ಯಶ್ 'ರಾಖಿ ಭಾಯ್' ಪಾತ್ರವನ್ನು ಕೆಟ್ಟ ಪದದಿಂದ ಟೀಕಿಸಿದ ತೆಲುಗು ನಿರ್ದೇಶಕ; ಅಭಿಮಾನಿಗಳ ಆಕ್ರೋಶ!
ಕೇರ್ ಆಫ್ ಕಂಚರಪಾಲೆಂ ಮತ್ತು ಮಾಡರ್ನ್ ಲವ್ ಹೈದರಾಬಾದ್‌ನಂತಹ ಒಂದೆರೆಡು ಚಿತ್ರಗಳನ್ನು ನಿರ್ದೇಶಿಸಿರುವ ತೆಲುಗು ನಿರ್ದೇಶಕ ವೆಂಕಟೇಶ್ ಮಹಾ ಎಂಬಾತ ಕನ್ನಡದ ಸಾರ್ವಕಾಲಿಕ ಚಿತ್ರ ಕೆಜಿಎಫ್ 2 ಮತ್ತು ಯಶ್‌ನ ರಾಕಿ ಪಾತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Published: 06th March 2023 03:15 PM | Last Updated: 06th March 2023 04:12 PM | A+A A-

ಯಶ್-ವೆಂಕಟೇಶ್ ಮಹಾ
ಕೇರ್ ಆಫ್ ಕಂಚರಪಾಲೆಂ ಮತ್ತು ಮಾಡರ್ನ್ ಲವ್ ಹೈದರಾಬಾದ್‌ನಂತಹ ಒಂದೆರೆಡು ಚಿತ್ರಗಳನ್ನು ನಿರ್ದೇಶಿಸಿರುವ ತೆಲುಗು ನಿರ್ದೇಶಕ ವೆಂಕಟೇಶ್ ಮಹಾ ಎಂಬಾತ ಕನ್ನಡದ ಸಾರ್ವಕಾಲಿಕ ಚಿತ್ರ ಕೆಜಿಎಫ್ 2 ಮತ್ತು ಯಶ್‌ನ ರಾಕಿ ಪಾತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಇತರ ಚಲನಚಿತ್ರ ನಿರ್ಮಾಪಕರು- ಇಂದ್ರಗಂಟಿ ಮೋಹನ ಕೃಷ್ಣ, ನಂದಿನಿ ರೆಡ್ಡಿ, ಶಿವ ನಿರ್ವಾಣ, ಮತ್ತು ವಿವೇಕ್ ಆತ್ರೇಯ ಅವರೊಂದಿಗಿನ ಸಂದರ್ಶನದಲ್ಲಿ, ವೆಂಕಟೇಶ್ ಮಹಾ ಪ್ರಶಾಂತ್ ನೀಲ್ ಅವರ ಮ್ಯಾಗ್ನಮ್ ಆಪಸ್ ಕೆಜಿಎಫ್ 2 ನಲ್ಲಿ ತಮಾಷೆ ಮಾಡಿದರು. ಅವರು ನಾಯಕ ಯಶ್ ಅವರ ರಾಕಿ ಭಾಯ್ ಪಾತ್ರವನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ.
ಇದನ್ನೂ ಓದಿ: ಮಾಜಿ ಪ್ರಿಯಕರನಿಂದ ಚಿತ್ರಹಿಂಸೆ: ಫೋಟೋಗಳ ಮೂಲಕ ನೋವು ತೋಡಿಕೊಂಡ ನಟಿ ಅನಿಕಾ
ಕೆಜಿಎಫ್ 2 ಬಗ್ಗೆ ವೆಂಕಟೇಶ್ ಮಹಾ ಕೆಟ್ಟದಾಗಿ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗವನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಕನ್ನಡಿಗರು ಮಾತ್ರವಲ್ಲದೆ ತೆಲುಗು ಜನರೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
@RGVzoomin sir respond and give a slap to someone who r laughing with ur tweet please..@RGVzoomin sir respond@ssrajamouli sir @tarak9999 sir next #ntr31 #prashanthneel garithi kakunda #VenkateshMaha r @nandureddy4u tho better sir theyandi..@TheNameIsYash
— prakash (@prakashnanda101) March 6, 2023
Miru kuda pic.twitter.com/XLVWazdupQ
ಈ ಸಂದರ್ಶನದಲ್ಲಿ ನಿರ್ದೇಶಕ ವೆಂಕಟೇಶ್ ಮಹಾ ಸಿನಿಮಾದ ಹೆಸರನ್ನು ಹೇಳಲಿಲ್ಲ. ಆದರೆ ಅವರು ವಿವರಿಸಿರುವ ಕಥೆಯ ಎಳೆಯನ್ನು ಕೇಳಿದರೆ ಕೆಜಿಎಫ್ 2 ಸಿನಿಮಾದ ಬಗ್ಗೆ ಹೇಳುತ್ತಿರುವುದು ಸ್ಪಷ್ಟವಾಗುತ್ತದೆ. ಇದೇ ಸಂದರ್ಶನದಲ್ಲಿ ಭಾಗಿಯಾಗಿದ್ದ ಇತರ ನಿರ್ದೇಶಕರು ಕೂಡ ಅವರ ಮಾತು ಕೇಳಿ ಬಿದ್ದು ಬಿದ್ದು ನಕ್ಕರು. ವೆಂಕಟೇಶ್ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.
RIP @mahaisnotanoun ಮತ್ತೆ ಹುಟ್ಟಿ ಬರಬೇಡ!
— Rocky sagar _09 (@Rockysagar091) March 6, 2023
Every BOSS Fan Should Praticepate In Today's Negative From 7PM#YashBOSS #Yash19 #KGF2 #YashBOSS #rockybhai #jaiyashboss #YashBOSS pic.twitter.com/FmsLvjzkE8
ಈ ಬಗ್ಗೆ ನೀವು ಸಾರ್ವಜನಿಕವಾಗಿ ಕ್ಷಣೆಯಾಚಿಸಬೇಕು ಇಲ್ಲದಿದ್ದರೆ ನೀವು ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.