ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಟಿ ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ ಕ್ರಾಂತಿ ಸಿನಿಮಾ ಇದೇ ಜನವರಿ 26 ರಂದು ಬಿಡುಗಡೆಗೆ ಸಜ್ಜಾಗಿದ್ದು, ಅಬ್ಬರದ ಪ್ರಚಾರ ನಡೆಯುತ್ತಿದೆ. ವಿಶೇಷವಾಗಿ ಸಾಮಾಜಿಕ ಜಾಲತಾಣ, ಯು ಟ್ಯೂಬ್ ಗಳಲ್ಲಿ ಪ್ರಚಾರ ಕಾರ್ಯ ಜೋರಾಗಿ ಸಾಗಿದೆ. ಪ್ರಚಾರದ ಭಾಗವಾಗಿ ನಟಿ ರಚಿತಾ ರಾಮ್ ನೀಡಿರುವ ಹೇಳಿಕೆ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.
ಇಷ್ಟು ವರ್ಷ ಜನವರಿ 26 ಅಂದ್ರೆ ರಿಪಬ್ಲಿಕ್ ಡೇ. ಆದರೆ ಈ ವರ್ಷ ಗಣರಾಜ್ಯೋತ್ಸವ ಮರೆತು, ಕ್ರಾಂತಿ ಉತ್ಸವ ಅಷ್ಟೇ ಎಂದು ನಟಿ ರಚಿತಾ ರಾಮ್ ಹೇಳಿದರು. ಈ ವಿವಾದಾತ್ಮಕ ಹೇಳಿಕೆ ವೈರಲ್ ಆಗಿದೆ, ಟ್ವಿಟರ್‌ನಲ್ಲಿ ನೆಟ್ಟಿಗರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಗಣರಾಜ್ಯೋತ್ಸವಕ್ಕಿಂತ ನಿಮ್ಮ ಚಿತ್ರ ದೊಡ್ಡದಾ, ಅನಕ್ಷರಸ್ಥೆ ಥರ ಮಾತನಾಡಬೇಡಿ ಮೊದಲು ದೇಶ ನಂತರ ಸಿನಿಮಾ ಎಂದು ನೆಟ್ಟಿಗನೊಬ್ಬ ಹೇಳಿದ್ದಾನೆ. ಗಣರಾಜ್ಯೋತ್ಸವ ಮರೆತು ಕ್ರಾಂತಿ ನೋಡಬೇಕಾ? ನೀವು ಭಾರತೀಯರಾ? ಇಲ್ಲಿ ಇರಬೇಡಿ, ಪಾಕಿಸ್ತಾನಕ್ಕೆ ಹೋಗಿ ಮತ್ತೋರ್ವ ಹೇಳಿದ್ದಾನೆ.
Advertisement