'ಗಂಟುಮೂಟೆ' ಹೀರೊ ನಿಶ್ಚಿತ್ ಕೊರೋಡಿ ನಟನೆಯ 'ಸಪ್ಲೈಯರ್ ಶಂಕರ' ಚಿತ್ರೀಕರಣ ಪೂರ್ಣ

ಗಂಟುಮೂಟೆ, ಟಾಮ್ ಅಂಡ್ ಜೆರ್ರಿ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ನಟ ನಿಶ್ಚಿತ್ ಕೊರೋಡಿ ಇದೀಗ ‘Supplier ಶಂಕರ’ ಮೂಲಕ ಮೂರನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರಂಜಿತ್ ಸಿಂಗ್ ರಜಪೂತ್ ನಿರ್ದೇಶಿಸಿದ್ದು, ಕಥೆ ಬರೆದಿದ್ದಾರೆ. ಈ ಸಿನಿಮಾದ ಚಿತ್ರೀಕರಣವು ಇತ್ತೀಚೆಗೆ ಪೂರ್ಣಗೊಂಡಿದೆ.
ನಿಶ್ಚಿತ್ ಕೊರೋಡಿ

ತ್ರಿನೇತ್ರ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ಎಂ ಚಂದ್ರಶೇಖರ್ ಮತ್ತು ನಾಗೇಂದ್ರ ಸಿಂಗ್ ನಿರ್ಮಿಸಿರುವ 'Supplier ಶಂಕರ' ಸಿನಿಮಾವನ್ನು ಬಾರ್ ಸಪ್ಲೈಯರ್‌ನ ಜೀವನವನ್ನು ಕೇಂದ್ರೀಕರಿಸಿದ ಆಕ್ಷನ್ ಡ್ರಾಮಾ ಎಂದು ಬಿಂಬಿಸಲಾಗಿದೆ.

ಲಗೋರಿ ಖ್ಯಾತಿಯ ದೀಪಿಕಾ ಆರಾಧ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ಗೋಪಾಲ್ ಕೃಷ್ಣ ದೇಶಪಾಂಡೆ, ಜ್ಯೋತಿ ರೈ, ನವೀನ್ ಡಿ ಪಡೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Supplier ಶಂಕರ ಚಿತ್ರಕ್ಕೆ ಆರ್ ಬಿ ಭರತ್ ಸಂಗೀತ ಸಂಯೋಜಿಸಿದ್ದರೆ, ಸತೀಶ್ ಕುಮಾರ್ ಇ ಅವರ ಛಾಯಾಗ್ರಹಣ, ಬಾಲಾಜಿ ಕಲಾ ಅವರ ಕಲಾ ನಿರ್ದೇಶನವಿದೆ. ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲೇ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com