ನಟ ವಿಜಯಕಾಂತ್ ಅವರದು ಸಾವಲ್ಲ, ಕೊಲೆ: ಮಾಲಿವುಡ್ ಖ್ಯಾತ ನಿರ್ದೇಶಕ ಗಂಭೀರ ಆರೋಪ

ತಮಿಳಿನ ಖ್ಯಾತ ಹಾಗೂ ಡಿಎಂಡಿಕೆ ನಾಯಕ ನಟ ವಿಜಯಕಾಂತ್  ಸಾವಿನ ಬಗ್ಗೆ  ಕಳವಳ ವ್ಯಕ್ತಪಡಿಸಿ, ಮಾಲಿವುಡ್ ಖ್ಯಾತ ನಿರ್ದೇಶಕ ಅಲ್ಫೋನ್ಸ್ ಪುತ್ರೆನ್  ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. 
ವಿಜಯಕಾಂತ್, ಮಾಲಿವುಡ್ ನಿರ್ದೇಶಕ
ವಿಜಯಕಾಂತ್, ಮಾಲಿವುಡ್ ನಿರ್ದೇಶಕ
Updated on

ಚೆನ್ನೈ:  ತಮಿಳಿನ ಖ್ಯಾತ ಹಾಗೂ ಡಿಎಂಡಿಕೆ ನಾಯಕ ನಟ ವಿಜಯಕಾಂತ್  ಸಾವಿನ ಬಗ್ಗೆ  ಕಳವಳ ವ್ಯಕ್ತಪಡಿಸಿ, ಮಾಲಿವುಡ್ ಖ್ಯಾತ ನಿರ್ದೇಶಕ ಅಲ್ಫೋನ್ಸ್ ಪುತ್ರೆನ್  ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. 

ವಿಜಯಕಾಂತ್ ಅವರದು ಸಾವಲ್ಲ, ಕೊಲೆಯಾಗಿದ್ದಾರೆ. ಇದರ ಬಗ್ಗೆ ತನಿಖೆ ಮಾಡಿ ಎಂದು ರಾಜಕಾರಣಿ ಉದಯನಿಧಿ ಸ್ಟಾಲಿನ್ ಅವರಲ್ಲಿ ಮನವಿ ಮಾಡಿದ್ದಾರೆ.

ನಾನು ಕೇರಳದವರು. ಇದು ಉದಯನಿಧಿ ಅಣ್ಣ ಅವರಿಗಾಗಿ. ಕಲೈಂಜರ್, ಜಯಲಲಿತಾ ಕೊಂದವರು ಯಾರೆಂದು ನಾನು ಕೇಳಿದ್ದೆ. ಈಗ ಕ್ಯಾಪ್ಟನ್ ವಿಜಯಕಾಂತ್ ಅವರನ್ನು ಕೊಲೆ ಮಾಡಿದವರನ್ನು ನೀವು ಪತ್ತೆ ಮಾಡಬೇಕು. ನೀವು ಇದನ್ನು ನಿರ್ಲಕ್ಷ್ಯ ಮಾಡಿದರೆ, ಅವರು ಈಗಾಗಲೇ ಇಂಡಿಯನ್-2 ಸೆಟ್ ನಲ್ಲಿ ಸ್ಟಾಲಿನ್ ಹಾಗೂ ಕಮಲ್ ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು. ನೀವು ಈಗ ಕೊಲೆಗಾರರ ಹಿಂದೆ ಬೀಳದೆ ಇದ್ದರೆ, ಅವರು ನಿಮ್ಮ ಅಥವಾ ಸ್ಟಾಲಿನ್ ಅವರನ್ನು ಟಾರ್ಗೆಟ್ ಮಾಡುತ್ತಾರೆ. ನೇರಂ ಸಿನಿಮಾ ಹಿಟ್ ಆದ ಬಳಿಕ ನೀವು ನನಗೆ ಐಫೋನ್ ಗಿಫ್ಟ್ ಕೊಟ್ಟದ್ದು ನೆನಪಿದೆಯಾ? ನಿಮಗೆ ನೆನಪಿರಬಹುದೆಂದುಕೊಳ್ಳುತ್ತೇನೆ. ಕೊಲೆಗಾರರು ಹಾಗೂ ಅವರ ಉದ್ದೇಶವನ್ನು ಕಂಡುಹಿಡಿಯಿರಿ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com