'ನಮ್ ನಾಣಿ ಮದ್ವೆ ಪ್ರಸಂಗ' ಬಿಡುಗಡೆಗೂ ಮುನ್ನವೇ 'ನೆಟ್‌ವರ್ಕ್' ಸಿನಿಮಾ ಘೋಷಿಸಿದ ಹೇಮಂತ್ ಹೆಗಡೆ

ಹೇಮಂತ್ ಹೆಗಡೆ ತಮ್ಮ ಮುಂಬರುವ ಕಾಮಿಡಿ ಎಂಟರ್‌ಟೈನರ್ 'ನಮ್ ನಾಣಿ ಮದ್ವೆ ಪ್ರಸಂಗ' ಸಿನಿಮಾದ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದರೊಂದಿಗೆ ಸೋಮವಾರ ತಮ್ಮ ಮುಂದಿನ ನೆಟ್‌ವರ್ಕ್ ಎಂಬ ಶೀರ್ಷಿಕೆಯ ಸಿನಿಮಾವನ್ನು ಘೋಷಿಸಿದ್ದಾರೆ. 
ನೆಟ್‌ವರ್ಕ್
ನೆಟ್‌ವರ್ಕ್
Updated on

ಹೇಮಂತ್ ಹೆಗಡೆ ತಮ್ಮ ಮುಂಬರುವ ಕಾಮಿಡಿ ಎಂಟರ್‌ಟೈನರ್ 'ನಮ್ ನಾಣಿ ಮದ್ವೆ ಪ್ರಸಂಗ' ಸಿನಿಮಾದ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದರೊಂದಿಗೆ ಸೋಮವಾರ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸಿದ್ದಾರೆ. ನೆಟ್‌ವರ್ಕ್ ಎಂಬ ಶೀರ್ಷಿಕೆಯ ಈ ಸಿನಿಮಾವು, ಮೊಬೈಲ್ ಫೋನ್‌ಗಳು ಮತ್ತು ಗ್ಯಾಜೆಟ್‌ಗಳ ದುಷ್ಪರಿಣಾಮಗಳು ಮತ್ತು ಸಂಬಂಧಗಳು ಹೇಗೆ ದುರ್ಬಲವಾಗುತ್ತಿವೆ ಎಂಬುದನ್ನು ಒಳಗೊಂಡಿರುತ್ತದೆ. 

'ವರ್ಚುವಲ್ ಆಗಿ ನಾವು ಸುಮಾರು 500 ಸ್ನೇಹಿತರನ್ನು ಹೊಂದಿದ್ದೇವೆ. ಆದರೆ, ನಮಗೆ ಅಗತ್ಯವಿರುವಾಗ ಯಾರೂ ಮುಂದೆ ಬರುವುದಿಲ್ಲ. ಇಂತವುಗಳೇ ನೆಟ್‌ವರ್ಕ್‌ನಲ್ಲಿ ನಾನು ಅನ್ವೇಷಿಸುವ ಕೆಲವು ಪ್ರಮುಖ ಅಂಶಗಳಾಗಿವೆ' ಎಂದು ಹೇಮಂತ್ ಹೇಳುತ್ತಾರೆ.

ಆದಾಗ್ಯೂ, ಈ ರೀತಿಯ ಕಥೆಯನ್ನೊಳಗೊಂಡ ಹಲವಾರು ಸಿನಿಮಾಗಳು ಈಗಾಗಲೇ ಬಂದಿವೆ. ಇವುಗಳ ನಡುವೆ ನಿಮ್ಮ ಸಿನಿಮಾ ಹೇಗೆ ಭಿನ್ನ ಎಂದು ಕೇಳಿದ್ದಕ್ಕೆ ಉತ್ತರಿಸುವ ಅವರು, 'ಸಿನಿಮಾದ ಕಥೆಯು ಎಲ್ಲರಿಗೂ ಪರಿಚಿತ ಎಂದಾದರೂ, ನಾನು ಈ ವಿಷಯವನ್ನು ಮೇಲ್ನೋಟದಲ್ಲಷ್ಟೇ ನೋಡುವುದಿಲ್ಲ. ಬದಲಿಗೆ, ಐದು ಕುಟುಂಬಗಳ ಕಥೆಯ ಮೂಲಕ, ನನ್ನ ಚಿತ್ರವು ಸಮಸ್ಯೆಯ ಆಳವನ್ನು ಅನ್ವೇಷಿಸುತ್ತದೆ' ಎಂದು ಅವರು ವಿವರಿಸುತ್ತಾರೆ.

ಶರತ್ ಲೋಹಿತಾಶ್ವ, ಕೆ.ಎಂ.ಚೈತನ್ಯ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಮತ್ತು ಶ್ರೀಕಾಂತ್ ಹೆಬ್ಳೀಕರ್ ಅವರ ದೃಷ್ಟಿ ತಂಡ ಈ ಸಿನಿಮಾಗಾಗಿ ಒಟ್ಟಿಗೆ ಕೆಲಸ ಮಾಡಲಿದೆ.

ಹೇಮಂತ್ ಪ್ರಕಾರ, 'ನೆಟ್‌ವರ್ಕ್ ಮೂಲಭೂತವಾಗಿ ಹಾಸ್ಯವಾಗಿರುತ್ತದೆ ಮತ್ತು ತಮ್ಮದೇ ಆದ ಸಿಗ್ನೇಚರ್ ಶೈಲಿಯನ್ನು ಹೊಂದಿರುತ್ತದೆ. ಆದರೆ, ಚಿತ್ರದಲ್ಲಿ ಗಂಭೀರವಾದ ಸಂದೇಶವಿದೆ, ಅದು ಪರಿಹಾರದೊಂದಿಗೆ ಮುಂಚೂಣಿಗೆ ಬರುತ್ತದೆ' ಎನ್ನುತ್ತಾರೆ.

ಕಥೆ ಮತ್ತು ಚಿತ್ರಕಥೆ ಬರೆದಿರುವ ಹೇಮಂತ್ ಹೆಗಡೆ ನಾಯಕನಾಗಿಯೂ ನಟಿಸಿದ್ದಾರೆ. ನೆಟ್‌ವರ್ಕ್ ಅನ್ನು ಗಲೋರ್ ವಿಷನ್ ಕ್ರಾಫ್ಟ್ಸ್ ಪ್ರಸ್ತುತಪಡಿಸುತ್ತಿದೆ ಮತ್ತು ಪ್ರಭಂಜನ್ ರಾವ್ ಮತ್ತು ತಂಡ ನಿರ್ಮಿಸಿದೆ.

ತಾರಾಗಣದಲ್ಲಿ ಸಾಕ್ಷಿ ಮೇಘನಾ, ಶ್ರೇಯಾ ವಸಂತ್ ಮತ್ತು ಗಿರೀಶ್ ಶಿವ ಪ್ರಮುಖ ಪಾತ್ರಗಳಲ್ಲಿದ್ದಾರೆ. 

'ನಾವು ಮೇ 15 ರಿಂದ ನೆಟ್‌ವರ್ಕ್‌ಗಾಗಿ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೇವೆ ಮತ್ತು ನಾವು ಸದ್ಯ ಸ್ಥಳಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದೇವೆ' ಎಂದು ಹೇಮಂತ್ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com