ಕಿರುತೆರೆ ನಿರ್ದೇಶಕ ವಿನು ಬಳಂಜ ನಿರ್ದೇಶನದ 'ಬೇರ' ಸಿನಿಮಾ ಮೇ ತಿಂಗಳಲ್ಲಿ ಬಿಡುಗಡೆ

ಹೆಸರಾಂತ ಕಿರುತೆರೆ ನಿರ್ದೇಶಕ ವಿನು ಬಳಂಜ ಅವರು 'ಬೇರ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಲಿದ್ದಾರೆ. ಚಿತ್ರದ ಶೂಟಿಂಗ್ ಮುಗಿದಿದ್ದು, ಮೇ ಅಂತ್ಯದಲ್ಲಿ ಬಿಡುಗಡೆಗೆ ಎದುರು ನೋಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ
ಬೇರ ಸಿನಿಮಾದ ಟೀಸರ್ ಬಿಡುಗಡೆ ಸಮಾರಂಭ
ಬೇರ ಸಿನಿಮಾದ ಟೀಸರ್ ಬಿಡುಗಡೆ ಸಮಾರಂಭ

ಹೆಸರಾಂತ ಕಿರುತೆರೆ ನಿರ್ದೇಶಕ ವಿನು ಬಳಂಜ ಅವರು 'ಬೇರ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಲಿದ್ದಾರೆ. ಚಿತ್ರದ ಶೂಟಿಂಗ್ ಮುಗಿದಿದ್ದು, ಮೇ ಅಂತ್ಯದಲ್ಲಿ ಬಿಡುಗಡೆಗೆ ಎದುರು ನೋಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ

ಟೀಸರ್ ಬಿಡುಗಡೆಯ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ನಿರ್ದೇಶಕರು, ಬೆಳ್ಳಿತೆರೆಗೆ ಕಾಲಿಡುವ ತಮ್ಮ ಬಹುಕಾಲದ ಕನಸು ಅಂತಿಮವಾಗಿ ಬೇರ ಸಿನಿಮಾ ಮೂಲಕ ನಿಜವಾಗಿದೆ ಎನ್ನುತ್ತಾರೆ. ವೈಯುಕ್ತಿಕ ಕಾರಣಗಳಿಂದ ನಾಲ್ಕು ವರ್ಷಗಳ ಕಾಲ ಕಿರುತೆರೆಯಿಂದ ದೂರ ಉಳಿದು ಮತ್ತೆ ಬಂದಿರುವ ಬಗ್ಗೆ ಥ್ರಿಲ್ ಆಗಿರುವ ವಿನು, ಬೇರ ಹೇಗೆ ಹುಟ್ಟಿಕೊಂಡಿತು ಎಂಬುದನ್ನೂ ಬಹಿರಂಗಪಡಿಸಿದ್ದಾರೆ.

ರಿಷಬ್ ಶೆಟ್ಟಿ ಅಭಿನಯದ ನಾಥೂರಾಮ್ ಚಿತ್ರವನ್ನು ನಿರ್ದೇಶಿಸಬೇಕಾಗಿದ್ದರೂ, ಕೆಲ ಕಾರಣಗಳಿಂದ ಚಿತ್ರವು ಪ್ರಾರಂಭವಾಗಲಿಲ್ಲ. ಆದಾಗ್ಯೂ, ಬೇರ ಬಗ್ಗೆ ಮಾತನಾಡಿದ ನಿರ್ದೇಶಕರು, ತಾವು ಮ್ಯೂಸಿಯಂಗೆ ಭೇಟಿ ನೀಡಿದ ನಂತರ ಕಥೆ ಹುಟ್ಟಿತು ಮತ್ತು ಚಿತ್ರದ ನಿರ್ಮಾಪಕ ದಿವಾಕರ ದಾಸ ನೇರಲಾಜೆ ಅವರು ಚಲನಚಿತ್ರ ಮಾಡಲು ನನ್ನನ್ನು ಪ್ರೇರೇಪಿಸಿದರು. 'ಬೇರ ಎಂಬುದು ತುಳು ಪದ, ಇದರ ಅರ್ಥ ವ್ಯಾಪಾರ. ನಾಯಕರಾಗಲು ಕೆಲವು ವ್ಯಕ್ತಿಗಳು ಮೆಟ್ಟಿಲನ್ನು ಹತ್ತುವ ವೇಳೆ ಹೇಗೆ ಇತರೆ ಕೆಲವು ಅಮಾಯಕರು ಶೋಷಿತರಾಗುತ್ತಾರೆ ಎಂಬುದು ಕಥೆ. ಪ್ರತಿ ತಾಯ್ನಾಡಿನ ಮಕ್ಕಳು ಇತರರ ಸಲುವಾಗಿ ಸಂತ್ರಸ್ತರಾಗಿ ಮಾರ್ಪಟ್ಟಿದ್ದಾರೆ ಎಂದು ಅವರು ಉಲ್ಲೇಖಿಸುತ್ತಾರೆ.

ಎಸ್‌ಎಲ್‌ವಿ ಕಲರ್ಸ್ ಬ್ಯಾನರ್‌ನ ಬೆಂಬಲದೊಂದಿಗೆ, ಬೇರ ಸಿನಿಮಾದಲ್ಲಿ ದತ್ತಣ್ಣ, ಸುಮನ್, ಯಶ್ ಶೆಟ್ಟಿ, ಹರ್ಷಿಕಾ ಪೂಣಚ್ಚ, ಅಶ್ವಿನ್ ಹಾಸನ್, ಚಿತ್ಕಲಾ ಬಿರಾದ, ಮಂಜುನಾಥ್ ಹೆಗಡೆ, ಮತ್ತು ರಾಕೇಶ್ ಮೈಯಾ ಮುಂತಾದವರು ನಟಿಸಿದ್ದಾರೆ. 
ರಾಜಶೇಖರ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಬೇರ ನಿಜ ಜೀವನದ ಘಟನೆಗಳನ್ನು ಆಧರಿಸಿದೆ: ಹರ್ಷಿಕಾ ಪೂಣಚ್ಚ

<strong>ಹರ್ಷಿಕಾ ಪೂಣಚ್ಚ</strong>
ಹರ್ಷಿಕಾ ಪೂಣಚ್ಚ

ಕೊನೆಯ ಬಾರಿಗೆ 'ಕಾಸಿನ ಸರ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಹರ್ಷಿಕಾ ಪೂಣಚ್ಚ, ಬೇರದಲ್ಲಿನ ತಮ್ಮ ಪಾತ್ರದ ಬಗ್ಗೆ ಅಷ್ಟೇ ಥ್ರಿಲ್ ಆಗಿದ್ದಾರೆ.

'ನಾನು ನಿರ್ದೇಶಕ ವಿನು ಬಳಂಜ ಅವರ ಬಗ್ಗೆ ಕೇಳಿದ್ದೇನೆ ಮತ್ತು ಅವರೊಂದಿಗೆ ಕೆಲಸ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ. ಬೇರ ಸಿನಿಮಾದಲ್ಲಿನ ನನ್ನ ಪಾತ್ರವು ನನ್ನನ್ನು ವಿಭಿನ್ನ ಆಯಾಮಗಳಲ್ಲಿ ಇರಿಸುತ್ತದೆ. ಇದು ನಿಜ ಜೀವನದ ಘಟನೆಗಳನ್ನು ಆಧರಿಸಿದೆ ಮತ್ತು ಗಂಭೀರವಾದ ವಿಷಯದೊಂದಿಗೆ ಚಿತ್ರ ಸಾಗುತ್ತದೆ' ಎನ್ನುತ್ತಾರೆ ನಟಿ.

ನಟಿಯು ಈ ಚಿತ್ರಕ್ಕಾಗಿ 12 ದಿನಗಳ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. 'ಇಂದು ಕಥೆಗಳು ಆದ್ಯತೆಯನ್ನು ಪಡೆಯುತ್ತಿವೆ ಮತ್ತು ಪ್ರತಿಯೊಂದು ಪಾತ್ರವೂ ಮುಖ್ಯವಾಗಿದೆ. ಅಂತಹ ವಿಷಯಗಳ ಭಾಗವಾಗಲು ನನಗೆ ಸಂತೋಷವಾಗಿದೆ ಮತ್ತು ಅವುಗಳಲ್ಲೊಂದು ಬೇರ' ಎನ್ನುತ್ತಾರೆ.

ಈಮಧ್ಯೆ, ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟಿ, ತಮ್ಮ ಚಿತ್ರದ ಪ್ರಚಾರ ಮತ್ತು ಕರ್ನಾಟಕ ಚುನಾವಣಾ ಪ್ರಚಾರದ ನಡುವೆ ಜಗ್ಗಾಡುತ್ತಾ, 'ನಾನು ಸದ್ಯ ಚಿಕ್ಕಬಳ್ಳಾಪುರದಲ್ಲಿದ್ದೇನೆ ಮತ್ತು ರೋಡ್ ಶೋಗಳಲ್ಲಿ ಭಾಗವಹಿಸುತ್ತಿದ್ದೇನೆ' ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com