28ನೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್: ಆರ್ ಆರ್ ಆರ್ ಚಿತ್ರಕ್ಕೆ ಅತ್ಯುತ್ತಮ ವಿದೇಶಿ ಭಾಷೆ, ಅತ್ಯುತ್ತಮ ಗೀತೆ ಪ್ರಶಸ್ತಿ
ವಾಷಿಂಗ್ಟನ್: ಭಾರತಕ್ಕೆ ಮತ್ತೊಮ್ಮೆ ಎಸ್ ಎಸ್ ರಾಜಮೌಳಿ ಹೆಮ್ಮೆ ತಂದಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ(S S Rajamauli)ಯವರ RRR ಸಿನಿಮಾ ಪ್ರಶಸ್ತಿ ಬೇಟೆಯನ್ನು ಮುಂದುವರಿಸಿದೆ.
ಕಳೆದ ವಾರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನದಲ್ಲಿ ನಾಟು...ನಾಟು ಗೀತೆಗೆ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ಬಂದಿತ್ತು. ಇದೀಗ ಆರ್ ಆರ್ ಆರ್ ಅತ್ಯುತ್ತಮ ವಿದೇಶಿ ಭಾಷೆಯ ಚಿತ್ರ ವಿಭಾಗದಲ್ಲಿ 28ನೇ ವಿಮರ್ಶಕರ ಆಯ್ಕೆ ಪ್ರಶಸ್ತಿಯನ್ನು ಗೆದ್ದಿದೆ. (Best critic award)
ಕಳೆದ ರಾತ್ರಿ ಲಾಸ್ ಏಂಜಲೀಸ್ ನಲ್ಲಿ ನಡೆದ ವಿಮರ್ಶಕರ ಆಯ್ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಚಲನಚಿತ್ರವು "ನಾಟು ನಾಟು" ಎಂಬ ಅತ್ಯುತ್ತಮ ಮೂಲ ಗೀತೆಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿತು, ಅಲ್ಲದೆ ವಿದೇಶಿ ಭಾಷೆಯ ಅತ್ಯುತ್ತಮ ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಿರ್ದೇಶಕ S. S. ರಾಜಮೌಳಿ, ''ನನ್ನ ಜೀವನದಲ್ಲಿ ಮಹಿಳೆಯರಿಗೆ" ಧನ್ಯವಾದ ಹೇಳುತ್ತೇನೆ. ಅದು ತಾಯಿಯಿಂದ ಪ್ರಾರಂಭಿಸಿ ನನ್ನ ಪತ್ನಿಯವರೆಗೆ ಮುಂದುವರಿದಿದೆ.
ಶಾಲಾ ಶಿಕ್ಷಣ ಮಕ್ಕಳಿಗೆ ನಿಲುಕದ್ದು ಎಂದು ನನ್ನ ತಾಯಿ ಹೇಳುತ್ತಿದ್ದಳು, ತಾಯಿ ನನ್ನನ್ನು ಕಾಮಿಕ್ಸ್ ಬುಕ್ ಓದುವಂತೆ, ಕಥೆ ಪುಸ್ತಕ ಓದುವಂತೆ ಪ್ರೋತ್ಸಾಹಿಸುತ್ತಿದ್ದಳು. ನನ್ನ ಸ್ವಂತಿಕೆಯನ್ನು ಆಕೆ ಉತ್ತೇಜಿಸುತ್ತಿದ್ದಳು ಎಂದ ರಾಜಮೌಳಿ ನಂತರ ತಮ್ಮ ಪತ್ನಿ ಕಾಸ್ಟ್ಯೂಮ್ ಡಿಸೈನರ್ ರಮಾ ರಾಜಮೌಳಿಗೆ ಧನ್ಯವಾದ ಹೇಳಲು ಮರೆಯಲಿಲ್ಲ. ಬಟ್ಟೆ ಡಿಸೈನರ್ ಗಿಂತ ಹೆಚ್ಚಾಗಿ ಆಕೆ ನನ್ನ ಜೀವನದ ಡಿಸೈನರ್ ಎಂದರು.
ವಿಮರ್ಶಕರ ಆಯ್ಕೆ ಪ್ರಶಸ್ತಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಎಸ್‌ಎಸ್ ರಾಜಮೌಳಿ ಸಮಾರಂಭದಲ್ಲಿ ಗೌರವದೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಟ್ರೋಫಿಯೊಂದಿಗೆ ರಾಜಮೌಳಿ ಶಟರ್‌ಬಗ್‌ಗಳಿಗೆ ಪೋಸ್ ನೀಡುತ್ತಿರುವುದನ್ನು ತೋರಿಸಲಾಗಿದೆ. "ಅರ್ಹವಾದ ಗೆಲುವಿಗೆ ಹ್ಯಾಂಡಲ್ ಚೀರ್ಸ್ ಎಂದು ಬರೆಯಲಾಗಿದೆ.
ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಜೊತೆಗೆ, ಆರ್‌ಆರ್‌ಆರ್‌ನಲ್ಲಿ ಶ್ರಿಯಾ ಶರಣ್, ಸಮುದ್ರಕನಿ, ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಒಲಿವಿಯಾ ಮೋರಿಸ್ ಸಹ ನಟಿಸಿದ್ದಾರೆ ಮತ್ತು ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಅವರು ಅತಿಥಿ ಪಾತ್ರಗಳಲ್ಲಿದ್ದಾರೆ.
ಆರ್ ಆರ್ ಆರ್ ಸಿನೆಮಾ ಕಥೆ ಇಬ್ಬರು ನೈಜ-ಜೀವನದ ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಕಾಲ್ಪನಿಕ ಸ್ನೇಹ ಮತ್ತು ಬ್ರಿಟಿಷ್ ರಾಜ್ ವಿರುದ್ಧದ ಹೋರಾಟವನ್ನು ಕೇಂದ್ರೀಕರಿಸುತ್ತದೆ. 1920 ರ ದಶಕದಲ್ಲಿನ ಕಥಾವಸ್ತುವನ್ನು ತೆರೆಯ ಮೇಲೆ ತೋರಿಸಲಾಗಿದೆ.
'ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್', 'ಅರ್ಜೆಂಟೀನಾ 1985', 'ಬಾರ್ಡೋ', 'ಫಾಲ್ಸ್ ಕ್ರಾನಿಕಲ್ ಆಫ್ ಎ ಹ್ಯಾಂಡ್‌ಫುಲ್ ಆಫ್ ಟ್ರೂತ್ಸ್', 'ಕ್ಲೋಸ್' ಮತ್ತು 'ಡಿಸಿಷನ್ ಟು ಲೀವ್' ಮುಂತಾದ ಚಿತ್ರಗಳ ವಿರುದ್ಧ 'ಆರ್‌ಆರ್‌ಆರ್' ಸ್ಪರ್ಧಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ