ಕಿಚ್ಚ ಸುದೀಪ್ ಸೋದರಳಿಯನ ಸಿನಿಮಾ ಟೈಟಲ್ ಫಿಕ್ಸ್: ಸಂಚಿತ್ ಚಿತ್ರಕ್ಕೆ ಶೀರ್ಷಿಕೆ ಕೊಟ್ಟವರು ಯಾರು ಗೊತ್ತೆ?

ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್  ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರವನ್ನು ಸಂಚಿತ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಹೀರೋ ಇಂಟ್ರೋಡಕ್ಷನ್ ಟೀಸರ್ ರಿಲೀಸ್ ಮಾಡಲಾಗಿದೆ.
ಸಂಚಿತ್ ಚಿತ್ರಕ್ಕೆ ಟೈಟಲ್ ಫಿಕ್ಸ್
ಸಂಚಿತ್ ಚಿತ್ರಕ್ಕೆ ಟೈಟಲ್ ಫಿಕ್ಸ್
Updated on

ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್  ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರವನ್ನು ಸಂಚಿತ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಹೀರೋ ಇಂಟ್ರೋಡಕ್ಷನ್ ಟೀಸರ್ ರಿಲೀಸ್ ಮಾಡಲಾಗಿದೆ.

ಅವರ ಮೊದಲ ಚಿತ್ರಕ್ಕೆ ‘ಜಿಮ್ಮಿ’ ಎಂದು ಟೈಟಲ್ ಇಡಲಾಗಿದೆ.  ‘ಜಿಮ್ಮಿ’ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಸಿನಿಮಾದ ಟೈಟಲ್ ಅನೇಕರಿಗೆ ಇಷ್ಟವಾಗಿದೆ. ಈ ಟೈಟಲ್ ನೀಡಿದ್ದು ಯಾರು ಎನ್ನುವ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದ್ದಾರೆ. ಆ ವ್ಯಕ್ತಿಯನ್ನು ಹಾಡಿ ಹೊಗಳಿದ್ದಾರೆ ಸುದೀಪ್.

‘ಜಿಮ್ಮಿ’ ಟೈಟಲ್ ನೀಡಿದ್ದು ಅನೂಪ್ ಬಂಡಾರಿ. ‘ರಂಗಿ ತರಂಗ’ ಸಿನಿಮಾ ಮೂಲಕ ಅನೂಪ್ ಖ್ಯಾತಿ ಹೆಚ್ಚಿಸಿಕೊಂಡರು. ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರವನ್ನು ಅನೂಪ್ ಬಂಡಾರಿ ನಿರ್ದೇಶನ ಮಾಡಿದ್ದರು. ಅನೂಪ್ ಬಗ್ಗೆ ಸುದೀಪ್​ಗೆ ವಿಶೇಷ ಗೌರವ ಹಾಗೂ ಪ್ರೀತಿ. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಟೈಟಲ್ ನೀಡಿದ್ದಕ್ಕೆ ಥ್ಯಾಂಕ್ಸ್​ ಎಂದಿದ್ದಾರೆ ಸುದೀಪ್​.

ಜಿಮ್ಮಿ ಟೈಟಲ್ ಸಿಗೋಕೆ ಕಾರಣ ಅನೂಪ್ ಬಂಡಾರಿ. ನನಗೆ ಅನೂಪ್ ಮೇಲೆ ಅಪಾರ ಪ್ರೀತಿ, ಗೌರವ ಇದೆ ಎಂದರು. ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಅಳಿಯನಿಗೆ ನಟ ಕಿಚ್ಚ ಸುದೀಪ್  ಕಿವಿಮಾತು ಹೇಳಿದ್ದಾರೆ. ಹಿರಿಯರು ನಡೆಸಿಕೊಂಡು ಬಂದ ದೊಡ್ಡ ಕೋಟೆ ಸ್ಯಾಂಡಲ್‍ವುಡ್ ಅದಕ್ಕೆ ನೀವು ಕಾಲಿಡುತ್ತಿದ್ದೀರಿ. ಬೆಳೆಸಲಾಗದಿದ್ರೂ ಕಾಪಾಡಿಕೊಂಡು ಹೋಗಿ ಎಂದು ಅಳಿಯ ಸಂಚಿತ್‌ಗೆ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com