
ಧ್ರುವ ಸರ್ಜಾ ಅವರ ಮುಂಬರುವ ಬಹುಭಾಷಾ ಆಕ್ಷನ್ ಎಂಟರ್ಟೈನರ್ ಮಾರ್ಟಿನ್ ನ ಟಾಕಿ ಭಾಗಗಳು ಪೂರ್ಣಗೊಂಡಿವೆ. ನಿರ್ದೇಶಕ ಎಪಿ ಅರ್ಜುನ್ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಏತನ್ಮಧ್ಯೆ, ಹಿನ್ನೆಲೆ ಸಂಗೀತ ಮತ್ತು ಧ್ವನಿ ವಿನ್ಯಾಸವನ್ನು ನೋಡಿಕೊಳ್ಳಲು ತಯಾರಕರು ರವಿ ಬಸ್ರೂರ್ ಅವರನ್ನು ಸಂಪರ್ಕಿಸಿದ್ದಾರೆ.
ಪ್ಯಾನ್ ಇಂಡಿಯಾಲ್ ಲೆವೆಲ್‌ನಲ್ಲಿ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಸದ್ಯ ಚಿತ್ರದ ಟೀಸರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ.
ಚಿತ್ರವನ್ನು ದೊಡ್ಡ ಕ್ಯಾನ್ವಾಸ್‌ನಲ್ಲಿ ನಿರ್ಮಿಸಲಾಗಿದೆ ಮತ್ತು ಬಹು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. "ಮಾರ್ಟಿನ್ ಒಂದು ಸಾಹಸಗಾಥೆಯಾಗಿರುವುದರಿಂದ, ನಾವು ಹಿನ್ನೆಲೆ ಸಂಗೀತ ಉತ್ತಮವಾಗಿ ಮೂಡಿ ಬರಬೇಕೆಂದು ಬಯಸಿದ್ದೆವು. ರವಿ ಬಸ್ರೂರ್ ಅವರ ಹಿಂದಿನ ಕೆಲಸವನ್ನು ತಿಳಿದಿದ್ದೇವೆ, ನಮ್ಮ ಸಿನಿಮಾಗೆ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ ಎಂದು ನಾವು ಭಾವಿಸಿದ್ದೇವೆ ಎಂದು ಅರ್ಜುನ್ ಹೇಳಿದ್ದಾರೆ.
ಕ್ಲೈಮ್ಯಾಕ್ಸ್ ಸೀಕ್ವೆನ್ಸ್ ಚಿತ್ರೀಕರಣಕ್ಕೆ ಬರೋಬ್ಬರಿ 40 ದಿನಗಳನ್ನು ತೆಗೆದುಕೊಂಡ ತಂಡ, ಚೇಸ್ ದೃಶ್ಯಗಳಿಗೆ ರವಿವರ್ಮ ಮತ್ತು ರಾಮ್-ಲಕ್ಷ್ಮಣ್ ಹೊಡೆದಾಟದ ದೃಶ್ಯಗಳಿಗೆ ಕೊರಿಯೊಗ್ರಫಿ ಮಾಡಿದ್ದಾರೆ. ತಂಡವು ಇನ್ನು 4 ಹಾಡುಗಳ ಚಿತ್ರೀಕರಣವನ್ನು ಬಾಕಿ ಉಳಿಸಿಕೊಂಡಿದೆ, ಅವರು ಮಾರ್ಚ್ ಮತ್ತು ಏಪ್ರಿಲ್ ನಡುವೆ ಚಿತ್ರೀಕರಣ ಮಾಡಲು ಯೋಜಿಸಿದ್ದಾರೆ.
ತಯಾರಕರು ಶೀಘ್ರದಲ್ಲೇ ಟೀಸರ್ ರಿಲೀಸ್ ಮಾಡಲಿದ್ದಾರೆ. ಉದಯ್ ಕೆ ಮೆಹ್ತಾ ನಿರ್ಮಿಸಿರುವ ಈ ಚಿತ್ರದಲ್ಲಿ ಗಾಳಿಪಟ 2 ನಾಯಕಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸುತ್ತಿದ್ದು, ಅನ್ವೇಶಿ ಜೈನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ನಿಕಿತಿನ್ ಧೀರ್ ಅವರ ಚೊಚ್ಚಲ ಚಿತ್ರವಾಗಿದೆ.
ಕೆಜಿಎಫ್ ಚಿತ್ರದ ಮೂಲಕ ಖ್ಯಾತಿ ಗಳಿಸಿದ ರವಿ ಬಸ್ರೂರ್ ಒಂದೆರೆಡು ಹಿಂದಿ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಕಬ್ಜಾ ಸಿನಿಮಾಗೂ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಮಾರ್ಚ್ 17 ರಂದು ಬಿಡುಗಡೆಯಾಗಲಿದೆ.
Advertisement