಡೀ ಕುಳಿತು, ನಾನು ದಣಿದಿದ್ದೇನೆ. ಆದರೆ, ತಾಳ್ಮೆಯನ್ನು ಕಲಿತಿದ್ದೇನೆ. ಇದಲ್ಲದೆ, ನಾನು ಆಕೆಯ ನಟನೆಯನ್ನು ನೋಡಿದಾಗ, ನಾನು ಭಾವುಕಳಾಗುಗುತ್ತೇನೆ. ಅವಳು ಹಾಡಿನ ಹೆಜ್ಜೆ ಹಾಕುವಾಗ ನಾನು ಕೂಡ ಹೆಜ್ಜೆ ಹಾಕಿದ್ದೇನೆ. ಈಗ ಅವಳೊಂದಿಗೆ, ನಾನು ಮತ್ತೆ ನಟಿಯಾಗುತ್ತಿದ್ದೇನೆ' ಎಂದು ನಟಿ ಮಾಲಾಶ್ರೀ ಅವರು ಚಿತ್ರಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com