ಯಶ್ 'ರಾಖಿ ಭಾಯ್' ಪಾತ್ರವನ್ನು ಕೆಟ್ಟ ಪದದಿಂದ ಟೀಕಿಸಿದ ತೆಲುಗು ನಿರ್ದೇಶಕ; ಅಭಿಮಾನಿಗಳ ಆಕ್ರೋಶ!

ಕೇರ್ ಆಫ್ ಕಂಚರಪಾಲೆಂ ಮತ್ತು ಮಾಡರ್ನ್ ಲವ್ ಹೈದರಾಬಾದ್‌ನಂತಹ ಒಂದೆರೆಡು ಚಿತ್ರಗಳನ್ನು ನಿರ್ದೇಶಿಸಿರುವ ತೆಲುಗು ನಿರ್ದೇಶಕ ವೆಂಕಟೇಶ್ ಮಹಾ ಎಂಬಾತ ಕನ್ನಡದ ಸಾರ್ವಕಾಲಿಕ ಚಿತ್ರ ಕೆಜಿಎಫ್ 2 ಮತ್ತು ಯಶ್‌ನ ರಾಕಿ ಪಾತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಯಶ್-ವೆಂಕಟೇಶ್ ಮಹಾ
ಯಶ್-ವೆಂಕಟೇಶ್ ಮಹಾ
Updated on

ಕೇರ್ ಆಫ್ ಕಂಚರಪಾಲೆಂ ಮತ್ತು ಮಾಡರ್ನ್ ಲವ್ ಹೈದರಾಬಾದ್‌ನಂತಹ ಒಂದೆರೆಡು ಚಿತ್ರಗಳನ್ನು ನಿರ್ದೇಶಿಸಿರುವ ತೆಲುಗು ನಿರ್ದೇಶಕ ವೆಂಕಟೇಶ್ ಮಹಾ ಎಂಬಾತ ಕನ್ನಡದ ಸಾರ್ವಕಾಲಿಕ ಚಿತ್ರ ಕೆಜಿಎಫ್ 2 ಮತ್ತು ಯಶ್‌ನ ರಾಕಿ ಪಾತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಇತರ ಚಲನಚಿತ್ರ ನಿರ್ಮಾಪಕರು- ಇಂದ್ರಗಂಟಿ ಮೋಹನ ಕೃಷ್ಣ, ನಂದಿನಿ ರೆಡ್ಡಿ, ಶಿವ ನಿರ್ವಾಣ, ಮತ್ತು ವಿವೇಕ್ ಆತ್ರೇಯ ಅವರೊಂದಿಗಿನ ಸಂದರ್ಶನದಲ್ಲಿ, ವೆಂಕಟೇಶ್ ಮಹಾ ಪ್ರಶಾಂತ್ ನೀಲ್ ಅವರ ಮ್ಯಾಗ್ನಮ್ ಆಪಸ್ ಕೆಜಿಎಫ್ 2 ನಲ್ಲಿ ತಮಾಷೆ ಮಾಡಿದರು. ಅವರು ನಾಯಕ ಯಶ್ ಅವರ ರಾಕಿ ಭಾಯ್ ಪಾತ್ರವನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ.

ಕೆಜಿಎಫ್ 2 ಬಗ್ಗೆ ವೆಂಕಟೇಶ್ ಮಹಾ ಕೆಟ್ಟದಾಗಿ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗವನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಕನ್ನಡಿಗರು ಮಾತ್ರವಲ್ಲದೆ ತೆಲುಗು ಜನರೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸಂದರ್ಶನದಲ್ಲಿ ನಿರ್ದೇಶಕ ವೆಂಕಟೇಶ್ ಮಹಾ ಸಿನಿಮಾದ ಹೆಸರನ್ನು ಹೇಳಲಿಲ್ಲ. ಆದರೆ ಅವರು ವಿವರಿಸಿರುವ ಕಥೆಯ ಎಳೆಯನ್ನು ಕೇಳಿದರೆ ಕೆಜಿಎಫ್ 2 ಸಿನಿಮಾದ ಬಗ್ಗೆ ಹೇಳುತ್ತಿರುವುದು ಸ್ಪಷ್ಟವಾಗುತ್ತದೆ. ಇದೇ ಸಂದರ್ಶನದಲ್ಲಿ ಭಾಗಿಯಾಗಿದ್ದ ಇತರ ನಿರ್ದೇಶಕರು ಕೂಡ ಅವರ ಮಾತು ಕೇಳಿ ಬಿದ್ದು ಬಿದ್ದು ನಕ್ಕರು. ವೆಂಕಟೇಶ್ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

ಈ ಬಗ್ಗೆ ನೀವು ಸಾರ್ವಜನಿಕವಾಗಿ ಕ್ಷಣೆಯಾಚಿಸಬೇಕು ಇಲ್ಲದಿದ್ದರೆ ನೀವು ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com