'ಅಲಾ ವೈಕುಂಠಪುರಮುಲೊ' ಖ್ಯಾತಿಯ ನಿರ್ದೇಶಕ ತ್ರಿವಿಕ್ರಮ್ ಜೊತೆ ಅಲ್ಲು ಅರ್ಜುನ್ ನಾಲ್ಕನೇ ಸಿನಿಮಾ!
ಹೈದರಾಬಾದ್: ನಟ ಅಲ್ಲು ಅರ್ಜುನ್ ಮತ್ತು ಚಲನಚಿತ್ರ ನಿರ್ದೇಶಕ ತ್ರಿವಿಕ್ರಮ್ ತಮ್ಮ ನಾಲ್ಕನೇ ಸಿನಿಮಾಗಾಗಿ ಒಟ್ಟಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂದು ಚಿತ್ರತಂಡ ಸೋಮವಾರ ಘೋಷಿಸಿದೆ.
ಸದ್ಯ ಹೆಸರಿಸದ ಸಿನಿಮಾವನ್ನು ಗೀತಾ ಆರ್ಟ್ಸ್ ಮತ್ತು ಹರಿಕಾ & ಹಾಸನ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಕ್ರಮವಾಗಿ ಅಲ್ಲು ಅರವಿಂದ್ ಮತ್ತು ಎಸ್ ರಾಧಾ ಕೃಷ್ಣ ನಿರ್ಮಿಸುತ್ತಿದ್ದಾರೆ.
ಗೀತಾ ಆರ್ಟ್ಸ್ ತನ್ನ ಅಧಿಕೃತ ಟ್ವಿಟ್ಟರ್ ಪೇಜ್‌ನಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಿದೆ.
'ದಿ ಡೈನಾಮಿಕ್ ಜೋಡಿ ಹಿಂತಿರುಗಿದೆ! ಐಕಾನ್ ಸ್ಟಾರ್ ಅಲ್ಲುಅರ್ಜುನ್ ಮತ್ತು ಬ್ಲಾಕ್‌ಬಸ್ಟರ್ ನಿರ್ದೇಶಕ ತ್ರಿವಿಕ್ರಮ್ ತಮ್ಮ 4ನೇ ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ! ಹೆಚ್ಚಿನ ವಿವರಗಳು ಶೀಘ್ರದಲ್ಲೇ!' ಎಂದು ಬ್ಯಾನರ್ ಟ್ವೀಟ್‌ನಲ್ಲಿ ತಿಳಿಸಿದೆ.
ಅರ್ಜುನ್ ಮತ್ತು ತ್ರಿವಿಕ್ರಮ್ ಮೊದಲು 2012 ರಲ್ಲಿ 'ಜುಲಾಯಿ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ನಂತರ, 2015 ರಲ್ಲಿ 'S/O ಸತ್ಯಮೂರ್ತಿ' ಮತ್ತು 'ಆಲ ವೈಕುಂಠಪುರಮುಲೊ' (2020) ಸಿನಿಮಾದಲ್ಲಿ ಕೆಲಸ ಮಾಡಿದರು.
ಈ ಜೋಡಿಯ ನಾಲ್ಕನೇ ಚಿತ್ರವು ದೃಶ್ಯ ಚಮತ್ಕಾರವನ್ನು ಹೊಂದಿರುತ್ತದೆ ಎಂದು ಚಿತ್ರತಂಡ ಹೇಳಿದೆ.
ಅಲ್ಲು ಅರ್ಜುನ್ ಮುಂಬರುವ 'ಪುಷ್ಪ: ದಿ ರೂಲ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ 2021ರ ಚಲನಚಿತ್ರ 'ಪುಷ್ಪ: ದಿ ರೈಸ್' ಸಿನಿಮಾದ ಬಹುನಿರೀಕ್ಷಿತ ಸೀಕ್ವೆಲ್ ಆಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ