ಜುಲೈ 21ಕ್ಕೆ ‘ದೇವರ ಕನಸು’ ಚಿತ್ರ ತೆರೆಗೆ

ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್ ಸೇರಿದಂತೆ ಮೂವತ್ತಕ್ಕೂ ಅಧಿಕ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿರುವ 'ದೇವರ ಮಕ್ಕಳು' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ದೇವರ ಕನಸು ಚಿತ್ರತಂಡದೊಂದಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್.
ದೇವರ ಕನಸು ಚಿತ್ರತಂಡದೊಂದಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್.
Updated on

ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್ ಸೇರಿದಂತೆ ಮೂವತ್ತಕ್ಕೂ ಅಧಿಕ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿರುವ 'ದೇವರ ಮಕ್ಕಳು' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಸುರೇಶ್ ಲಕ್ಕೂರ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ದೇವರ ಕನಸು' ಚಿತ್ರ ಜುಲೈ.21ಕ್ಕೆ ತೆರೆಗೆ ಬರಲು ಸಜ್ಜಾಗಿದೆ.

 ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಚಿತ್ರದ ಟ್ರೈಲರ್ ನ್ನು ಬಿಡುಗಡೆ ಮಾಡಿದರು.

ಪ್ರತಿಭಾವಂತ ಬಾಲ ಕಲಾವಿದರಾದ ದೀಪಕ್ ಮತ್ತು ಅಮೂಲ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು, ಹಳ್ಳಿಯ ಹುಡುಗನ ಮುಗ್ಧತೆ ಮತ್ತು ಜೀವನೋಪಾಯಕ್ಕಾಗಿ ಅವನ ಹೋರಾಟಗಳು, ಸ್ವಚ್ಛ ಭಾರತ, ಮಹಿಳಾ ಸಬಲೀಕರಣ ಮತ್ತು ಮದ್ಯದ ದುರುಪಯೋಗದ ಸಮಸ್ಯೆಗಳನ್ನು ಚಿತ್ರದಲ್ಲಿ ಹೈಲೈಟ್ ಮಾಡಲಾಗಿದೆ. ಅಲ್ಲದೆ, ಚಿತ್ರದಲ್ಲಿ ಸಂಸ್ಕೃತಿ ಮತ್ತು ಗ್ರಾಮೀಣ ಜೀವನದ ಸಾರವನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.

ಚಿತ್ರದಲ್ಲಿ ಯುವರಾಜ್ ಕಿಣಿ, ಅರುಷಿ ವೇದಿಕಾ, ಮಣಿ, ರೂಪ ಮತ್ತು ವಿಜಯ್ ರಾಕೇಶ್ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜಯ್ ಕುಮಾರ್ ಮತ್ತು ಶೇಖರ್ ಅವರು ‘ದೇವರ ಕನಸು’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುನೀಲ್ ರಾಮ್ ಅವರು ಕಥೆ ಬರೆದಿದ್ದು, ಹಾಡುಗಳು ಹಾಗೂ ಸಂಭಾಷಣೆಯನ್ನು ಲಿಂಗರಾಜ್ ಇತಿಹಾಸ್​ ಬರೆದಿದ್ದಾರೆ. ಸ್ಯಾಂಡಿ ಸಂಗೀತ ನಿರ್ದೇಶನ, ಜಿಷ್ಣು ಸೇನ್​ ಅವರ ಸಂಕಲನ ಈ ಸಿನಿಮಾಗಿದೆ. ಛಾಯಾಗ್ರಹಣವನ್ನು ರತ್ನಜಿತ್ ರಾಯ್ ನಿರ್ವಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com