“ಮೈಂಡ್ ಲೆಸ್ “ನನ್ನ ಪದವಲ್ಲ, ಪ್ರೇಕ್ಷಕನಾಗಿ ಎಲ್ಲರಿಗೂ ಇರುವಂತೆ ಅಭಿರುಚಿ, ಆಯ್ಕೆಯ ಸ್ವಾತಂತ್ರ್ಯ ನನ್ನದು: ನಟ ಕಿಶೋರ್

ಖ್ಯಾತ ನಟ ಕಿಶೋರ್​ ಅವರು ‘ಕೆಜಿಎಫ್​’ ಸಿನಿಮಾ (KGF Movie) ಕುರಿತು ಇತ್ತೀಚೆಗೆ ನೀಡಿದ ಹೇಳಿಕೆ ಸಾಕಷ್ಟು ಸುದ್ದಿಯಾಗಿತ್ತು. ಅದೊಂದು ಮೈಂಡ್ ಲೆಸ್ ಚಿತ್ರ, ನನ್ನ ಅಭಿರುಚಿಗೆ ತಕ್ಕನಾದ ಚಿತ್ರವಲ್ಲ ಎಂದು ಹೇಳಿದ್ದರು ಎಂದೆಲ್ಲ ಸುದ್ದಿಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು. 
ನಟ ಕಿಶೋರ್ ಮತ್ತು ಯಶ್(ಚಿತ್ರದ ಪೋಸ್ಟರ್ ಗಳು)
ನಟ ಕಿಶೋರ್ ಮತ್ತು ಯಶ್(ಚಿತ್ರದ ಪೋಸ್ಟರ್ ಗಳು)
Updated on

ಖ್ಯಾತ ನಟ ಕಿಶೋರ್​ ಅವರು ‘ಕೆಜಿಎಫ್​’ ಸಿನಿಮಾ (KGF Movie) ಕುರಿತು ಇತ್ತೀಚೆಗೆ ನೀಡಿದ ಹೇಳಿಕೆ ಸಾಕಷ್ಟು ಸುದ್ದಿಯಾಗಿತ್ತು. ಅದೊಂದು ಮೈಂಡ್ ಲೆಸ್ ಚಿತ್ರ, ನನ್ನ ಅಭಿರುಚಿಗೆ ತಕ್ಕನಾದ ಚಿತ್ರವಲ್ಲ ಎಂದು ಹೇಳಿದ್ದರು ಎಂದೆಲ್ಲ ಸುದ್ದಿಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು. 

ಇದೀಗ ಈ ಬಗ್ಗೆ ಸ್ವತಃ ಕಿಶೋರ್ ಅವರೇ ಇನ್ಟ್ರಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ್ದಾರೆ.  ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇನ್ನು ಚರ್ಚಿಸಲು, ತಲೆಕೆಡಿಸಿಕೊಳ್ಳಲು ಸಾಕಷ್ಟು ವಿಷಯವಿರುವಾಗ ನನ್ನ ಮಾತುಗಳು ಇಷ್ಟು ಚರ್ಚೆಗೆ ಏಕೆ ಬರುತ್ತಿವೆ ಎಂಬ ಬಗ್ಗೆ ಕೂಡ ವಿಷಾದ ವ್ಯಕ್ತಪಡಿಸಿದ್ದಾರೆ.

ಅವರು ಬರೆದಿರುವ ಬರಹ ಹೀಗಿದೆ: ‘ಚರ್ಚಿಸಲು, ಚಿಂತಿಸಲು ನಿಜವಾದ ಸಮಸ್ಯೆಗಳು ಹಲವಿರುವಾಗ ನನ್ನ ಲೋಕಾಭಿರಾಮದ ಯಾವುದೋ ಮಾತು ಚರ್ಚೆಗೆ ಗ್ರಾಸವಾಗುವುದೋ, ಜನರ ಸಮಯ ಹಾಳುಮಾಡುವುದೋ ನನ್ನ ಮಟ್ಟಿಗೆ ಅಕ್ಷಮ್ಯ. ಆದರೂ ಅದಕ್ಕಾಗಿ ಕ್ಷಮೆಯಿರಲಿ. ನಾನು ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಇಷ್ಟು ಚರ್ಚೆ ಆಗಿದ್ದರೆ ತೃಪ್ತಿಯಿರುತ್ತಿತ್ತು. ಅದೇನೇ ಇರಲಿ ರಶ್ಮಿಕಾ ವಿಷಯದ ಚರ್ಚೆಯಲ್ಲಿ, ಆಯ್ಕೆಯ ಸ್ವಾತಂತ್ರದ ಮಾತುಗಳ ನಡುವೆ ಹೇಗೋ ಸುಳಿದ ಈ ಮಾತುಗಳಲ್ಲಿ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವಿರಲಿಲ್ಲ’.

‘ಮೈಂಡ್ ಲೆಸ್ ನನ್ನ ಪದವಲ್ಲ. ಬರೆದವರು ನನ್ನ ಯಾವ ಪದವನ್ನು ಸಮೀಕರಿಸಿ ಆ ಪದ ಬಳಸಿದರೋ, ಭಾಷಾಂತರದಲ್ಲಿ ಯಾವ ಪದದರ್ಥ ಏನಾಯ್ತೊ ಗೊತ್ತಿಲ್ಲ. ‘ನೋಡಿಲ್ಲ’ದಿಂದ ‘ನೋಡುವುದಿಲ್ಲ’ದವರೆಗೆ ಅವರವರ ಇಷ್ಟದಂತೆ ಬರೆದಿದ್ದಾರಲ್ಲ ಹಾಗೆ. ಒಂದು ಸಿನಿಮಾವನ್ನು ನೋಡದ ನಾನು ಅದನ್ನು ಈ ಥರದ ಪದಬಳಸಿ ತೀರ್ಪು ಕೊಡುವುದು ಸಾಧ್ಯವೂ ಇಲ್ಲ. ಮಾಡಿದರೆ ತಪ್ಪೂ ಸಹ. ಆದರೆ ಪ್ರೇಕ್ಷಕನಾಗಿ ಎಲ್ಲರಿಗೂ ಇರುವಂತೆ ಅಭಿರುಚಿ, ಆಯ್ಕೆಯ ಸ್ವಾತಂತ್ರ್ಯ ನನ್ನದು’.

ಯಾರೂ ಯಾರನ್ನೂ ಥಿಯೇಟರಿನ ಒಳಗೂ ತಳ್ಳಲಾಗದು, ಹೊರಗೂ ಸಹ. ನನ್ನ ಸಿನಿಮಾವಾದರೂ ಸರಿ, ಯಾವ ಸಿನಿಮಾದರೂ ಸರಿ. ಒಟ್ಟಿನಲ್ಲಿ ನನ್ನ ಅಭಿರುಚಿಯೋ ಅಲ್ಲವೋ KGF ಸಿನಿಮಾದ ಯಶಸ್ಸಿನ ಬಗ್ಗೆ ಸಂತೋಷವಿದೆ ಹಾಗೂ ಆ ಯಶಸ್ಸಿನಿಂದ ನನ್ನಲ್ಲಿನ ಸಿನಿಮಾ ತಂತ್ರಜ್ಞ ಕಲಿತದ್ದು, ಕಲಿಯುವುದೂ ಸಾಕಷ್ಟಿದೆ. ನನ್ನ KGF ಕಲ್ಪನೆ ಬೇರೆಯೇ ಆದರೂ ಸಹ’ ಎಂದು ಕಿಶೋರ್​ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com