ಸುದೀಪ್ ಸಿನಿಮಾ ಕ್ಷೇತ್ರದಲ್ಲಿ ತಮ್ಮದೆ ಆದ ಸಾಧನೆ ಮಾಡಿದ್ದಾರೆ, ಆದರೆ... ಕಿಚ್ಚನ ರಾಜಕೀಯ ಪ್ರವೇಶದ ಬಗ್ಗೆ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ!

ಇತ್ತೀಚೆಗೆ ಸುದೀಪ್ ಅವರನ್ನು ಭೇಟಿ ಮಾಡಿದ್ದೆ, ಕೆಲ ಕಾರ್ಯಕ್ರಮಗಳ ಇನ್ವಿಟೇಷನ್ ನೀಡಬೇಕಿತ್ತು, ಕೆಲ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ವೇಳೆ ನಾನು ನನ್ನ 35 ವರ್ಷಗಳ ರಾಜಕೀಯ ಅನುಭವದ ಜ್ಞಾನ ಭಂಡಾರವನ್ನು ಹಂಚಿಕೊಂಡಿದ್ದೇನೆ, 
ಸುದೀಪ್ ಜೊತೆ ಡಿಕೆ ಶಿವಕುಮಾರ್
ಸುದೀಪ್ ಜೊತೆ ಡಿಕೆ ಶಿವಕುಮಾರ್

ಮೈಸೂರು: ಸಿನಿ ಕ್ಷೇತ್ರದಲ್ಲಿ ಮಿಂಚಿದವರು ರಾಜಕೀಯಕ್ಕೆ ಎಂಟ್ರಿ ಕೊಡುವುದನ್ನು ನಾವು ನೋಡಿದ್ದೇವೆ. ನಟ ಕಮಲ ಹಾಸನ್, ಚಿರಂಜೀವಿ, ಜಗ್ಗೇಶ್, ನಟಿ ರಮ್ಯಾ ಸೇರಿ ಅನೇಕರು ಆ ಸಾಲಿನಲ್ಲಿದ್ದಾರೆ. ಇದೀಗ ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಕೂಡ ಅದೇ ಸಾಲಿಗೆ ಸೇರಿಕೊಳ್ಳುತ್ತಾರಾ ಎನ್ನುವ ಚರ್ಚೆಗಳು ಆರಂಭವಾಗಿವೆ.

ಕೆಲ ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸುದೀಪ್ ಅವರನ್ನು ಭೇಟಿ ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು.ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಡಿ.ಕೆ ಶಿವಕುಮಾರ್, ಸುದೀಪ್ ಅವರು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ,  ಸಾಮಾಜಿಕ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ, ಆದರೆ ಅವರಿಗೆ ಪಾಲಿಟಿಕ್ಸ್ ಏನು ಪರಿಸ್ಥಿತಿ ಏನು ಎಂಬ ಬಗ್ಗೆ ಅರಿವಿಲ್ಲ ಎಂದಿದ್ದಾರೆ.

ಇತ್ತೀಚೆಗೆ ಸುದೀಪ್ ಅವರನ್ನು ಭೇಟಿ ಮಾಡಿದ್ದೆ, ಕೆಲ ಕಾರ್ಯಕ್ರಮಗಳ ಇನ್ವಿಟೇಷನ್ ನೀಡಬೇಕಿತ್ತು, ಕೆಲ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ವೇಳೆ ನಾನು ನನ್ನ 35 ವರ್ಷಗಳ ರಾಜಕೀಯ ಅನುಭವದ ಜ್ಞಾನ ಭಂಡಾರವನ್ನು ಹಂಚಿಕೊಂಡಿದ್ದೇನೆ, ಅವರನ್ನು ಬಲವಂತ ಮಾಡುವಂತದ್ದು ಏನು ಇಲ್ಲ, ಕೆಲವು ಪ್ರಶ್ನೆಗಳನ್ನು ಕೇಳಿದ್ದೇವೆ ಎಂದಿದ್ದಾರೆ.

ನಟ ಸುದೀಪ್ ನನ್ನ ಸ್ನೇಹಿತ. ಮನೆಗೆ ಬಂದಾಗ ರಾಜ್ಯ ರಾಜಕಾರಣದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರು ಕೇಳಿದ ಪ್ರಶ್ನೆಗಳಿಗೆ ನನ್ನ ರಾಜಕೀಯ ಅನುಭವದ ಆಧಾರದ ಮೇಲೆ ಉತ್ತರ‌ ನೀಡಿದ್ದೇನೆ. ಅವರನ್ನು ರಾಜಕೀಯಕ್ಕೆ ಬನ್ನಿ ಎಂದು ಬಲವಂತ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com