ಖ್ಯಾತ ನಟರಿಂದಲೂ ಕೇರಳ ಸ್ಟೋರಿ ಯಶಸ್ಸು ತಡೆಯಲಾಗಲಿಲ್ಲ: ಸ್ಟಾರ್ ಹೀರೋಗಳಿಗೆ ತಿವಿದ ಆದಾ ಶರ್ಮಾ!

ದಿ ಕೇರಳ ಸ್ಟೋರಿ’ ಸಿನಿಮಾ ವಿರೋಧಿಸಿ ಮಾತನಾಡಿದ್ದ ಕಮಲ್ ಹಾಸನ್, ನಾಸಿರುದ್ದೀನ್ ಶಾ ಸೇರಿದಂತೆ ಹಲವರಿಗೆ ತಮ್ಮ ಮಾತಿನಲ್ಲೇ ಏಟು ನೀಡಿದ್ದಾರೆ ಅದಾ. ‘ನಮ್ಮ ಸಿನಿಮಾದ ಓಟವನ್ನು ಕಟ್ಟಿ ಹಾಕಲು ಕೆಲವು ನಟರು ಪ್ರಯತ್ನಪಟ್ಟರು. ಆದರೆ, ಅದು ಆಗಲಿಲ್ಲ. ಯಾರ ಸಾಮರ್ಥ್ಯ ಏನು ಅಂತ ಗೊತ್ತಾಗಿದೆ.
ಆದಾ ಶರ್ಮಾ, ಕಮಲ್ ಹಾಸನ್ ಮತ್ತು ನಾಸಿರುದ್ದೀನ್ ಶಾ
ಆದಾ ಶರ್ಮಾ, ಕಮಲ್ ಹಾಸನ್ ಮತ್ತು ನಾಸಿರುದ್ದೀನ್ ಶಾ

ದಿ ಕೇರಳ ಸ್ಟೋರಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಕಡಿಮೆ ಬಜೆಟ್ ನಲ್ಲಿ ಬಂದ ದಿ ಕೇರಳ ಸ್ಟೋರಿ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿದೆ.

ಭಾರೀ ವಿವಾದ, ಬ್ಯಾನ್, ಟೀಕೆಗಳ ನಡುವೆಯೂ ಕೇರಳ ಸ್ಟೋರಿ ಸಿನಿಮಾ ಗೆದ್ದು ಬೀಗಿದೆ. ಸಿನಿಮಾದ ವಿರುದ್ಧ ಅನೇಕರು ಆಕ್ರೋಶ ಹೊರ ಹಾಕಿದ್ದರು. ಪ್ರೇಕ್ಷಕರು ಮಾತ್ರವಲ್ಲದೇ ದೊಡ್ಡ ದೊಡ್ಡ ಸ್ಟಾರ್ಸ್ ಕೂಡ ಕೇರಳ ಸ್ಟೋರಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ನಟಿ ಅದಾ ಶರ್ಮಾ ಈಗ ಪ್ರತಿಕ್ರಿಯೆ ನೀಡಿದ್ದಾರೆ.

'ದಿ ಕೇರಳ ಸ್ಟೋರಿ’ ಸಿನಿಮಾ ವಿರೋಧಿಸಿ ಮಾತನಾಡಿದ್ದ ಕಮಲ್ ಹಾಸನ್, ನಾಸಿರುದ್ದೀನ್ ಶಾ ಸೇರಿದಂತೆ ಹಲವರಿಗೆ ತಮ್ಮ ಮಾತಿನಲ್ಲೇ ಏಟು ನೀಡಿದ್ದಾರೆ ಅದಾ. ‘ನಮ್ಮ ಸಿನಿಮಾದ ಓಟವನ್ನು ಕಟ್ಟಿ ಹಾಕಲು ಕೆಲವು ನಟರು ಪ್ರಯತ್ನಪಟ್ಟರು. ಆದರೆ, ಅದು ಆಗಲಿಲ್ಲ. ಯಾರ ಸಾಮರ್ಥ್ಯ ಏನು ಅಂತ ಗೊತ್ತಾಗಿದೆ’ ಎಂದು ಮಾತನಾಡಿದ್ದಾರೆ.

ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅದಾ ಪ್ರತಿಕ್ರಿಯೆ ನೀಡಿದ್ದಾರೆ. ಕಮಲ್ ಹಾಸನ್ ಮತ್ತು ನಾಸಿರುದ್ದೀನ್ ಶಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 'ನಮ್ಮ ದೇಶದಲ್ಲಿ ನಾವು ಹೊಂದಿರುವ ವಾಕ್ ಸ್ವಾತಂತ್ರ್ಯದ ಬಗ್ಗೆ ತುಂಬಾ ಸಂತೋಷಪಟ್ಟಿದ್ದೇನೆ. ಚಲನಚಿತ್ರವನ್ನು ನೋಡದೆ ಅದನ್ನು ಅಪಖ್ಯಾತಿಗೊಳಿಸಬಹುದು, ಲೇಬಲ್ ಮಾಡಬಹುದು ಮತ್ತು ಸಾರ್ವಜನಿಕವಾಗಿ ಕಿತ್ತುಹಾಕಬಹುದು ಎಂದಿದ್ದಾರೆ.

ಅಬುಧಾಬಿಯಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ಕಮಲ್ ಹಾಸನ್,  ಈ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ‘ನಾನು ದಿ ಕೇರಳ ಸ್ಟೋರಿ ಸಿನಿಮಾವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕಾಗಿ ನನ್ನನ್ನೂ ವಿರೋಧಿಸಿದ್ದಾರೆ. ಸಿನಿಮಾದಲ್ಲಿ ಸತ್ಯ ಘಟನೆ ಆಧರಿಸಿದ ಸಿನಿಮಾ ಎಂದು ಹೇಳಿದರೆ ಸಾಲದು. ಅದರಲ್ಲಿ ಸತ್ಯ ಇರಬೇಕು’ ಎಂದು ಪ್ರತಿಕ್ರಿಯಿಸಿದ್ದರು.

ಕೇರಳ ಸ್ಟೋರಿ ಚಿತ್ರದ ಯಶಸ್ಸನ್ನು ಅಪಾಯಕಾರಿ ಟ್ರೆಂಡ್‌ ಎಂದು ನಾಸಿರುದ್ದೀನ್‌ ಶಾ ಎಂದಿದ್ದರು. ಅದಲ್ಲದೆ, ಈ ಟ್ರೆಂಡ್‌ ಅನ್ನು ನಾಜಿ ಜರ್ಮನಿಗೆ ಅವರು ಹೋಲಿಕೆ ಮಾಡಿದ್ದರು. 'ಒಂದು ಹಂತದಲ್ಲಿ ಇದು ಅಪಾಯಕಾರಿ ಟ್ರೆಂಡ್‌. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅದರೊಂದಿಗೆ ನಾವು ಹಿಟ್ಲರ್‌ ಇದ್ದ ಸಮಯದ ನಾಜಿ ಜರ್ಮನಿಯ ರೀತಿ ಸಾಗುತ್ತಿದ್ದೇವೆ ಎಂದು ನಾಸಿರುದ್ದಿನ್ ಶಾ ಟೀಕಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com