ಎರಡು ಪಾರ್ಟ್ ಗಳಲ್ಲಿ ಬರಲಿದೆ ಶಿವರಾಜಕುಮಾರ್ ಅಭಿನಯದ 'ಘೋಸ್ಟ್'!

ಆರ್ ಜೆ ಶ್ರೀನಿ ನಿರ್ದೇಶನದಲ್ಲಿ ಶಿವರಾಜಕುಮಾರ್ ಅಭಿನಯಿಸುತ್ತಿರುವ ‘ಘೋಸ್ಟ್’ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ವಿಶೇಷವೆಂದರೆ, ಕಥೆ ಒಂದೇ ಚಿತ್ರಕ್ಕೆ ಮುಗಿಯುವುದಿಲ್ಲ.
ಘೋಸ್ಟ್ ಸಿನಿಮಾ ಪೋಸ್ಟರ್
ಘೋಸ್ಟ್ ಸಿನಿಮಾ ಪೋಸ್ಟರ್
Updated on

ಆರ್ ಜೆ ಶ್ರೀನಿ ನಿರ್ದೇಶನದಲ್ಲಿ ಶಿವರಾಜಕುಮಾರ್ ಅಭಿನಯಿಸುತ್ತಿರುವ ‘ಘೋಸ್ಟ್’ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ವಿಶೇಷವೆಂದರೆ, ಕಥೆ ಒಂದೇ ಚಿತ್ರಕ್ಕೆ ಮುಗಿಯುವುದಿಲ್ಲ. ಎರಡನೆಯ ಭಾಗದಲ್ಲೂ ಮುಂದುವರಿಯಲಿದೆ. ಶಿವರಾಜಕುಮಾರ್, ಅನುಪಮ್ ಖೇರ್, ಮಲಯಾಳಂ ನಟ ಜಯರಾಮ್ ತಾರಾಗಣದಲ್ಲಿದ್ದಾರೆ.

ನಿರ್ದೇಶಕ ಶ್ರೀನಿ ಈಗಾಗಲೇ ಮುಂದಿನ ಭಾಗಕ್ಕಾಗಿ ಕೆಲಸ ಮಾಡುತ್ತಿದ್ದಾರೆ.  ಬೃಹತ್ ತಾರಾಬಳಗವು ದೊಡ್ಡ ಮಟ್ಟದಲ್ಲಿ ಒಟ್ಟಾಗಿ ಬರುವಂತೆ ನೋಡಿಕೊಳ್ಳುವ ಕೆಲಸಗಳು ನಡೆಯುತ್ತಿವೆ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿದ್ದಾರೆ.

ಚಿತ್ರವು ಫ್ರಾಂಚೈಸ್ ಆಗುವ ಸಾಮರ್ಥ್ಯ ಹೊಂದಿದೆ ಎಂದು ನಿರ್ದೇಶಕ ಶ್ರೀನಿ ಹೇಳಿದ್ದಾರೆ.  ಇದೀಗ ನನ್ನ ಗಮನವು ಘೋಸ್ಟ್ ಮೊದಲ ಭಾಗವನ್ನು ಪೂರ್ಣಗೊಳಿಸುವುದರ ಮೇಲಿದೆ. ನಾನು ಇದನ್ನು ಮಾಡಿದ ನಂತರ, ನಾನು ಮುಂದಿನ ಸ್ಕ್ರಿಪ್ಟ್  ಪೂರ್ಣಗೊಳಿಸುತ್ತೇನೆ. ಹಿಂದೆಂದೂ ನೋಡಿರದ ಪಾತ್ರದಲ್ಲಿ ಶಿವರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.

ಘೋಸ್ಟ್ ಸಿನಿಮಾದಲ್ಲಿ ಪ್ರಶಾಂತ್ ನಾರಾಯಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ಮತ್ತೊಂದು ಪ್ರಮುಖ ಪಾತ್ರಕ್ಕಾಗಿ ನಿರ್ದೇಶಕರು ತಮಿಳು ನಟ ವಿಜಯ್ ಸೇತುಪತಿ ಅವರನ್ನು ಸಂಪರ್ಕಿಸುತ್ತಾರೆ ಎಂಬ ಮಾಹಿತಿಯೂ ಕೇಳಿ ಬಂದಿದೆ.  ವಿಜಯ್ ಸೇತುಪತಿಯನ್ನು ಮಹತ್ವದ ಪಾತ್ರಕ್ಕಾಗಿ ಕರೆತರಲು ನಾವು ಉತ್ಸುಕರಾಗಿದ್ದೇವೆ ಮತ್ತು ಕೆಲವು ಸಮಯದಿಂದ ಚರ್ಚೆಗಳು ನಡೆಯುತ್ತಿವೆ, ಆದರೆ ಅಧಿಕೃತ ಮಾಹಿತಿ  ಬರಬೇಕಿದೆ ಎಂದು ಶ್ರೀನಿ ಹೇಳಿದ್ದಾರೆ.

ಘೋಸ್ಟ್ ಸಿನಿಮಾದಲ್ಲಿ ಶಿವರಾಜಕುಮಾರ್‌ಗೆ  ನಾಯಕಿ ಇಲ್ಲ, ಆದರೆ, ಚಿತ್ರದಲ್ಲಿ ಅರ್ಚನಾ ಜೋಯಿಸ್ ಪತ್ರಕರ್ತೆಯಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com