ಸ್ಯಾಂಡಲ್‌ವುಡ್‌ನಲ್ಲಿ ನನಗೊಂದು ದೊಡ್ಡ ಬ್ರೇಕ್‌ ಬೇಕಿದೆ: ಶ್ರುತಿ ಪ್ರಕಾಶ್

ಬಿಗ್ ಬಾಸ್ ಕನ್ನಡ ಸೀಸನ್ 5 ನಲ್ಲಿ ಕಾಣಿಸಿಕೊಂಡ ನಂತರ, ಕನ್ನಡ ಚಲನಚಿತ್ರಗಳಲ್ಲಿ ಬ್ಯುಸಿಯಾದ ನಟಿ ಶ್ರುತಿ ಪ್ರಕಾಶ್, ಇಲ್ಲಿಯವರೆಗೆ ಸುಮಾರು ಆರು ಸಿನಿಮಾಗಳನ್ನು  ಮಾಡಿದ್ದಾರೆ. ಆದರೆ, ಅವರು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಬ್ರೇಕ್ ಪಡೆಯಲು ಇನ್ನೂ ಕಾಯುತ್ತಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.
ಬಿಗ್ ಬಾಸ್ ಕನ್ನಡ ಸೀಸನ್ 5 ರ ಸ್ಪರ್ಧಿ ಶ್ರುತಿ ಪ್ರಕಾಶ್ (ಫೋಟೋ | ಶ್ರುತಿ ಪ್ರಕಾಶ್ Instagram)
ಬಿಗ್ ಬಾಸ್ ಕನ್ನಡ ಸೀಸನ್ 5 ರ ಸ್ಪರ್ಧಿ ಶ್ರುತಿ ಪ್ರಕಾಶ್ (ಫೋಟೋ | ಶ್ರುತಿ ಪ್ರಕಾಶ್ Instagram)

ಬಿಗ್ ಬಾಸ್ ಕನ್ನಡ ಸೀಸನ್ 5 ನಲ್ಲಿ ಕಾಣಿಸಿಕೊಂಡ ನಂತರ, ಕನ್ನಡ ಚಲನಚಿತ್ರಗಳಲ್ಲಿ ಬ್ಯುಸಿಯಾದ ನಟಿ ಶ್ರುತಿ ಪ್ರಕಾಶ್, ಇಲ್ಲಿಯವರೆಗೆ ಸುಮಾರು ಆರು ಸಿನಿಮಾಗಳನ್ನು  ಮಾಡಿದ್ದಾರೆ. ಆದರೆ, ಅವರು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಬ್ರೇಕ್ ಪಡೆಯಲು ಇನ್ನೂ ಕಾಯುತ್ತಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.

ಹಿಂದಿಯಲ್ಲಿ ಎರಡು ಶೋಗಳ ನಂತರ ರಿಯಾಲಿಟಿ ಶೋ ನನಗೆ ಸಿಕ್ಕಿತು ಮತ್ತು ಈ ವೇದಿಕೆಯು ನನ್ನನ್ನು ಶೃತಿ ಪ್ರಕಾಶ್ ಎಂದು ಪರಿಚಯಿಸಿತು. ಆದರೆ, ಯಾವುದೇ ಚಲನಚಿತ್ರದ ಪಾತ್ರದ ಮೂಲಕ ಅಲ್ಲ, ಅದುವೇ ನನಗೆ ಅನುಕೂಲ ಎಂದು ನಾನು ಭಾವಿಸಿದೆ. ನಂತರ ನಾನೀಗ ಯಾವೆಲ್ಲಾ ಸಿನಿಮಾಗಳಲ್ಲಿ (ಮುಂಬರುವ ವಿಜಯ್ ರಾಘವೇಂದ್ರ ಅವರೊಂದಿಗೆ ಗ್ರೇ ಗೇಮ್ಸ್ ಹೊರತುಪಡಿಸಿ) ತೊಡಗಿಕೊಂಡಿದ್ದೇನೋ, ಅವುಗಳಲ್ಲಿ ನಾನು ಹೊಸ ನಿರ್ಮಾಣ ಸಂಸ್ಥೆಗಳ ಭಾಗವಾಗಿದ್ದೇನೆ ಮತ್ತು ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದೇನೆ. ನಾನು ಮನಸ್ಸಿಗೆ ಇಷ್ವವಾದದ್ದನ್ನು ಮತ್ತು ಕಥೆ ಮತ್ತು ಮೇಕಿಂಗ್‌ನಲ್ಲಿ ನನಗಿದ್ದ ನಂಬಿಕೆಯಿಂದ ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ, ನನಗೆ ಇನ್ನೂ ಕೆಲವು ಉತ್ತಮ ಯೋಜನೆಗಳು ಸಿಗಬೇಕಿದೆ ಎನ್ನುತ್ತಾರೆ ಶ್ರುತಿ.

'ನಾನು ಉತ್ತಮ ನಟಿ, ಗಾಯಕಿ ಮತ್ತು ನೃತ್ಯಗಾರ್ತಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇನೆ. ನನ್ನ ಕೆಲಸ ಮಾತನಾಡಬೇಕು ಮತ್ತು ನನ್ನ ಪ್ರತಿಭೆ ಆಯ್ಕೆಯಾಗಬೇಕೆಂದು ನಾನು ಬಯಸುತ್ತೇನೆ. ಎರಡನೆಯದಾಗಿ, ನಾನು ಎಲ್ಲಿ ವಾಸಿಸುತ್ತಿದ್ದೇನೆ ಎಂಬುವುದಕ್ಕಿಂತ, ಬೆಳ್ಳಿತೆರೆಯಲ್ಲಿ ನನ್ನ ಅಭಿನಯ ಹೇಗಿದೆ ಎಂಬುದೇ ಮುಖ್ಯವಾಗಬೇಕು. ನಾನು ವೈವಿಧ್ಯಮಯ ಪಾತ್ರಗಳೊಂದಿಗೆ ಪ್ರೇಕ್ಷಕರ ಹೃದಯವನ್ನು ತಲುಪುತ್ತೇನೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು' ಎನ್ನುತ್ತಾರೆ 'ಕಡಲ ತೀರದ ಭಾರ್ಗವ' ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಶ್ರುತಿ. 

<strong>ಶ್ರುತಿ ಪ್ರಕಾಶ್</strong>
ಶ್ರುತಿ ಪ್ರಕಾಶ್

ಪನ್ನಗ ಸೋಮಶೇಖರ್ ನಿರ್ದೇಶನದ ಚಿತ್ರದ ಬಗ್ಗೆ ಮಾತನಾಡುವ ಶ್ರುತಿ, 'ಇಬ್ಬರು ಹುಡುಗರು ಮತ್ತು ಹುಡುಗಿಯನ್ನು ಒಳಗೊಂಡಿರುವ ಪೋಸ್ಟರ್‌ನಿಂದ ಪ್ರೇಕ್ಷಕರು ಇದು ತ್ರಿಕೋನ ಪ್ರೇಮಕಥೆ ಎಂದು ಭಾವಿಸಿದ್ದರು. ಆದರೆ, ಅದು ಹಾಗಿಲ್ಲ. ನಿರ್ದೇಶಕರು ಮಹಿಳಾ ನಾಯಕಿಗಾಗಿ ಬಲಿಷ್ಟವಾದ ಪಾತ್ರವನ್ನು ಚಿತ್ರಿಸಿದ್ದಾರೆ. ಅವರು ಪರದೆ ಮೇಲೆ ಅಥವಾ ನಿರೂಪಣೆಯ ಭಾಗವಾಗಿ ಚಿತ್ರದ ಉದ್ದಕ್ಕೂ ಇರುತ್ತಾರೆ. ಇದು ಕ್ಲೀಷೆಯ ರೊಮ್ಯಾಂಟಿಕ್ ಡ್ರಾಮಾ ಅಲ್ಲ. ಪ್ರೀತಿ ಚಿತ್ರದ ಭಾಗವಾಗಿದೆ. ಆದರೆ, ಚಿತ್ರವು ಅದರ ಬಗ್ಗೆ ಮಾತ್ರವಲ್ಲ' ಎಂದು ಅವರು ಹೇಳುತ್ತಾರೆ.

ಕಡಲ ತೀರದ ಭಾರ್ಗವ ಚಿತ್ರದಲ್ಲಿ ಅವರ ಇಂಪನಾ ಪಾತ್ರವು ಹಲವು ಪದರಗಳನ್ನು ಹೊಂದಿದೆ. 'ಪ್ರೀತಿ, ಅವಳ ಹೆತ್ತವರು ಮತ್ತು ಚಿಕ್ಕಮ್ಮನ ವಿಷಯದಲ್ಲಿ ಅವಳು ಜೀವನದಲ್ಲಿ ತನ್ನ ಸ್ಥಾನ ಯಾವುದೆಂಬುದನ್ನು ಕಂಡುಕೊಳ್ಳುತ್ತಾಳೆ. ಅವಳು ಅಲ್ಲಿ ಸಂತೋಷವಾಗಿರುತ್ತಾಳೆ ಮತ್ತು ಕೆಲವೊಮ್ಮೆ ಆ ವಲಯದಿಂದ ಹೊರಗುಳಿಯುತ್ತಾಳೆ; ಅವಳು ಕೆಲವೊಮ್ಮೆ ಸಂವೇದನಾಶೀಲಳಾಗಿದ್ದಾಳೆ. ಅವಳು ಹೇಗೆ ಸನ್ನಿವೇಶಗಳನ್ನು ಎದುರಿಸುತ್ತಾಳೆ ಮತ್ತು ಅವಳನ್ನು ವಿಧಿಯೆಡೆಗೆ ಕರೆದೊಯ್ಯುವ ಸಂದರ್ಭಗಳು ಕಥೆಯ ತಿರುಳನ್ನು ರೂಪಿಸುತ್ತವೆ' ಎಂದು ಶ್ರುತಿ ವಿವರಿಸುತ್ತಾರೆ.

ಮತ್ತೊಂದು ಹಿಂದಿ ವೆಬ್ ಸೀರೀಸ್ ಮತ್ತು ಸಿನಿಮಾ ಶ್ರುತಿ ಕೈಲಿದ್ದು, ಪ್ರೊಡಕ್ಷನ್ ಹೌಸ್‌ನಿಂದ ಅಧಿಕೃತ ಪ್ರಕಟಣೆಗಾಗಿ ಕಾಯಲಾಗುತ್ತಿದೆ. ಅಲ್ಲದೆ, ಅವರ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ನಡುವೆ ಉತ್ತಮ ಗಾಯಕಿಯಾಗಿರುವ ಶ್ರುತಿ, ಆ ನಿಟ್ಟಿನಲ್ಲೂ ಕೆಲಸ ಮಾಡುತ್ತಿದ್ದಾರೆ. 'ನಾನು ನನ್ನ ಗಾಯನ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇನೆ ಮತ್ತು ನನ್ನದೇ ಆದ ಬ್ರಾಂಡ್ ಅನ್ನು ರೂಪಿಸುವ ಗುರಿಯನ್ನು ಹೊಂದಿದ್ದೇನೆ. ಅದು 2023 ರ ನನ್ನ ಕಾರ್ಯಸೂಚಿಯಾಗಿದೆ' ಎಂದು ಹೇಳುತ್ತಾರೆ. ಚಿತ್ರದಲ್ಲಿ ಭರತ್ ಜೊತೆಗೆ ಪಟೇಲ್ ವರುಣ್ ರಾಜು ನಾಯಕನಾಗಿ ನಟಿಸಿದ್ದು, ನಿರ್ಮಾಪಕರಾಗಿಯೂ ಬಡ್ತಿ ಪಡೆಯುತ್ತಿದ್ದಾರೆ.

'ಹೊಸಬರಿಗೆ ಹೂಡಿಕೆ ಮಾಡಲು ಯಾರೂ ಮುಂದೆ ಬರಲಿಲ್ಲ. ಅಥವಾ ನಮಗೆ ಬೆಂಬಲಿಸಲು ಉದ್ಯಮದಿಂದ ಯಾರೂ ಇರಲಿಲ್ಲ. ಹಾಗಾಗಿ ನಾಯಕನಾಗಿ ನಟಿಸಿರುವ ಭರತ್ ಜೊತೆಗೆ ನಾನು ಪ್ರಾಜೆಕ್ಟ್ ಅನ್ನು ಬ್ಯಾಂಕ್‌ರೋಲ್ ಮಾಡುವ ರಿಸ್ಕ್ ತೆಗೆದುಕೊಂಡೆ. ಇದಲ್ಲದೆ, ನಮ್ಮ ಸ್ನೇಹಿತ, ಪನ್ನಗನ ಚಿತ್ರಕಥೆ ಮತ್ತು ಅವನ ಮೇಕಿಂಗ್‌ನಲ್ಲಿ ನಮಗೆ ನಂಬಿಕೆ ಇತ್ತು' ಎನ್ನುತ್ತಾರೆ ಪಟೇಲ್ ವರುಣ್ ರಾಜು.

ಕಡಲ ತೀರದ ಭಾರ್ಗವ ಪಾತ್ರಗಳ ಮೂಲಕ ವಿವಿಧ ಭಾವನೆಗಳನ್ನು ನೀಡುತ್ತದೆ. 'ಪನ್ನಗ ಎಲ್ಲಾ ಪಾತ್ರಗಳೊಂದಿಗೆ ವೈಯಕ್ತಿಕ ಸಂಪರ್ಕವನ್ನು ಹೊಂದಿದ್ದಾರೆ. ಭರತ್ ಪಾತ್ರದ ಮೂಲಕ ಅವರು ಭಾವನಾತ್ಮಕ ಅಂಶವನ್ನು ತುಂಬಿದ್ದಾರೆ ಮತ್ತು ಭಾರ್ಗವನಾಗಿ ನಾನು ಆಕ್ರಮಣಶೀಲತೆಯನ್ನು ತರುತ್ತೇನೆ. ಶ್ರುತಿಯ ಪಾತ್ರವು ಪ್ರೀತಿ ಮತ್ತು ಕುಟುಂಬದ ಭಾವನೆಯನ್ನು ತಂದರೆ, ಶ್ರೀಧರ್ ಪಾತ್ರವು ನೋವನ್ನು ತೋರಿಸುತ್ತದೆ ಮತ್ತು ರಾಘವ್ ನಾಗ್ ಅವರ ಪಾತ್ರವು ಅಸೂಯೆಯನ್ನು ತೆಗೆದುಕೊಳ್ಳುತ್ತದೆ. ನಿರ್ದೇಶಕರು ಕಮರ್ಷಿಯಲ್ ಟಚ್‌ನೊಂದಿಗೆ ಕಂಟೆಂಟ್ ಮತ್ತು ಪಾತ್ರಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ' ಎಂದು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com