The Kerala Story: ಮಾಜಿ ಸಿಎಂ ಸೀನ್ ಸೇರಿ 10 ದೃಶ್ಯಕ್ಕೆ ಕತ್ತರಿ, ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಎ ಸರ್ಟಿಫಿಕೇಟ್; ಸೆನ್ಸಾರ್ ಮಂಡಳಿ ಅಸ್ತು
ತೀವ್ರ ವಿವಾದಕ್ಕೆ ಕಾರಣವಾಗಿರುವ ದಿ ಕೇರಳ ಸ್ಟೋರಿ ಚಿತ್ರಕ್ಕೆ ಕೊನೆಗೂ ಸೆನ್ಸಾರ್ ಮಂಡಳಿ ಬಿಡುಗಡೆಗೆ ಅಸ್ತು ಎಂದಿದ್ದು, ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿದೆ.
Published: 03rd May 2023 05:05 PM | Last Updated: 03rd May 2023 05:41 PM | A+A A-

ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್
ಮುಂಬೈ: ತೀವ್ರ ವಿವಾದಕ್ಕೆ ಕಾರಣವಾಗಿರುವ ದಿ ಕೇರಳ ಸ್ಟೋರಿ ಚಿತ್ರಕ್ಕೆ ಕೊನೆಗೂ ಸೆನ್ಸಾರ್ ಮಂಡಳಿ ಬಿಡುಗಡೆಗೆ ಅಸ್ತು ಎಂದಿದ್ದು, ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿದೆ.
ಹೌದು.. ಕೇವಲ ಟ್ರೇಲರ್‌ನಿಂದಲೇ ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿರುವ ‘ಲವ್ ಜಿಹಾದ್’ ಕಥೆ ಆಧಾರಿತ ಹಿಂದಿ ಸಿನಿಮಾ ‘ದಿ ಕೇರಳ ಸ್ಟೋರಿ’ಗೆ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ (ಸಿಬಿಎಫ್‌ಸಿ) ಕೆಲವೊಂದು ಷರತ್ತುಗಳೊಂದಿಗೆ ಮಂಗಳವಾರ ‘ಎ’ ಪ್ರಮಾಣಪತ್ರ ನೀಡಿದೆ. ಮೇ 5 ರಂದು ಬಿಡುಗಡೆ ಕಾಣಲಿರುವ ಸಿನಿಮಾದ ವೀಕ್ಷಿಸಿದ ಸೆನ್ಸಾರ್ ಮಂಡಳಿ, ಚಿತ್ರದಲ್ಲಿನ ಮಾಜಿ ಸಿಎಂ ದೃಶ್ಯ ಸೇರಿದಂತೆ 10 ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿದೆ. ಕೆಲವೊಂದು ಸಂಭಾಷಣೆಗಳಿಗೆ ಕತ್ತರಿ ಪ್ರಯೋಗ ಮಾಡುವಂತೆ ಚಿತ್ರ ತಂಡಕ್ಕೆ ತಿಳಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ದಿ ಕೇರಳ ಸ್ಟೋರಿ ಚಿತ್ರಕ್ಕೆ ತಡೆ ನೀಡಲು ಸುಪ್ರೀಂ ನಕಾರಾ, ಹೈಕೋರ್ಟ್ ಮೋರೆ ಹೋಗುವಂತೆ ಸಲಹೆ!
ವಿವಾದ ಏಕೆ?
'ದಿ ಕೇರಳ ಸ್ಟೋರಿ' ಸಿನಿಮಾದಲ್ಲಿ 32 ಸಾವಿರ ಹಿಂದೂ ಹೆಣ್ಣು ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡಿ ಮದುವೆ ಮಾಡಿರೋದು, ಅಂಥ ಹೆಣ್ಣು ಮಕ್ಕಳನ್ನು ಐಸಿಸ್ ಉಗ್ರ ಸಂಘಟನೆಗೆ ಸೇರಿಸಲಾಗಿದೆ ಎನ್ನೋದನ್ನು ತೋರಿಸಲಾಗಿತ್ತು. ಇದರಿಂದಲೇ ವಿವಾದ ಸೃಷ್ಟಿ ಆಗಿದೆ.
ವಿಫುಲ್ ಶಾ ನಿರ್ಮಾಣ ಮಾಡಿರುವ ಈ ಸಿನಿಮಾಕ್ಕೆ ಸುದೀಪ್ತೋ ಸೇನ್ ನಿರ್ದೇಶನ ಮಾಡಿದ್ದಾರೆ. ಸಂಘ ಪರಿವಾರದ ಅಜೆಂಡಾವನ್ನು ಈ ಸಿನಿಮಾ ಪ್ರತಿಪಾದಿಸುತ್ತಿದೆ ಎಂದು ಕೂಡ ಹೇಳಲಾಗುತ್ತಿದೆ. ಅದಾ ಶರ್ಮಾ, ಯೋಗಿತಾ ಬಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೇ 5ರಂದು ಈ ಚಿತ್ರ ರಿಲೀಸ್ ಆಗಲಿದೆಯಂತೆ.
ಇದನ್ನೂ ಓದಿ: ದಿ ಕೇರಳ ಸ್ಟೋರಿಯಲ್ಲಿನ ಅಂಶಗಳನ್ನು ಸಾಬೀತುಪಡಿಸಿದರೆ ಬಹುಮಾನ: ಕೇರಳ ಲಾಯರ್ ಘೋಷಣೆ
ಜೆಎನ್‌ಯು ವಿಶೇಷ ಪ್ರದರ್ಶನ
ಈ ನಡುವೆ ಸಿನಿಮಾವನ್ನು ದಿಲ್ಲಿಯ ಜವಹರ್‌ಲಾಲ್ ವಿವಿಯಲ್ಲಿ(ಜೆಎನ್‌ಯು) ಮಂಗಳವಾರ ಪ್ರದರ್ಶನ ಮಾಡಲಾಗಿದೆ. ಎಬಿವಿಪಿ ಸಂಘಟನೆ ಚಿತ್ರ ಪ್ರದರ್ಶನ ಆಯೋಜನೆ ಮಾಡಿತ್ತು. ವಿವಿಯಲ್ಲಿ ವಿವಾದಿತ ಚಿತ್ರ ಪ್ರದರ್ಶನ ಮಾಡಿದ ಕ್ರಮ ಖಂಡಿಸಿ ಎಡಪಕ್ಷ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿವೆ.