'ಕೆಂಡದ ಸೆರಗು' ಮೂಲಕ ಸ್ಯಾಂಡಲ್'ವುಡ್'ಗೆ ಡಬ್ಲ್ಯೂಡಬ್ಲ್ಯೂಇ ವರ್ಲ್ಡ್ ಚಾಂಪಿಯನ್ ದಿ ಗ್ರೇಟ್ ಖಲಿ ಎಂಟ್ರಿ

'ಕೆಂಡದ ಸೆರಗು' ಚಿತ್ರದ ಮೂಲಕ ಡಬ್ಲ್ಯೂಡಬ್ಲ್ಯೂಇ ವರ್ಲ್ಡ್ ಚಾಂಪಿಯನ್ 'ದಿ ಗ್ರೇಟ್ ಖಲಿ' ಅವರು ಸ್ಯಾಂಡಲ್'ವುಡ್'ಗೆ ಎಂಟ್ರಿ ಕೊಡುತ್ತಿದ್ದಾರೆ.
'ದಿ ಗ್ರೇಟ್ ಖಲಿ' ದಲೀಪ್ ಸಿಂಗ್ ರಾಣಾ
'ದಿ ಗ್ರೇಟ್ ಖಲಿ' ದಲೀಪ್ ಸಿಂಗ್ ರಾಣಾ

'ಕೆಂಡದ ಸೆರಗು' ಚಿತ್ರದ ಮೂಲಕ ಡಬ್ಲ್ಯೂಡಬ್ಲ್ಯೂಇ ವರ್ಲ್ಡ್ ಚಾಂಪಿಯನ್ ದಿ ಗ್ರೇಟ್ ಖಲಿ ಅವರು ಸ್ಯಾಂಡಲ್'ವುಡ್'ಗೆ ಎಂಟ್ರಿ ಕೊಡುತ್ತಿದ್ದಾರೆ.

ಕೆಂಡದ ಸೆರಗು ಚಿತ್ರವನ್ನು ರಾಕಿ ಸೋಮ್ಲಿ ಅವರು ನಿರ್ದೇಶನ ಮಾಡುತ್ತಿದ್ದು, ಚಿತ್ರವು ಕುಸ್ತಿ ಕ್ರೀಡೆ ಸುತ್ತ ಹೆಣೆಯಲಾದ ಕಥೆಯನ್ನು ಒಳಗೊಂಡಿದೆ. ಚಿತ್ರವು ಮೂಲ ಕಾದಂಬರಿಯನ್ನು ಆಧರಿಸಿದೆ.

ಚಿತ್ರದಲ್ಲಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಭೂಮಿ ಶೆಟ್ಟಿ ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರಕ್ಕೆ 'ದಿ ಗ್ರೇಟ್ ಖಲಿ' ದಲೀಪ್ ಸಿಂಗ್ ರಾಣಾ ಅವರು ಎಂಟ್ರಿ ಕೊಡುತ್ತಿದ್ದಾರೆಂದು ತಿಳಿದುಬಂದಿದೆ.

ಚಿತ್ರದಲ್ಲಿ ಮೂಲ ಕುಸ್ತಿಪಟುವನ್ನು ಕರೆತರಲು ಉತ್ಸುಕರಾಗಿದ್ದೆವು. ಈ ವೇಳೆ ಡಬ್ಲ್ಯೂಡಬ್ಲ್ಯೂಇ ವರ್ಲ್ಡ್ ಚಾಂಪಿಯನ್ ಅನ್ನು ಕರೆತರಲು ನಿರ್ಧರಿಸಿದ್ದೆವು ಎಂದು ನಿರ್ದೇಶಕರು ಹೇಳಿದ್ದಾರೆ.

<strong>'ದಿ ಗ್ರೇಟ್ ಖಲಿ' ದಲೀಪ್ ಸಿಂಗ್ ರಾಣಾ, ರಾಕಿ ಸೋಮ್ಲಿ</strong>
'ದಿ ಗ್ರೇಟ್ ಖಲಿ' ದಲೀಪ್ ಸಿಂಗ್ ರಾಣಾ, ರಾಕಿ ಸೋಮ್ಲಿ

ಕುಸ್ತಿಪಟುವಿನ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಕಲಾವಿದನಿಗಾಗಿ ಹುಡುಕಾಟ ನಡೆಸುತ್ತಿದ್ದೆ. ಆ ಪಾತ್ರದಲ್ಲಿ ಕೆಲವು ನಟರನ್ನು ಕೂಡ ಕಲ್ಪಿಸಿಕೊಂಡೆ. ಆದರೆ, ಪಾತ್ರಕ್ಕೆ ಮೂಲ ಕುಸ್ತಿಪಟು ಬೇಕೆಂಬುದನ್ನು ಅರಿತುಕೊಂಡೆ. ಹೀಗಾಗಿ ಕುಸ್ತಿಪಟು ಮತ್ತು ನಟ ಎರಡೂ ಆಗಿರುವ ಖಲಿಯನ್ನು ಕರೆತರಲು ನಿರ್ಧರಿಸಿ, ಅವರನ್ನು ಸಂಪರ್ಕಿಸಿದ್ದೆ ಎಂದು ತಿಳಿಸಿದ್ದಾರೆ.

ಚಿತ್ರದಲ್ಲಿ ಖಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಅವರ ಪಾತ್ರದ ಚಿತ್ರೀಕರಣ ಆರಂಭವಾಗಲಿದೆ. ಕುಸ್ತಿಯ ಚಿತ್ರೀಕರಣ ನಡೆಸಲು ಸಿದ್ಧತೆ ನಡೆಸಿದ್ದೇವೆಂದು ರಾಕಿ ತಿಳಿಸಿದ್ದಾರೆ.

ಕೆಂಡದ ಸೆರಗು ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಚಿತ್ರಕ್ಕೆ ವೀರೇಶ್ ಖಂಬ್ಳಿ ಅವರ ಸಂಗೀತ ಮತ್ತು ವಿಪಿನ್ ವಿ ರಾಜ್ ಅವರ ಛಾಯಾಗ್ರಹಣವಿದೆ .ಶ್ರೀ ಮಟ್ಟು ಟಾಕೀಸ್ ಮತ್ತು ಎಸ್‌ಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ ಕೆಂಡದ ಸೆರಗು ಚಿತ್ರದಲ್ಲಿ ಸಿಂಧು ಲೋಕನಾಥ್ ಲೇಖಕಿಯಾಗಿ ಅತಿಥಿ ಪಾತ್ರದಲ್ಲಿ ನಟಿಸಿದ್ದು, ಯಶ್ ಶೆಟ್ಟಿ, ವರದನ್, ಶೋಭಿತಾ, ಪ್ರತಿಮಾ, ಬಸು ಹಿರೇಮಠ್ ಮತ್ತು ಹರೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ದಿ ಗ್ರೇಟ್ ಖಲಿ ಈಗಾಗಲೇ ಹಾಲಿವುಡ್ ಮತ್ತು ಬಾಲಿವುಡ್ ಚಲನಚಿತ್ರಗಳಾದ ದಿ ಲಾಂಗೆಸ್ಟ್ ಯಾರ್ಡ್, ಗೆಟ್ ಸ್ಮಾರ್ಟ್ ಮತ್ತು ಕುಸ್ತಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com