‘ರೂಪಾಯಿ’ ಹಾಸ್ಯಮಯ ಸಿನಿಮಾ, ಈ ರೀತಿಯ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು: ಕೃಷಿ ತಾಪಂಡ

'ಹಣವು ಮೂಲಭೂತ ಅವಶ್ಯಕತೆಯಾಗಿದೆ, ಆದರೆ ಜೀವನದ ಮೌಲ್ಯವನ್ನು ಪ್ರೀತಿ ಮತ್ತು ಸಂಬಂಧದಿಂದ ವ್ಯಾಖ್ಯಾನಿಸಲಾಗಿದೆ ಎನ್ನುತ್ತಾರೆ ನಟಿ ಕೃಷಿ ತಾಪಂಡ.
ರೂಪಾಯಿ ಸಿನಿಮಾದ ಸ್ಟಿಲ್
ರೂಪಾಯಿ ಸಿನಿಮಾದ ಸ್ಟಿಲ್
Updated on

'ಹಣವು ಮೂಲಭೂತ ಅವಶ್ಯಕತೆಯಾಗಿದೆ, ಆದರೆ ಜೀವನದ ಮೌಲ್ಯವನ್ನು ಪ್ರೀತಿ ಮತ್ತು ಸಂಬಂಧದಿಂದ ವ್ಯಾಖ್ಯಾನಿಸಲಾಗಿದೆ ಎನ್ನುತ್ತಾರೆ ನಟಿ ಕೃಷಿ ತಾಪಂಡ. ಶಾಲೆಗಳು ನಮಗೆ ಗಾಳಿ, ನೀರು ಮತ್ತು ಆಶ್ರಯ ಮೂರು ಅವಶ್ಯಕವೆಂದು ಕಲಿಸುತ್ತವೆ. ಹಣವು ಈ ಪಟ್ಟಿಗೆ ಸೇರಿಸಬೇಕಾದ ವಿಷಯವಾಗಿದೆ. ಏಕೆಂದರೆ, ಅದು ನಮ್ಮ ಉಳಿವಿಗೆ ಸಹಾಯ ಮಾಡುತ್ತದೆ' ಎಂದು ಹೇಳುತ್ತಾರೆ.

ಈ ವಾರ ಬಿಡುಗಡೆಯಾಗಲಿರುವ ಅವರ ಮುಂಬರುವ ಚಿತ್ರ 'ರೂಪಾಯಿ' ಸಿನಿಮಾದ ಬಗ್ಗೆ ನಟಿ ನಮ್ಮೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಲಂಕೆಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಕೃಷಿ ತಾಪಂಡ ಅವರು ಸುಮಾರು ಒಂದು ವರ್ಷದ ನಂತರ ಬೆಳ್ಳಿತೆರೆಗೆ ಮರಳಿದ್ದಾರೆ.

<strong>ಕೃಷಿ ತಾಪಂಡ</strong>
ಕೃಷಿ ತಾಪಂಡ

ಸಾಂಕ್ರಾಮಿಕ ಸಮಯದಲ್ಲಿ ಪ್ರಾರಂಭವಾದ ಮತ್ತು ಅಂತಿಮವಾಗಿ ಬಿಡುಗಡೆಯ ಬೆಳಕನ್ನು ಕಾಣುತ್ತಿರುವ ಚಿತ್ರಗಳ ಪೈಕಿ ರೂಪಾಯಿ ಕೂಡ ಒಂದು. ಚಲನಚಿತ್ರವು ಹಣದ ಬಗ್ಗೆ ಮತ್ತು ಈ ನೋಟುಗಳು ಜೀವನದ ಬಗ್ಗೆ ಜನರ ದೃಷ್ಟಿಕೋನವನ್ನು ಹೇಗೆ ಬದಲಾಯಿಸುತ್ತವೆ ಎಂಬುದನ್ನು ಚಿತ್ರ ಒಳಗೊಂಡಿದೆ ಎಂದು ಕೃಷಿ ಹೇಳುತ್ತಾರೆ. 

ಆದಾಗ್ಯೂ, ರೂಪಾಯಿ ಒಂದು ಮೋಜಿನ, ಹಾಸ್ಯದ ವಿಷಯವಾಗಿದೆ ಮತ್ತು ಈ ರೀತಿಯ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು. ನಾನು ಈ ಚಿತ್ರ ಮಾಡಲು ಒಪ್ಪಿಕೊಂಡ ಕಾರಣಗಳಲ್ಲಿ ಇದೂ ಒಂದು. ಹೆಚ್ಚಿನ ಪ್ರೇಮಕಥೆಗಳ ಭಾಗವಾಗಿದ್ದ ನನಗೆ ಈ ಸಿನಿಮಾ, ಹಾಸ್ಯದಿಂದ ತುಂಬಿದ ಔಟ್-ಅಂಡ್-ಔಟ್ ಎಂಟರ್ಟೈನರ್ ಆಗಿದ್ದು, ಉಲ್ಲಾಸಕರ ಬದಲಾವಣೆಯಂತೆ ಭಾಸವಾಗುತ್ತಿದೆ ಎಂದು ಅವರು ಹೇಳುತ್ತಾರೆ.

ಕೃಷಿ ಅವರ ಪ್ರಕಾರ, ಹಣವು ಗಂಭೀರ ವಿಷಯವಾಗಿದೆ ಮತ್ತು ಹಣವು ಯಾರೊಬ್ಬರ ಜೀವನದಲ್ಲಿ ಹೇಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ಚಿತ್ರ ತೋರಿಸುತ್ತದೆ. ಆದರೆ, ಅದನ್ನು  ಹಾಸ್ಯಮಯ ರೀತಿಯಲ್ಲಿ ತೋರಿಸುತ್ತದೆ. ನಿರ್ದೇಶಕ ವಿಜಯ್ ಜಗದಲ್ ಸಹ ನಾಯಕನಾಗಿ ನಟಿಸಿದ್ದಾರೆ ಮತ್ತು ನಾನು ಅವರಿಗೆ ಜೋಡಿಯಾಗಿದ್ದೇನೆ. ಇದು ಹಾಸ್ಯಮಯ ಚಿತ್ರವಾಗಿದ್ದರೂ, ನನ್ನ ಪಾತ್ರ ಸೂಕ್ಷ್ಮತೆಯಿಂದ ಕೂಡಿದೆ ಮತ್ತು ಹಣವು ಮುಖ್ಯವಲ್ಲ ಎಂದು ಭಾವಿಸುವ ಮತ್ತು ಸಂಬಂಧಗಳನ್ನು ಗೌರವಿಸುವ ವ್ಯಕ್ತಿಯನ್ನು ನಾನು ಪ್ರತಿನಿಧಿಸಿದ್ದೇನೆ' ಎಂದು ಅವರು ಹೇಳುತ್ತಾರೆ.

ಮಂಜುನಾಥ್ ಎಂ ಮತ್ತು ಹರೀಶ್ ಬಿಕೆ ನಿರ್ಮಾಣದ ರೂಪಾಯಿಯಲ್ಲಿ ಚಂದನಾ ರಾಘವೇಂದ್ರ, ಮೈತ್ರಿ ಜಗದೀಶ್, ರಾಮ್ ಚಂದನ್, ಪ್ರಮೋದ್ ಶೆಟ್ಟಿ, ಅನಿಲ್ ಕುಮಾರ್ ಮತ್ತು ಕೃತಿ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ರಾಜಾವಿಕ್ರಂ ಅವರ ಸಂಗೀತ ಮತ್ತು ಆರ್‌ಡಿ ನಾಗಾರ್ಜುನ್ ಅವರ ಛಾಯಾಗ್ರಹಣವಿದೆ.

ಈ ಯೋಜನೆಯ ಹೊರತಾಗಿ, ಪ್ರಜ್ವಲ್ ದೇವರಾಜ್ ಅಭಿನಯದ ಗಾನ ಮತ್ತು ನಟ ಕಿಶೋರ್ ಅವರೊಂದಿಗೆ ಇನ್ನೂ ಹೆಸರಿಡದ ಸಿನಿಮಾಗಳಲ್ಲಿ ಕೃಷಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡೂ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com