ಪ್ರತಿಭಟನೆ ಭೀತಿ: ಹಲವೆಡೆ ಶೋ ರದ್ದು, ಕೊಚ್ಚಿಯಲ್ಲಿ ಒಂದು ಥಿಯೇಟರ್ ನಲ್ಲಿ ಮಾತ್ರ ಚಿತ್ರ ಪ್ರದರ್ಶನ!

ಇಸ್ಲಾಂ ಮತಾಂತರ ಕುರಿತ ಕಥಾಹಂದರದ ದಿ ಕೇರಳ ಸ್ಟೋರಿ ಚಿತ್ರ ಇಂದು ಬಿಡುಗಡೆಯಾಗಿದ್ದು, ಮುಸ್ಲಿಂ ಸಂಘಟನೆಗಳ ಪ್ರತಿಭಟನೆ ಭೀತಿ ಹಿನ್ನಲೆಯಲ್ಲಿ ಕೇರಳದಲ್ಲಿ ಸಾಕಷ್ಟ ಚಿತ್ರಮಂದಿರಗಳು ಒಪ್ಪಂದದ ಹೊರತಾಗಿಯೂ ಪ್ರದರ್ಶನ ರದ್ದುಗೊಳಿಸಿವೆ.
ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್
ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್

ಕೊಚ್ಚಿ: ಇಸ್ಲಾಂ ಮತಾಂತರ ಕುರಿತ ಕಥಾಹಂದರದ ದಿ ಕೇರಳ ಸ್ಟೋರಿ ಚಿತ್ರ ಇಂದು ಬಿಡುಗಡೆಯಾಗಿದ್ದು, ಮುಸ್ಲಿಂ ಸಂಘಟನೆಗಳ ಪ್ರತಿಭಟನೆ ಭೀತಿ ಹಿನ್ನಲೆಯಲ್ಲಿ ಕೇರಳದಲ್ಲಿ ಸಾಕಷ್ಟ ಚಿತ್ರಮಂದಿರಗಳು ಒಪ್ಪಂದದ ಹೊರತಾಗಿಯೂ ಪ್ರದರ್ಶನ ರದ್ದುಗೊಳಿಸಿವೆ.

ಕೊಚ್ಚಿ ನಗರದ ಎರಡು ಚಿತ್ರಮಂದಿರಗಳು ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗ ಬೇಕಿದ್ದ ಚಿತ್ರ 'ದಿ ಕೇರಳ ಸ್ಟೋರಿ' ಪ್ರದರ್ಶನವನ್ನು ರದ್ದುಗೊಳಿಸಿವೆ. ಲುಲು ಮಾಲ್ ಮತ್ತು ಒಬೆರಾನ್ ಮಾಲ್‌ನಲ್ಲಿರುವ ಪಿವಿಆರ್ ಚಿತ್ರಮಂದಿರಗಳು ಮತ್ತು ಸೆಂಟರ್ ಸ್ಕ್ವೇರ್ ಮಾಲ್‌ನಲ್ಲಿರುವ ಸಿನೆಪೊಲಿಸ್ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿವೆ. ಆದರೆ ಚಿತ್ರ ಪ್ರದರರ್ಶನ ರದ್ದಿಗೆ ಆಡಳಿತ ಮಂಡಳಿಗಳು ಯಾವುದೇ ಕಾರಣಗಳನ್ನು ನೀಡಿಲ್ಲ.

ಕೊಚ್ಚಿ ನಗರದಲ್ಲಿ ಕೇವಲ ಒಂದು ಥಿಯೇಟರ್ 'ಶೆಣೈಸ್' ನಲ್ಲಿ ಮಾತ್ರ ಚಿತ್ರ ಪ್ರದರ್ಶನವಾಗುತ್ತಿದೆ. ಇದು ಬೆಳಿಗ್ಗೆ 10 ಗಂಟೆಯಿಂದ ಚಲನಚಿತ್ರವನ್ನು ಪ್ರದರ್ಶನ ನಡೆಯುತ್ತಿದೆ ಎನ್ನಲಾಗಿದೆ. 

ಈ ಹಿಂದೆ, ಕೇರಳದಲ್ಲಿ 50 ಸ್ಕ್ರೀನ್‌ಗಳಲ್ಲಿ ಚಿತ್ರವನ್ನು ಪ್ರದರ್ಶಿಸಲು ವಿತರಕರೊಂದಿಗೆ ಥಿಯೇಟರ್‌ಗಳು ಒಪ್ಪಂದ ಮಾಡಿಕೊಂಡಿದ್ದವು. ಆದರೆ ಇದೀಗ ಬಿಡುಗಡೆ ದಿನಾಂಕದ ವೇಳೆಗೆ ಅನೇಕರು ಬಿಡುಗಡೆಗೆ ಮುನ್ನವೇ ಒಪ್ಪಂದದಿಂದ ಹಿಂದೆ ಸರಿದಿದ್ದಾರೆ. ನಿರ್ಮಾಪಕರು ಮತ್ತು ವಿತರಕರ ನಡುವಿನ ನಿರಂತರ ಸಂಧಾನಗ ಬಳಿಕ ಇದೀಗ ಕೇವಲ 17 ಸ್ಕ್ರೀನ್ ಗಳಲ್ಲಿ ಚಿತ್ರವನ್ನು ಪ್ರದರ್ಶಿಸಲು ಒಪ್ಪಿಗೆ ನೀಡಲಾಗಿದೆ. ಆದರೆ, ಎಷ್ಟು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಂಡಿಗೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ಈ ಮಧ್ಯೆ, ಎರ್ನಾಕುಲಂ ಜಿಲ್ಲೆಯಲ್ಲಿ ಕೇವಲ ಮೂರು ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಪ್ರದರ್ಶಿಸಲಾಗುತ್ತಿದೆ. ಕೊಚ್ಚಿ ನಗರದ ಶೆಣೈಸ್, ಕರಿಯಾಡ್‌ನ ಕಾರ್ನಿವಲ್ ಚಿತ್ರಮಂದಿರಗಳು ಮತ್ತು ಪಿರವಂನ ದರ್ಶನಾ ಸಿನಿಮಾ ಕಾಂಪ್ಲೆಕ್ಸ್‌ನಲ್ಲಿ 'ದಿ ಕೇರಳ ಸ್ಟೋರಿ' ಪ್ರದರ್ಶನಗೊಳ್ಳುತ್ತಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com