ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೆಲ ಅವರು ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ಮುದ್ದಾದ ಮುಗುವಿಗೆ ಇಂದು (ಜೂನ್ 30) ನಾಮಕರಣ ಮಾಡಲಾಗಿದೆ. ಕ್ಲಿಂಕಾರಾ ಕೊನಿಡೆಲಾ ಎಂದು ಹೆಸರು ಇಡಲಾಗಿದೆ. ಈ ಖುಷಿಯ ನಡುವೆ ಇನ್ನೊಂದು ಸುದ್ದಿ ಹರಿದಾಡುತ್ತಿದೆ.
ರಾಮ್ ಚರಣ್-ಉಪಾಸನಾ ಅವರ ಮಗಳಿಗೆ ಚಿನ್ನದ ತೊಟ್ಟಿಲು ಉಡುಗೊರೆಯಾಗಿ ಬಂದಿದೆ, ಮುಖೇಶ್ ಅಂಬಾನಿ ನೀಡಿರುವ ಆ ಚಿನ್ನದ ತೊಟ್ಟಿಲಿನ ಬೆಲೆ 1 ಕೋಟಿ ರೂಪಾಯಿ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಚಿರಂಜೀವಿ ಮೊಮ್ಮಗಳ ನಾಮಕರಣ ಶಾಸ್ತ್ರವನ್ನು ಅದ್ದೂರಿಯಾಗಿ ನೆರವೇರಿಸಲಾಗಿದೆ. ಆ ಸಂಭ್ರಮದ ಕ್ಷಣಗಳ ಫೋಟೋಗಳು ವೈರಲ್ ಆಗಿವೆ. ರಾಮ್ ಚರಣ್ ಹಾಗೂ ಉಪಾಸನಾ ಅವರು ಶಾಸ್ತೋಸ್ತ್ರವಾಗಿ ಬಿಳಿ ಬಣ್ಣದ ಬಟ್ಟೆಯನ್ನೇ ತೊಟ್ಟಿಲಿನ ಮಾದರಿಯಲ್ಲಿ ಎರಡು ಕಂಬಕ್ಕೆ ಕಟ್ಟಿ ಮಗುವನ್ನು ಅದರಲ್ಲಿ ಮಲಗಿಸಿ ಶಾಸ್ತ್ರ ಮಾಡಿದ್ದಾರೆ.
ಆದರೆ ಮುಖೇಶ್ ಅಂಬಾನಿ ನೀಡಿದ್ದಾರೆ ಎನ್ನಲಾದ ಬಂಗಾರದ ಬಣ್ಣದ ತೊಟ್ಟಿಲಿನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಚಿನ್ನದ ತೊಟ್ಟಿಲಿನ ಬೆಲೆ ಬರೋಬ್ಬರಿ 1 ಕೋಟಿ ರೂಪಾಯಿ ಎನ್ನಲಾಗಿದೆ.
Advertisement