ಮಾಜಿ ಪ್ರಿಯಕರನಿಂದ ಚಿತ್ರಹಿಂಸೆ: ಫೋಟೋಗಳ ಮೂಲಕ ನೋವು ತೋಡಿಕೊಂಡ ನಟಿ ಅನಿಕಾ
ನಟಿ ಅನಿಕಾ ವಿಜಯ್ ವಿಕ್ರಮನ್ ತನ್ನ ಮಾಜಿ ಪ್ರಿಯಕರನಿಂದ ಎದುರಿಸಿದ ಕಿರುಕುಳದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಅನಿಕಾ ವಿಜಯ್ ವಿಕ್ರಮನ್ ಹಂಚಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Published: 06th March 2023 03:58 PM | Last Updated: 06th March 2023 04:14 PM | A+A A-

ನಟಿ ಅನಿಕಾ
ನಟಿ ಅನಿಕಾ ವಿಜಯ್ ವಿಕ್ರಮನ್ ತನ್ನ ಮಾಜಿ ಪ್ರಿಯಕರನಿಂದ ಎದುರಿಸಿದ ಕಿರುಕುಳದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಅನಿಕಾ ವಿಜಯ್ ವಿಕ್ರಮನ್ ಹಂಚಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಟಿ ತನ್ನ ದೌರ್ಜನ್ಯದಿಂದ ಕಳೆದುಕೊಂಡಿದ್ದ ಜೀವನವನ್ನು ಮರಳಿ ಪಡೆದಿದ್ದು ನಟನಾ ವೃತ್ತಿಜೀವನಕ್ಕೆ ಮರಳಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಯಶ್ 'ರಾಖಿ ಭಾಯ್' ಪಾತ್ರವನ್ನು ಕೆಟ್ಟ ಪದದಿಂದ ಟೀಕಿಸಿದ ತೆಲುಗು ನಿರ್ದೇಶಕ; ಅಭಿಮಾನಿಗಳ ಆಕ್ರೋಶ!
ಇನ್‌ಸ್ಟಾಗ್ರಾಮ್‌ನಲ್ಲಿ ಅನಿಕಾ ಪೋಸ್ಟ್ ಮಾಡಿದ ಚಿತ್ರಗಳಲ್ಲಿ ಆಕೆಯ ಮುಖವು ತೀವ್ರವಾಗಿ ಗಾಯಗೊಂಡಿದೆ. ಕಣ್ಣಿನ ಸುತ್ತ ರಕ್ತ ಹೆಪ್ಪುಗಟ್ಟಿರುವುದು ಪೋಟೋಗಳಲ್ಲಿ ಸ್ಪಷ್ಟವಾಗಿದೆ. ಈ ಘಟನೆಗಳನ್ನು ಮರೆಯೋಣ ಎಂದರೂ ನನಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ನನಗೆ ಮತ್ತು ನನ್ನ ಕುಟುಂಬವನ್ನು ನಿರಂತರವಾಗಿ ಮಾನಹಾನಿ ಮಾಡಲಾಗುತ್ತಿದೆ. ಕೊನೆಯ ಚಿತ್ರವು ನನ್ನ ಮಾಜಿ ಗೆಳೆಯ ನನ್ನ ಮೇಲಿನ ಹಲ್ಲೆಯದ್ದಾಗಿದೆ ಎಂದು ಬರೆದುಕೊಂಡಿದ್ದಾರೆ.
ತನ್ನ ಮುಖ ಮತ್ತು ಎದೆಯ ಮೇಲೆ ಮೂಗೇಟುಗಳಿದ್ದಲ್ಲದೆ, ತನ್ನ ಗೆಳೆಯನಿಂದ ತೀವ್ರ ಮಾನಸಿಕ ಮತ್ತು ದೈಹಿಕ ಕಿರುಕುಳವನ್ನು ಎದುರಿಸಬೇಕಾಯಿತು ಎಂದು ಅನಿಕಾ ಹೇಳುತ್ತಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವುದಾಗಿಯೂ ನಟ ತಿಳಿಸಿದ್ದಾರೆ. ಏತನ್ಮಧ್ಯೆ, ತನ್ನ ಮಾಜಿ ಗೆಳೆಯ ತಲೆಮರೆಸಿಕೊಂಡಿದ್ದಾನೆ.