ವಿಜಯ್-ರಶ್ಮಿಕಾ ಮಂದಣ್ಣ ಅಭಿನಯದ 'ವಾರಿಸು' ಚಿತ್ರದ ಡಿಲಿಟೆಡ್ ದೃಶ್ಯ ಬಿಡುಗಡೆ ಮಾಡಿದ ಪ್ರೈಮ್ ವಿಡಿಯೋ

ಪ್ರೈಮ್ ವಿಡಿಯೋ ವಿಜಯ್ ಅವರ ಇತ್ತೀಚಿನ ಸಿನಿಮಾ 'ವಾರಿಸು'ದಿಂದ ಅಳಿಸಲಾಗಿದ್ದ ದೃಶ್ಯವನ್ನು ಬಿಡುಗಡೆ ಮಾಡಿದೆ. ಈ ಸಿನಿಮಾ ಸದ್ಯ ಪ್ರೈಮ್ ವಿಡಿಯೋ ವೇದಿಕೆಯಲ್ಲಿ ಸ್ಟ್ರೀಮ್ ಆಗುತ್ತಿದೆ.
Actor Vijay
Actor Vijay
Updated on

ಪ್ರೈಮ್ ವಿಡಿಯೋ ವಿಜಯ್ ಅವರ ಇತ್ತೀಚಿನ ಸಿನಿಮಾ 'ವಾರಿಸು'ದಿಂದ ಅಳಿಸಲಾಗಿದ್ದ ದೃಶ್ಯವನ್ನು ಬಿಡುಗಡೆ ಮಾಡಿದೆ. ಈ ಸಿನಿಮಾ ಸದ್ಯ ಪ್ರೈಮ್ ವಿಡಿಯೋ ವೇದಿಕೆಯಲ್ಲಿ ಸ್ಟ್ರೀಮ್ ಆಗುತ್ತಿದೆ.

ಈ ದೃಶ್ಯದಲ್ಲಿ ವಿಜಯ್ ಮತ್ತು ಪ್ರಕಾಶ್ ರಾಜ್ ನಡುವಿನ ಮುಖಾಮುಖಿ ದೃಶ್ಯವಿದೆ. ಪ್ರಕಾಶ್ ರಾಜ್ ಅವರ ಕಚೇರಿಗೆ ವಿಜಯ್ ಹುಡುಕಿಕೊಂಡು ಬರುವ ಮತ್ತು ನಂತರ ನಡೆಯುವ ತುಣುಕು ಇದಾಗಿದೆ.

ವಂಶಿ ಪೈಡಿಪಲ್ಲಿ ನಿರ್ದೇಶನದ ವಾರಿಸು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಜಯಸುಧಾ, ಪ್ರಕಾಶ್ ರಾಜ್, ಶರತ್ ಕುಮಾರ್, ಶಾಮ್, ಯೋಗಿ ಬಾಬು ಮತ್ತು ಸಂಗೀತಾ ಮುಂತಾದವರು ನಟಿಸಿದ್ದಾರೆ. 

ಚಿತ್ರಕ್ಕೆ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ಪಿವಿಪಿ ಸಿನಿಮಾ ಬೆಂಬಲ ನೀಡಿವೆ. ವಾರಿಸು ಸಂಕ್ರಾಂತಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. ಆದರೆ, ವಾಣಿಜ್ಯಿಕವಾಗಿ ಯಶಸ್ವಿಯಾಯಿತು.

ಚಿತ್ರವು ಮೂವರು ಗಂಡು ಮಕ್ಕಳ ಕುಟುಂಬದ ಸುತ್ತ ಸುತ್ತುತ್ತದೆ. ವಿಜಯ್ ಕಿರಿಯ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಘರ್ಷದಿಂದಾಗಿ ದೂರವಾದ ತನ್ನ ಸೋದರರನ್ನು ಮರಳಿ ಮನೆಗೆ ಕರೆತಂದ ನಂತರ, ತನ್ನ ಮನೆಯಲ್ಲಿ ಮುರಿದುಹೋದ ಸಂಬಂಧಗಳನ್ನು ಹೇಗೆ ಸರಿಪಡಿಸುತ್ತಾನೆ ಮತ್ತು ತನ್ನ ಕುಟುಂಬದ ಉದ್ಯಮವನ್ನು ಹೇಗೆ ಉನ್ನತೀಕರಿಸುತ್ತಾನೆ ಎಂಬುದೇ ಚಿತ್ರದ ತಿರುಳು.

ಚಿತ್ರಕ್ಕೆ ಥಮನ್ ಅವರ ಸಂಗೀತ ಮತ್ತು ಕಾರ್ತಿಕ್ ಪಳನಿ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com