ದರ್ಶನ್-ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ

ಫೆಬ್ರುವರಿ 23 ರಿಂದ ಕನ್ನಡ ಸಿನಿಮಾ 'ಕ್ರಾಂತಿ' ತನ್ನ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಅಮೆಜಾನ್ ಪ್ರೈಮ್ ವಿಡಿಯೋ ಸೋಮವಾರ ಪ್ರಕಟಿಸಿದೆ.
ಕ್ರಾಂತಿ ಸಿನಿಮಾದಲ್ಲಿ ದರ್ಶನ್ ಮತ್ತು ರಚಿತಾ ರಾಮ್
ಕ್ರಾಂತಿ ಸಿನಿಮಾದಲ್ಲಿ ದರ್ಶನ್ ಮತ್ತು ರಚಿತಾ ರಾಮ್
Updated on

ಬೆಂಗಳೂರು: ಫೆಬ್ರುವರಿ 23 ರಿಂದ ಕನ್ನಡ ಸಿನಿಮಾ 'ಕ್ರಾಂತಿ' ತನ್ನ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಅಮೆಜಾನ್ ಪ್ರೈಮ್ ವಿಡಿಯೋ ಸೋಮವಾರ ಪ್ರಕಟಿಸಿದೆ.

ವಿ ಹರಿಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ತೂಗುದೀಪ ಮತ್ತು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಟರಾದ ವಿ ರವಿಚಂದ್ರನ್, ತರುಣ್ ಅರೋರಾ ಮತ್ತು ಸುಮಲತಾ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀಮಂತ ಎನ್ಆರ್‌ಐ ಉದ್ಯಮಿ ಕ್ರಾಂತಿ ರಾಯಣ್ಣ (ದರ್ಶನ್) ತನ್ನ ಬಾಲ್ಯದ ಶಾಲೆಯ ಶತಮಾನೋತ್ಸವ ಸಮಾರಂಭ ಆಚರಿಸಲು ಭಾರತಕ್ಕೆ ಹಿಂತಿರುಗುತ್ತಾರೆ. ಆದರೆ, ಸಮಾರಂಭ ಆರಂಭವಾಗುತ್ತಿದ್ದಂತೆ ಶಾಲೆಯು ಏಕಾಏಕಿ ನೆಲಕ್ಕುರುಳುತ್ತದೆ. ಈ ವೇಳೆ ಹಲವರು ಮೃತಪಟ್ಟು, ಹಲವರು ಗಾಯಗೊಳ್ಳುತ್ತಾರೆ.

ಭ್ರಷ್ಟ ಉದ್ಯಮಿ ಸಾಲತ್ರಿ (ತರುಣ್ ಅರೋರಾ) ಮತ್ತು ಅವರ ಆಪ್ತರು ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳಲು ಹೆಚ್ಚಿನ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸಲು ಈ ದುರಂತವನ್ನು ರೂಪಿಸಿದ್ದಾರೆ ಎಂದು ಕ್ರಾಂತಿ ಕಂಡುಕೊಂಡಾಗ, ಅವರು ಶಾಲೆಗಳು ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸಾಲತ್ರಿ ವಿರುದ್ಧ ಸಮರ ಸಾರುತ್ತಾರೆ ಎಂದು ಹೇಳಲಾಗಿದೆ. 

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ 240 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಪ್ರೈಮ್ ಸದಸ್ಯರಿಗೆ 'ಕ್ರಾಂತಿ' ವೀಕ್ಷಣೆಗೆ ಲಭ್ಯವಿರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com