ಕ್ರಾಂತಿ ಟ್ರೈಲರ್ ಬಿಡುಗಡೆ: ಮಾಸ್ ಮತ್ತು ಕ್ಲಾಸ್ ಮಿಶ್ರಣದ ಭರವಸೆ ನೀಡಿದ ದರ್ಶನ್ ಅಭಿನಯದ ಸಿನಿಮಾ
ಮೈಸೂರು, ಹೊಸಪೇಟೆ, ಹುಬ್ಬಳ್ಳಿ ನಂತರ ದರ್ಶನ್ ಜೊತೆಗಿನ ಕ್ರಾಂತಿ ಸಂಭ್ರಮ ಬೆಂಗಳೂರಿನಲ್ಲಿ ಶನಿವಾರವೂ ಮುಂದುವರಿದಿದೆ. ಚಿತ್ರದ ಬಹು ನಿರೀಕ್ಷಿತ ಟ್ರೈಲರ್ ಅನ್ನು ಚಿತ್ರತಂಡ, ಸಿಬ್ಬಂದಿ ಮತ್ತು ದರ್ಶನ್ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಬಿಡುಗಡೆಮಾಡಲಾಯಿತು.
Published: 09th January 2023 09:43 AM | Last Updated: 09th January 2023 09:47 AM | A+A A-

ನಟ ದರ್ಶನ್
ಮೈಸೂರು, ಹೊಸಪೇಟೆ, ಹುಬ್ಬಳ್ಳಿ ನಂತರ ದರ್ಶನ್ ಜೊತೆಗಿನ ಕ್ರಾಂತಿ ಸಂಭ್ರಮ ಬೆಂಗಳೂರಿನಲ್ಲಿ ಶನಿವಾರವೂ ಮುಂದುವರಿದಿದೆ. ಚಿತ್ರದ ಬಹು ನಿರೀಕ್ಷಿತ ಟ್ರೈಲರ್ ಅನ್ನು ಚಿತ್ರತಂಡ, ಸಿಬ್ಬಂದಿ ಮತ್ತು ದರ್ಶನ್ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಬಿಡುಗಡೆಮಾಡಲಾಯಿತು.
ಟ್ರೈಲರ್ ಅನ್ನು ರಾಜ್ಯಾದ್ಯಂತ 130ಕ್ಕೂ ಹೆಚ್ಚು ಪರದೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಯಿತು. ಶಿಕ್ಷಣ ವ್ಯವಸ್ಥೆ ಮತ್ತು ವಿಶೇಷವಾಗಿ ಸರ್ಕಾರಿ ಶಾಲೆಗಳ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡುವ ಕ್ರಾಂತಿ ಎಂಬ ಶೀರ್ಷಿಕೆಯ ಪಾತ್ರದಲ್ಲಿ ದರ್ಶನ್ ಅವರನ್ನು ತೋರಿಸಲಾಗಿದೆ. ಚಿತ್ರದಲ್ಲಿ ದರ್ಶನ್ ವಿದೇಶದಲ್ಲಿ ನೆಲೆಸಿರುವ ಮತ್ತು ಭಾರತಕ್ಕೆ ಬರುವ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ನಲ್ಲಿ ರವಿಚಂದ್ರನ್, ಉಮಾಶ್ರೀ ಮತ್ತು ಮುಖ್ಯಮಂತ್ರಿ ಚಂದ್ರು ಅವರ ಪಾತ್ರಗಳನ್ನು ತೋರಿಸಲಾಗಿದೆ.
ಮಾಸ್ ಮತ್ತು ಕ್ಲಾಸ್ ಅಂಶಗಳಿಂದ ತುಂಬಿರುವ ಟ್ರೈಲರ್ ಚಿತ್ರಕ್ಕೆ ಸರಿಯಾದ ಟೋನ್ ಅನ್ನು ಹೊಂದಿಸಿದೆ. ಚಿತ್ರ ಜನವರಿ 26 ರಂದು ತೆರೆಗೆ ಬರಲಿದೆ.
ಇದನ್ನೂ ಓದಿ: ದರ್ಶನ್- ರಚಿತಾ ರಾಮ್ ಕೆಮಿಸ್ಟ್ರಿ ವರ್ಕೌಟ್; 'ಕ್ರಾಂತಿ' ಸಿನಿಮಾದ ಎರಡನೇ ಹಾಡು 'ಬೊಂಬೆ ಬೊಂಬೆ' ಟ್ರೆಂಡಿಂಗ್
ನಾಯಕಿ ರಚಿತಾ ರಾಮ್, ನಿಮಿಕಾ ರತ್ನಾಕರ್, ಸಂಯುಕ್ತ ಹೊರನಾಡ್ ಮತ್ತು ವೈನಿಧಿ ಜಗದೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಇಡೀ ಚಿತ್ರತಂಡವು ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.
ಸಮಾರಂಭದಲ್ಲಿ ನಟಿ, ರಾಜಕಾರಣಿ ಸುಮಲತಾ ಅಂಬರೀಶ್ ಅವರು ಉಪಸ್ಥಿತರಿದ್ದರು. 'ನಾನು ಚಿತ್ರರಂಗದಲ್ಲಿ 44 ವರ್ಷಗಳನ್ನು ಪೂರೈಸುತ್ತಿದ್ದೇನೆ. ಕ್ರಾಂತಿಯಲ್ಲಿ ನನ್ನದು ಚಿಕ್ಕ, ಆದರೆ ಮಹತ್ವದ ಪಾತ್ರ ಎಂದರು. ಮುಂಬರುವ ವರ್ಷದಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿ 60 ವರ್ಷ ಪೂರೈಸಲಿರುವ ಮತ್ತೋರ್ವ ಹಿರಿಯ ನಟಿ ಗಿರಿಜಾ ಲೋಕೇಶ್, 'ಸಕ್ಸಸ್ ಪಾರ್ಟಿಗೆ ಸಜ್ಜಾಗುತ್ತಿದ್ದು, ಜನಪ್ರಿಯ 'ಪುಷ್ಪಾವತಿ' ಹಾಡಿಗೆ ಕುಣಿಯಲು ಕಾಯುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: 'ಕ್ರಾಂತಿ' ಸಿನಿಮಾದ ಚೊಚ್ಚಲ ಸಾಂಗ್ ರಿಲೀಸ್ ಮಾಡಲಿದ್ದಾರೆ ನನ್ನ 'ಸೆಲೆಬ್ರಿಟಿಗಳು': ನಟ ದರ್ಶನ್
ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರ ನಿರ್ದೇಶನದಲ್ಲಿ ಮತ್ತು ಶೈಲಜಾ ನಾಗ್ ಮತ್ತು ಬಿ ಸುರೇಶ ಅವರ ಮೀಡಿಯಾ ಹೌಸ್ ಸ್ಟುಡಿಯೋಸ್ ಅಡಿ ನಿರ್ಮಾಣಗೊಂಡಿರುವ ಕ್ರಾಂತಿ ಸಿನಿಮಾಗೆ ಕರುಣಾಕರ್ ಅವರ ಛಾಯಾಗ್ರಹಣವಿದೆ.