ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಸಿನಿಮಾದ ಕ್ಲೈಮ್ಯಾಕ್ಸ್ ಸೀಕ್ವೆನ್ಸ್‌ಗಾಗಿ 40 ದಿನಗಳ ಚಿತ್ರೀಕರಣ

ಸಿನಿಮಾದ ಕ್ಲೈಮ್ಯಾಕ್ಸ್ ಸೀಕ್ವೆನ್ಸ್‌ಗಾಗಿ ನಿರ್ಮಾಪಕರು 40 ದಿನಗಳ ಚಿತ್ರೀಕರಣ ನಡೆಸಿದ್ದಾರೆ. ಚೇಸ್ ದೃಶ್ಯಗಳಿಗೆ ಕೊರಿಯೋಗ್ರಫಿ ಮಾಡಲು ರವಿವರ್ಮ ಮತ್ತು ಫೈಟ್ ದೃಶ್ಯಗಳಿಗೆ ರಾಮ್-ಲಕ್ಷ್ಮಣ್ ಜೋಡಿಯನ್ನು ನಿರ್ದೇಶಕ ಅರ್ಜುನ್ ಬಳಸಿಕೊಂಡಿದ್ದಾರೆ.
ಮಾರ್ಟಿನ್ ಸಿನಿಮಾದಲ್ಲಿ ನಟ ಧ್ರುವ ಸರ್ಜಾ
ಮಾರ್ಟಿನ್ ಸಿನಿಮಾದಲ್ಲಿ ನಟ ಧ್ರುವ ಸರ್ಜಾ
Updated on

ನಟ ಧ್ರುವ ಸರ್ಜಾ ಅವರು ತಮ್ಮ ನವಜಾತ ಮಗಳೊಂದಿಗೆ ಮನೆಯಲ್ಲಿ ಮತ್ತು ಮಾರ್ಟಿನ್ ಸೆಟ್‌ಗಳಲ್ಲಿ ತಮ್ಮ ಸಮಯವನ್ನು ಸಮತೋಲನಗೊಳಿಸುವುದರಲ್ಲಿ ನಿರತರಾಗಿದ್ದಾರೆ. 'ನಾನಿನ್ನು ತಂದೆ ಎಂಬ ಭಾವನೆಯಲ್ಲಿ ಮುಳುಗಿದ್ದೇನೆ. ಕೆಲಸದ ನಂತರದ ಸಂಜೆಯನ್ನು ನನ್ನ ಪುಟ್ಟ ಮಗುವಿಗೆ ಅರ್ಪಿಸುತ್ತಿದ್ದೇನೆ’ ಎನ್ನುತ್ತಾರೆ ಧ್ರುವ.

ಎಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು, ಎರಡು ದಿನಗಳಲ್ಲಿ ಮೆಗಾ-ಬಜೆಟ್ ಕ್ಲೈಮ್ಯಾಕ್ಸ್ ಸೀಕ್ವೆನ್ಸ್‌ನೊಂದಿಗೆ ಪೂರ್ಣಗೊಳ್ಳಲಿದೆ. ಈ ಸಿನಿಮಾ ಔಟ್-ಅಂಡ್-ಔಟ್ ಆಕ್ಷನ್ ಚಿತ್ರ ಎಂದು ಕರೆಯುತ್ತಾರೆ ಧ್ರುವ.

ಸಿನಿಮಾದ ಕ್ಲೈಮ್ಯಾಕ್ಸ್ ಸೀಕ್ವೆನ್ಸ್‌ಗಾಗಿ ನಿರ್ಮಾಪಕರು 40 ದಿನಗಳ ಚಿತ್ರೀಕರಣ ನಡೆಸಿದ್ದಾರೆ. ಚೇಸ್ ದೃಶ್ಯಗಳಿಗೆ ಕೊರಿಯೋಗ್ರಫಿ ಮಾಡಲು ರವಿವರ್ಮ ಮತ್ತು ಫೈಟ್ ದೃಶ್ಯಗಳಿಗೆ ರಾಮ್-ಲಕ್ಷ್ಮಣ್ ಜೋಡಿಯನ್ನು ನಿರ್ದೇಶಕ ಅರ್ಜುನ್ ಬಳಸಿಕೊಂಡಿದ್ದಾರೆ.

'ಶೆಡ್ಯೂಲ್‌ನ ಕೊನೆಯ ಹಂತದಲ್ಲಿ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್ ಮತ್ತು ನಿಕಿತಿನ್ ಧೀರ್ ಸೇರಿದಂತೆ ಸಂಪೂರ್ಣ ಪಾತ್ರವರ್ಗ ಮತ್ತು ಸಿಬ್ಬಂದಿ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಅದ್ಧೂರಿ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ' ಎಂದು ನಿರ್ದೇಶಕ ಎಪಿ ಅರ್ಜುನ್‌ ಹಂಚಿಕೊಂಡಿದ್ದಾರೆ.

ಉದಯ್ ಕೆ ಮೆಹ್ತಾ ನಿರ್ಮಿಸಿರುವ 'ಮಾರ್ಟಿನ್' ಚಿತ್ರದ ಟಾಕಿ ಭಾಗಗಳು ಕೆಲವೇ ವಾರಗಳಲ್ಲಿ ಮುಕ್ತಾಯಗೊಳ್ಳಲಿವೆ ಮತ್ತು ಉಳಿದ 4 ಹಾಡುಗಳನ್ನು ಡಿಸೆಂಬರ್ ಮತ್ತು ಜನವರಿ ನಡುವೆ ಚಿತ್ರೀಕರಿಸಲಾಗುವುದು. 2023ರ ಮಾರ್ಚ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಗುರಿಯನ್ನು ನಿರ್ಮಾಪಕರು ಹೊಂದಿದ್ದಾರೆ.

ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ನವೆಂಬರ್ 15 ರೊಳಗೆ 'ಮಾರ್ಟಿನ್' ಚಿತ್ರದ ಟಾಕಿ ಮುಗಿಸಲು ಯೋಜಿಸಿರುವ ಧ್ರುವ ಸರ್ಜಾ, ನವೆಂಬರ್ 24 ರಂದು ನಿರ್ದೇಶಕ ಪ್ರೇಮ್ ಅವರ ಕೆಡಿ ಸಿನಿಮಾ ಕಡೆಗೆ ಹೋಗಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com